ಫೆಬ್ರವರಿ 5, 2011

ಮುಸುಕಿನೊಳಗಿನ ಗುದ್ದಾಟ ಸಾಕು ಮಾಡಿ...

ಅದಾದರೂ ಎಷ್ಟೊಂದು ಕರಾಳ ನೆನಪಲ್ಲವೋ ಹುಡುಗಾ.. ಅದೇನೋ ನಿನ್ನ ಬಿರುನುಡಿಗೆ ನೋವಾಗಿ "ನೀನೂ ಬೇಡ, ನಿನ್ನ ಪ್ರೀತಿನೂ ಬೇಡ" ಅಂತ ಎದ್ದು ಬಂದಿದ್ದೆ.ಮನೆಗೆ ಬಂದವಳೇ ದಿಂಬಿನೊಳಗೆ ಮುಖ ಹುದುಗಿಸಿಟ್ಟು ತಾಸುಗಟ್ಟಲೆ ಹನಿ ಹರಿಸಿದ್ದೆ.ನಿಂಗೆ ನನ್ನ ಮೇಲೆ ಚೂರೂ ಪ್ರೀತಿನೇ ಇಲ್ಲಾ ಅಂದುಕ್ಕೊಳ್ಳುತ್ತಲೇ ಇನ್ನು ಜೋರಾಗಿ ಕಣ್ಣಿರಾಗುತ್ತಿದ್ದೆ.ಕನ್ನಡಿಲಿ ಅತ್ತು ಅತ್ತು ಕೆಂಪಗಾಗಿರುವ ಕೆನ್ನೆ, ಊದಿರುವ ಕಂಗಳನ್ನು ನೋಡಿದಾಗ..ಮತ್ತೆ ಮುಸು ಮುಸು ಅಳು..! ಅರೆರೇ..! ಕನ್ನಡಿಲಿ ನೀನು..?! ಹಾ..ಹುಡುಗಾ ನಿನ್ನ ಕಂಡಂತಾಗಿ, ಭ್ರಮಿಸಿಕ್ಕೊಂಡು.. ನಮ್ಮೊಳಗಿನ ಆ ಮಧುರ ನೆನಪುಗಳೆಲ್ಲ ನೆನಪಾಗಿ ನಾಚಿ, ಮತ್ತದೇ ದಿಂಬನ್ನು ಎದೆಗವಚಿಕ್ಕೊಂಡು ಬಿಟ್ಟಿದ್ದೆ. ಪ್ರೀತಿಲಿರೋ ಮುನಿಸಿಗೂ ಅರ್ಥ ಹುಡುಕುವ ಬಗೆ ಇದೇನಾ..ಎಂದುಕ್ಕೊಂಡವಳಲ್ಲಿ  ಮತ್ತೆ ಅಚ್ಚರಿ..ಹೂ ನಗೆ..

ಗೆಳೆಯಾ ಅವತ್ತೊಂದೆ ದಿನ ನಾ ನಿನ್ನ ಮೇಲೆ ಮುನಿಸಿಕ್ಕೊಂಡಿದ್ದು, ನಿನ್ನ ಮಾತಿಗೆ ನೋವಾಗಿ ಬೇಜಾರಾಗಿ ಎದ್ದು ಬಂದಿದ್ದು.ಆದರೆ ಮರುಕ್ಷಣವೇ ನಾ ನಿನ್ನ ಪ್ರೀತಿಯ ಹುಡುಗಿಯೇ ಕಣೋ..ಆ ಸಣ್ಣ misunderstanding ನಮ್ಮನ್ನು ಎಷ್ಟು ದಿನ ಅಗಲುವಂತೆ ಮಾಡಿತು ನೋಡಿದೆಯಾ..?ಅವತ್ತಿಂದ ಇವತ್ತಿನವರೆಗೂ ನಿನ್ನೊಂದು ಕರೆಗೆ, ಮೆಸೇಜಿಗೆ ಜಾತಕದಂತೆ ಕಾತರಿಸುತ್ತಿದ್ದೇನೆ..ಬಸ್ಸಿನ ಹಿಂದುದ್ದಕ್ಕೂ ನಿನ್ನ ಬೈಕಿಗಾಗಿ ಹುಡುಕಾಡುತ್ತೇನೆ..ಆಂಜನೇಯ ಗುಡಿಯಲ್ಲಿ ನನ್ನ ಹಿಂದೆ ಸುತ್ತುತ್ತಾ ದೇವರಲ್ಲಿ ಅದೇನೇನೋ ಕೇಳಿಕ್ಕೊಳ್ಳುತ್ತಿದ್ದ ನಿನ್ನ ನೆನೆದು ಕನವರಿಸುತ್ತೇನೆ..ಅಲ್ಲೆಲ್ಲೂ ನೀನು ಕಾಣಸಿಗದಾಗ ನಿರಾಸೆ ಮನದ ತುಂಬಾ.

ಸಾಕು ಮಾಡು ಗೆಳೆಯಾ ಈ
ಮುಸುಕಿನೊಳಗಿನ ಗುದ್ದಾಟವನ್ನು, ಈ ವಿರಹವನ್ನು ನನ್ನಿಂದಂತೂ ತಳಲಾಗುತ್ತಿಲ್ಲ.ನಾನು ಗೆಲ್ಲೋದಿಲ್ಲ, ನೀನು ಸೋಲೋದಿಲ್ಲ ಅಂದಮೇಲೆ ಮತ್ಯಾಕೆ ಹೋರಾಟ..? ನನಗಂತೂ ಈಗೋ ಕಣೋ..ತಪ್ಪು ನನ್ನದೇ ಇದ್ದರೂ, ನೀನೆ ಒಪ್ಪಿ,ಅಪ್ಪಿ ಮುದ್ದು ಮಾಡಬೇಕೆಂಬ ಬಯಕೆ..ನನಗೆ ಗೊತ್ತು ಹುಡುಗಾ..ನಿನಗೂ ನನ್ನ ಬಿಟ್ಟಿರಲಾಗದು ಎಂದು..ಆದರೂ ಸಣ್ಣದೊಂದು ಡ್ರಾಮಾ..ಮೆಚ್ಚಿಕ್ಕೊಂಡೆ ಬಿಡು..!ನನ್ನೆದೆಯ ತುಂಬಾ ಹಾಲು ಬೆಳದಿಂಗಳ ಸುರಿಸಬೇಕಾಗಿರುವ,ಬಾಳಚಂದಿರ ನೀನೇ ಮೋಡದೊಳಗೆ ಅವಿತು ಮೌನಿಯಾಗಿಬಿಟ್ಟರೆ, ನನ್ನಯ ಜಗದ ತುಂಬಾ ಕಗ್ಗತ್ತಲೇ ಅಲ್ಲವೇನೋ..

ನಾಳೆ ಬೆಳಿಗ್ಗೆ ಅದೇ ನಮ್ಮ ಆಂಜನೇಯ ಟೆಂಪಲ್ ನಲ್ಲಿ ನಿನಗಾಗಿ ಕಾಯ್ತಾ ಇರ್ತೇನೆ.ಬರ್ತಿಯಲ್ವಾ..?ನಿನ್ನಿಂದ ಪುಟ್ಟಿ,ಮುದ್ದು,ಚಿನ್ನು..ಅಂತೆಲ್ಲ ಕರೆಸಿಕ್ಕೊಂಡು ಬಹಳ ದಿನವಾಗಿ ಬಿಟ್ಟಿದೆ..ನಾಳೆ ಬಂದು ಇಷ್ಟು ದಿನದ ವಿರಹಕ್ಕೆ ಮಂಗಳ ಹಾಡ್ತಿಯಲ್ವ..ನಿನಗಾಗಿ ಕಾಯ್ತಾ ಇರ್ತೇನೆ..ಬಂದು ಬಿಡು ಪುಟ್ಟು..

ನಿನ್ನ ಪ್ರೀತಿಯ ಹುಡುಗಿ..
ಸುಶೀ..

8 ಕಾಮೆಂಟ್‌ಗಳು:

 1. ಪ್ರೀತಿಸೂದನ್ನ ಮರೆತ ಹೃದಯಕ್ಕೆ... ಪ್ರೀತಿಸುಲು ಹೂಸ ಹುರುಪು ತರುವಂತಿದೆ ನಿಮ್ಮ ಈ ಪುಟ ಮಾತುಗಳು.... ಆದರೆ ಯಾಕೆ ಅಂ ತಿಳಿದಿಲ್ಲ ನಿಮ್ಮ ಆ ಮಾತುಗಳು ಎದೆಗೂಡಲ್ಲಿ.. ಹಾಗೆ ಕುಳಿತು ಬಿಟ್ಟಿವೆ ಸುಮ್ಮನೆ...

  ಇಂತಿ ನಿಮ್ಮ ಪ್ರೀತಿಯ....
  prabhi

  ಪ್ರತ್ಯುತ್ತರಅಳಿಸಿ
 2. ho very very nice madma...

  ಭಾವ ತುಂಬಿದ ಹೃದಯದಲ್ಲಿ
  ಒಮ್ಮೆ ಬಂದು ಕೂಗಿ ಕರೆಯೊ...||

  ಪ್ರತ್ಯುತ್ತರಅಳಿಸಿ
 3. ಪ್ರತಿಕ್ರಿಯಿಸಿ ಹರಸಿದ ಎಲ್ಲರಿಗೂ ಧನ್ಯವಾದಗಳು... :)

  ಪ್ರತ್ಯುತ್ತರಅಳಿಸಿ
 4. ಪ್ರೇಮಾವಿರಹ ಪತ್ರ ಎಷ್ಟು ಸೊಗಸು ಅಲ್ಲವೇ . ಮನಸಲ್ಲಿ ಅಳಿದದ್ದು ಉಳಿದದ್ದು ಎಲ್ಲವನ್ನು ಹೊರಗೆ ಹಾಕಿದಾಗ ಸಿಗುವ ಸಮಾಧಾನ ಆಹಾ ಅದನ್ನು ಹೇಳಲು ಆಗೊಲ್ಲ... ಸುಂದರ ಪದಗಳು ಸುಂದರ ಭಾವ. ಬೇಸಿಗೆಯಲ್ಲಿ ತಣ್ಣಗಿರುವ ಮಜ್ಜಿಗೆ ಕುಡಿದ ಅನುಭವ. ಸೊಗಸಾಗಿದೆ ಪಿ ಎಸ್

  ಪ್ರತ್ಯುತ್ತರಅಳಿಸಿ