ಫೆಬ್ರವರಿ 15, 2011

Happy valentines day....

ಬಹಳಷ್ಟು ಬಾರಿ ನನಗೇ ಗೊಂದಲವಾಗುವುದಿದೆ..ಅದ್ಹೇಗೆ ನೀ ಈ ಪಾಟಿ ಪಟ್ಟು ಬಿಡದೆ ಮನಸ್ಸೊಳಗೆ ಗಟ್ಟಿ ಕುಳಿತುಬಿಟ್ಟಿದ್ದಿ..ಎಲ್ಲೊ ಇದ್ದವ ಹೇಳದೆ ಕೇಳದೆ ಈ ಬದುಕು ಭಾವಗೊಳೊಡನೆ ಬೆರೆತು ಹೋದೆ..?ಹಿಡಿಯಷ್ಟಿರುವ ಈ ಮನಸ್ಸೊಳಗೆ ಹೇಗೆ ಜಾಗವು ನಿನ್ನದೇ ಮಾಡಿಕ್ಕೊಂಡೆ?ತುಂಬಾ ಸಲ ಮಾತೇ ಇರುವುದಿಲ್ಲ ..ಮಾತಿಗಿಂತಲೂ ಮೌನ ಅಪ್ಯಾಯಮಾನವಗಿರುತ್ತದೆ..ಏನೆಂದರೆ ಏನೂ ಇಲ್ಲಾ...ನಿನ್ನ ಹೆಸರ ಜಪಿಸೋ ನನ್ನ ಎದೆಬಡಿತದ ಸದ್ದೊಂದನ್ನು ಬಿಟ್ಟು..
ನಿನ್ನೆದೆಗೆ ಕಿವಿಯಾನಿಸಿ, ನಿನ್ನೆದೆ ಬಡಿತವೂ ನನ್ನ ಹೆಸರ ಪಿಸುಗುಡುತ್ತಾ ಎಂದು ಪರೀಕ್ಷಿಸಿಕ್ಕೊಂಡವಳಲ್ಲಿ ಮತ್ತೇ ಅಚ್ಚರಿ..! ಅ ಸದ್ದ, ಮತ್ತೇ ಮತ್ತೇ ಪುನಃ ಪುನಃ ಕೇಳಲು ಹಾತೊರೆಯುತ್ತೇನೆ..ಹಾ, ಹುಡುಗಾ ಇದೊಂಥರ ಹುಚ್ಚು..ನೀನೆ ಹೇಳುವಂತೆ ನೀನೆಂದರೆನೇ ನನಗೆ ಹುಚ್ಚು ಹುಚ್ಚು.. ಅಷ್ಟೂ ನೀ ನಂಗೆ ಇಷ್ಟ ಗೊತ್ತ ಹುಡುಗಾ..?


ನಿನಗಿಷ್ಟ ಅಂತಾನೆ ನಿನ್ನಿಷ್ಟದ ಪಾನಿಪುರಿ ತಿನ್ನುತ್ತೇನೆ..ನಿನ್ನ ಟಿಫನ್ ಲೇಟಾಯ್ತು ಅಂದ್ರೆ ಮರುದಿನ ನಾನೂ ಟಿಫನ್ ಲೇಟಾಗ್ ಮಾಡ್ತೀನಿ..ನಿನ್ನಿಷ್ಟದ ಹೀರೋ ನಂಗೂ ಇಷ್ಟ ಮತ್ತೇ..ನೀ ಇಷ್ಟ ಪಡೋ ಸಲ್ವಾರ್ ನ ತುಸು ಜಾಸ್ತಿಯೇ ಹಾಕುತ್ತೇನೆ..ನಾನೆನಾರ ಒಳ್ಳೆ ಕೆಲಸ ಮಾಡಿದ್ರೆ ಗುಡ್ ಅನ್ತಿಯಲ್ಲ.. ಆ ನಿನ್ನ ಶಭಾಶ್ ಗಿರಿಗೊಸ್ಕೊರಾನೆ ಅಂಥದ್ದೆನಾರ ಮಾಡ್ತಾ ಇರೋ ಚಟ ..ಒಂದು ವಿಷಯದಲ್ಲಿ ಕ್ಷಮಿಸ್ ಬಿಡೋ ಹುಡುಗಾ..ನಂಗೆ ಏನಾದ್ರು ಹೆಲ್ತ್ ಪ್ರಾಬ್ಲಮ್ ಆದ್ರೆ ನಿಂಗೆ ಮೊದಲಿಗೆ ಹೇಳಲ್ಲ ನಾನು...ತುಸು ಜೋರು ಎನಿಸಿದ ಮೇಲೇನೆ ಹೇಳ್ತೇನೆ...ಯಾಕೆಂದ್ರೆ ಆಗ ನಿನ್ನಿಂದ ಇನ್ನು ಸ್ವಲ್ಪ ಜಾಸ್ತಿ ಮುದ್ದು ಮಾಡಿಸ್ಕೊಬಹುದಲ್ಲ...ನಿನ್ನಿಂದ ಮುದ್ದಿಸಿಕ್ಕೊಳ್ಳುವ ಚಪಲ ಅಷ್ಟೇ ಅದು....!
ಹೌದು ಹುಡುಗಾ ಹುಚ್ಚು ಹುಡುಗಿ ನಾನು...

ಕತ್ತಲೆಂದರೆ ಭಯ ಪಡುವ, ಪಕ್ಕದ ಮನೆ ಹುಡುಗನ ನೋಟಕ್ಕೆ ಬೆದರುವ, ಅಪ್ಪನ ಕಣ್ಣೋಟಕ್ಕೆ ಅಮ್ಮನಿಂದೆ ಅವಿತುಕೂರುವ ನನಿಗೆ ಧೈರ್ಯದ ಪಾಠ ಹೇಳಿದವ ನೀನು..ಆದರೂ ನಮ್ಮಿಬ್ಬರ ಜಾತಿ,ಮದುವೆ ಅಂತೆಲ್ಲ ವಿಷಯ ಬಂದಾಗ ನೀನೂ ಹೆದರುತ್ತಿಯಲ್ಲೋ ಪುಕ್ಕಲ..!! ಆಗೆಲ್ಲ ನಾನು ಅದೆಷ್ಟು ಇಳಿದುಹೊಗುತ್ತೇನೆ ಗೊತ್ತೆನೂ ಪುಟ್ಟಾ..?ಪ್ರೀತಿಗೆ ಜಾತಿಯಿಲ್ಲ ಎಂದುಕೊಂಡೇ ಪ್ರೀತಿಸಿದ್ದಲ್ಲವಾ ನಾವು?ಹಾಗೆ ಮದುವೆಗೂ ಜಾತಿಯಿಲ್ಲ-ಬೇಡ...! ನಿನ್ನೊಳಗೆ ನೀನಾಗಿ...ಬದುಕಿನುದ್ದಕ್ಕೂ ನನ್ನ ಕರಕೊಂಡು ಬಿಡೋ...ಭಯ ಬೀಳಿಸಬೇಡ ಪ್ಲೀಸ್...
Belated happy valentines day....

ನಿನ್ನ ಹುಡುಗಿ....


16 ಕಾಮೆಂಟ್‌ಗಳು:

 1. ಹಾಯ್,
  ಸುಷ್ಮಾ ಜಿ ನಿಮ್ಮ ಲವ್ ಚೀಟಿ
  ತುಂಭಾ ತುಂಭಾನೆ ಚೆನ್ನಾಗಿದೆ. ನಿಮ್ಮ ಭಾವ ತುಂಬಿದ ಮತ್ತು ಲವಲವಿಕೆಯ ಬರಹ
  ಮುದ್ದು ಪ್ರೀತಿಯಷ್ಟೆ ಮುದ್ದಾಗಿದೆ.ಇಂಥದೊಂದು article so rare.!! ಥ್ಯಾಂಕ್ಯೂ ವೇರಿ ಮಚ್.
  ``ನಂಗೆ ಏನಾದ್ರು ಹೆಲ್ತ್ ಪ್ರಾಬ್ಲಮ್ ಆದ್ರೆ ನಿಂಗೆ ಮೊದಲಿಗೆ ಹೇಳಲ್ಲ ನಾನು...ತುಸು ಜೋರು ಎನಿಸಿದ ಮೇಲೇನೆ ಹೇಳ್ತೇನೆ...ಯಾಕೆಂದ್ರೆ ಆಗ ನಿನ್ನಿಂದ ಇನ್ನು ಸ್ವಲ್ಪ ಜಾಸ್ತಿ ಮುದ್ದು ಮಾಡಿಸ್ಕೊಬಹುದಲ್ಲ...ನಿನ್ನಿಂದ ಮುದ್ದಿಸಿಕ್ಕೊಳ್ಳುವ ಚಪಲ ಅಷ್ಟೇ ಅದು....!
  ಹೌದು ಹುಡುಗಾ ಹುಚ್ಚು ಹುಡುಗಿ ನಾನು...`` ಅನ್ನು ಸಾಲುಗಳು ನಂಗೆ ಯಾಕೋ ತುಂಭಾನೆ ಹಿಡಿಸಿದವು.ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 2. ಹಾಯ್ ಕನಸು....ಕಾಮೆಂಟಿಸಿದ್ದಕ್ಕೆ ತುಂಬಾ ಧನ್ಯವಾದಗಳು.. ನಿಮ್ಮ ಬ್ಲಾಗ್ ನೋಡಿದೆ ನಿಮ್ಮೆಲ್ಲಾ ಬರಹಗಳೂ ಇಷ್ಟವಾದವು.. tanx a lot...

  ಪ್ರತ್ಯುತ್ತರಅಳಿಸಿ
 3. ಹಾಯ್ ಸಾವಿರ ಕನಸು ಎಂಬ ಬ್ಲಾಗ್ ಮೂಲಕ ಇಲ್ಲಿಗೆ ಬಂದೆ. ಇದು ಸಾವಿರದ ಒಂದನೆಯ ಕನಸ್ಸಿನಂತಿದೆ :-) ಈಗಷ್ಟೇ ಸುರು ಮಾಡಿದ ಹಾಗಿದೆ ಬ್ಲಾಗ್. ಇನ್ನೊಮ್ಮೆ ಬಂದಾಗ ಇನ್ನಷ್ಟು ವಿಷಯಗಳು ಇಲ್ಲಿರಲಿ. ಆಲ್ ದಿ ಬೆಸ್ಟ್

  ಪ್ರತ್ಯುತ್ತರಅಳಿಸಿ
 4. ಅನಂತ್ ಸರ್ n ಭುವಿ ..,ಧನ್ಯವಾದಗಳು..
  chukkichandira: ಈಗಷ್ಟೇ ಶುರು ಮಾಡಿದ್ದೇನೆ ಬ್ಲಾಗ್..ನಿಮ್ಮೆಲ್ಲರ ಸಹಕಾರ ಇರಲಿ..tanq
  ಕೃಷ್ಣ ಸರ್..ನಾನು ಕ್ಲಿಕ್ಕಿಸಿದ್ದಲ್ಲ...ಅಂತರ್ಜಾಲದಲ್ಲಿ ಸಿಕ್ಕಿತು..ನಿಮ್ಮ ಚಿತ್ರಗಳನ್ನ ನೋಡಿದ್ದೇನೆ..ಬಹ್ಸು ಸುಂದರ ಛಾಯಾಚಿತ್ರಗಳು

  ಪ್ರತ್ಯುತ್ತರಅಳಿಸಿ
 5. ಸುಂದರ ಭಾವನೆಗಳ ತುಂಬಿದ ಪತ್ರ ಇಷ್ಟವಾಯ್ತು:)

  ಪ್ರತ್ಯುತ್ತರಅಳಿಸಿ
 6. ಪ್ರತಿಕ್ರಿಯಿಸಿ ಹರಸಿದ ಎಲ್ಲರಿಗೂ ಧನ್ಯವಾದಗಳು... :)

  ಪ್ರತ್ಯುತ್ತರಅಳಿಸಿ
 7. ಪ್ರೀತಿ ಪ್ರೇಮ ಒಂದು ನಾಣ್ಯದ ಎರಡು ಮುಖಗಳು. ಎರಡು ಮುಖವನ್ನು ಪರಿಚಯಿಸುವ ಈ ಲೇಖನ ಪ್ರೇಮಿಗಳ ದಿನಕ್ಕೆ ಸರಿಯಾದ ಉಡುಗೊರೆ. ಪ್ರೇಮಿಗಳಿಗೆ ವರ್ಷವೆಲ್ಲ ದಿನವಾದರೂ ಅದಕ್ಕೊಂದು ದಿನ ಅಂತ ಇರೋದರಿಂದ ಅದನ್ನು ಆಚರಿಸುವ ಮನ ಸುಂದರವಾಗಿದೆ. ಒಳ್ಳೆಯ ಪತ್ರ ಪಿ ಎಸ್

  ಪ್ರತ್ಯುತ್ತರಅಳಿಸಿ