ಮಾರ್ಚ್ 22, 2011

ಅಂದು- ಇಂದೂ..

ಅಂದು ನನ್ನವರನ್ನು ತೊರೆದು 
ಇವರೇ ನನ್ನವರೆಂದು
ಇವರಿಂದೆ ಬಂದಾಗ
ಭದ್ರ ಸೂರಿಗೆ, ಹಿಡಿ ಪ್ರೀತಿಗೆ
ಕಾಯ್ವ ಜಾತಕದಂತೆ ನನ್ನ ಕನಸಿತ್ತು
ಮನದಲ್ಲಿ ಸಾವಿರ ದೀಪಗಳ ಬೆಳಕಿತ್ತು..

ಇಲ್ಲಿ ಇವರ ಅವರಿವರ 
ಬೇಕು ಬೇಡಗಳಿಗೆ ಕಿವಿಯಾಗಿ
ಕೈಯಾಗುವಾಗ ಉರಿವ
ಒಲೆಯೊಳಗೆ ಕನಸುಗಳೂ ಉರಿಯುತ್ತಿತ್ತು
ಇಷ್ಟರೊಳಗೆ ನನ್ನೊಡಲು ತುಂಬತೊಡಗಿತ್ತು
ಮನಪಟಲದ ತುಂಬೀಗ ನನ್ನ
ಕೂಸಿನ ನಾಳೆಗಳಿತ್ತು...

ಇವೊತ್ತು ನನ್ನ ಕೂಸಿನ ನಾಳೆಗಳು..!
ತಡಕಾಡಿದರೂ ಸಿಗುತ್ತಿಲ್ಲ
ಆ ಸಾವಿರ ದೀಪಗಳ ಬೆಳಕು,
ಕಾಣುವುದು...
ಆಸ್ಪತ್ರೆ ಬಿಲ್ಲಿನಿಂದ ಕೆಂಡವಾದ
ನನ್ನ ಕೂಸಿನ ಕಂಗಳು
ಮತ್ತು ಬೂದಿಯಾದ
ನಾ ಬಯಸಿದ್ದ ಆ ಹಿಡಿ ಪ್ರೀತಿ..!!

20 ಕಾಮೆಂಟ್‌ಗಳು:

 1. ಹಿಡಿ ಪ್ರೀತಿ ಹೆಚ್ಚಾಗುತ್ತಿರಲಿ...
  ಚೆನ್ನಾಗಿದೆ ಕವನ....

  ಪ್ರತ್ಯುತ್ತರಅಳಿಸಿ
 2. hey..neenu 'akka' yendiddu yeshtu manassannu tattitu andre...munche ninna parichaya maadikodu, matte namma bhashe kaliyuvante!!! contact me at sumven@gmail.com..

  chendada hiditha ide bhasheya mele.. all the best 'sweet and simple girl'!

  ಪ್ರತ್ಯುತ್ತರಅಳಿಸಿ
 3. ಭಾವನೆಗಳನ್ನು..
  ಶಬ್ಧಗಳಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ...ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 4. kavana thumba chenad ide... hage summane manasannu taki bidutte... yochanege hacchutte...

  ಪ್ರತ್ಯುತ್ತರಅಳಿಸಿ
 5. sushmaravare, kaala pakvavaadante hidiye hedigeyaaguvudu."taalidavanu baaliyaanu".kavana bhaavapoornavaagide.vandanegalu

  ಪ್ರತ್ಯುತ್ತರಅಳಿಸಿ
 6. ಬಹಳ ಚೆನ್ನಾಗಿದೆ... ಅಂದು ಸಿಕ್ಕ ಆ ಹಿಡಿ ಪ್ರೀತಿ, ಎಂದೆಂದೂ ಶಾಶ್ವತವಾಗಿರಲಿ.

  ಪ್ರತ್ಯುತ್ತರಅಳಿಸಿ
 7. ಭಾವನೆಗಳ ಬಾನಿಗೆ ಎಲ್ಲೇ ಇಲ್ಲಾ...! ತುಂಬಾ ಚನ್ನಾಗಿ ಮೂಡಿಬಂದಿದೆ ಕವನ

  ಪ್ರತ್ಯುತ್ತರಅಳಿಸಿ
 8. idu pratiyobba hennina manastithi.. naavu bayasuva aa hidi preeti ashtu sulabhavagi siguvudilla.. nimma kavanagalallina bhaavane bahala teevravaagide!

  ಪ್ರತ್ಯುತ್ತರಅಳಿಸಿ
 9. ಪ್ರತಿಕ್ರಿಯಿಸಿ ಹರಸಿದ ಎಲ್ಲರಿಗೂ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 10. ಅಕ್ಷರಗಳನ್ನು ಹಿಡಿದು ಪದಗಳನ್ನು ಜಾಲಿಸಿ ಭಾವ ಹಿಡಿದಿಡುವ ಕವನಕ್ಕೆ ನನ್ನ ಒಂದು ನಮನಗಳು. ವಿಷಾದ ಹೊರಗೆ ತರುವ ಧಾಟಿ ಸೊಗಸಿದೆ. ಅಂದಿಗಿಂತ ಇಂದು ಇಂದಿಗಿಂತ ಅಂದು ಎರಡು ರೈಲಿನ ಹಳಿಗಳು! ಸುಂದರ ಕವಿತೆ ಪಿ ಎಸ್

  ಪ್ರತ್ಯುತ್ತರಅಳಿಸಿ