ಸೆಪ್ಟೆಂಬರ್ 13, 2011

ಮಾತು..

ಮಾತು..
ಕೆಲವೊಮ್ಮೆ ಭೋರ್ಗರೆದು ಸುರಿಯುತ್ತದೆ
ಗುಡುಗು ಮಿಂಚು ಒಟ್ಟೊಟ್ಟಿಗೆ ಮೇಳೈಸುತ್ತದೆ
ಒಳಗಿನ ನಿಟ್ಟುಸಿರು, ಆಳದ ಬೆಂಕಿ
ಹೋರಚೆಲ್ಲಲ್ಪಡುತ್ತದೆ...ಪ್ರವಾಹವಾಗುತ್ತದೆ...
ಕಡೆಗೆ ಎಲ್ಲಾ ಕಚ್ಚಿಸಿ,ಕೊಚ್ಚಿಸಿಕ್ಕೊಂಡು
ಶಾಂತನಾದೆನೆಂದು ಬೀಗುತ್ತದೆ..

ಮಗದೊಮ್ಮೆ..
ಮಾತು ಮೃದು- ಮಧುರ..
ತುಂತುರಿನ ಸೋನೆಯಂತೆ
ಮಿಂದಷ್ಟು ಮೀಯಬೇಕಂಬಂತೆ
ಹಿತವಾಗಿ ಮಿತವಾಗಿ ಅಪ್ಯಾಯಮಾನವಾಗುತ್ತದೆ
ತಂಗಾಳಿಯಂತೆ ಮೈಮನಸ ಸೋಕುತ್ತದೆ
ಹ್ರದಯ ಬೆಚ್ಚಗಿನ ಮಿಡಿತವನ್ನೆಲ್ಲ
ಬೊಗಸೆಯಲ್ಲಿ ಮೊಗೆಮೊಗೆದು ಕೊಡುತ್ತದೆ


ಆದರೂ ಕೆಲವೊಂದು ಬಾರಿ..
ಜಪ್ಪೆಂದರೂ ತುಂತುರಿನ ಹನಿ ಹನಿಸುವುದಿಲ್ಲ..
ಮಿಂಚಿಲ್ಲ..ಗುಡುಗಿಲ್ಲ..
ಇನಿತೂ ಮಳೆಯ ಪಸೆ ಇಳೆಯೋಳಗಿಲ್ಲ..
ಬರಡು...ಬರಿದು ಮತ್ತು ಬರಿದು ಮಾತ್ರವೇ...!
ಮಾತಿನ ಉಸಿರು ಮೌನದಲ್ಲಿ  ಕಟ್ಟಿಹೋಗಿದೆ
ಕಪ್ಪನೆಯ ಮೋಡ ಎದೆಯ ಮಿದುವೊಳಗೆ
ಕರಗಿ ಸುರಿಯಲೋಲ್ಲದು...
ಹೆಪ್ಪುಗಟ್ಟಿದೆ...!!

12 ಕಾಮೆಂಟ್‌ಗಳು:

 1. ಮಾತು ಸಂಸ್ಕಾರದ ಪ್ರಕಟನೆ. ಮಾತು ಒಮ್ಮೆ ಗುಲಾಬಿ ಮತ್ತೊಮ್ಮೆ ಅದರಡಿಯ ಮುಳ್ಳು.

  ಮಾತಿನ ಬಗ್ಗೆ ನೀವು ಕಟ್ಟಿದ ಮಂಟಪ ಮತ್ತು ಅದಕ್ಕೆ ಬಳಸಿದ ಭಾಷೆಯ ಗಾರೆ ಕೆಲಸದ ನೈಪುಣ್ಯತೆ ಎರಡೂ ಪ್ರಶಂಸನೀಯ.
  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com
  www.badaripoems.wordpress.com

  Face book Profile : Badarinath Palavalli

  ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

  ಪ್ರತ್ಯುತ್ತರಅಳಿಸಿ
 2. ಮೌನ ರಾಗ ಮೇಡಂ;ಮಾತಿನ ಬಗ್ಗೆ ನಿಮ್ಮ ಕವನ ತುಂಬಾ ಚೆನ್ನಾಗಿದೆ.ನನ್ನ ಬ್ಲಾಗಿನಲ್ಲಿ ಜಿ.ಪಿ.ರಾಜ ರತ್ನಂ ಅವರ'ಮನುಸ್ಯರ್ ಮಾತು'ಎನ್ನುವ ಕವನವಿದೆ.ನೋಡಿ.ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. ಜೀವನ ಮತ್ತು ಋತುಮಾನ ಬಹು ಏರಿಳಿತಗಳಿಂದ ತುಂಬಿದೆ ನಮ್ಮ ನಿರೀಕ್ಷೆ ಆಕಾಂಕ್ಷೆ ಎಲ್ಲಾ ನಾವೆಣಿಸಿದಂತೆ ನಡೆಯೋದಿಲ್ಲ ಎನ್ನುವುದನ್ನು ಸರಳ ಮತ್ತು ಅರ್ಥಪೂರ್ಣ ಸಾಲುಗಳಲ್ಲಿ ವಿವರಿಸಿದ್ದೀರಿ...

  ಪ್ರತ್ಯುತ್ತರಅಳಿಸಿ
 4. tanq ಬದರಿನಾಥ್ ಸರ್... ನಿಮ್ಮ ಬ್ಲಾಗ್ ನಲ್ಲಿ ನನ್ನದೂ ಸದಸ್ಯತ್ವ ಇದೆ...ಧನ್ಯವಾಗಳು..

  ಪ್ರತ್ಯುತ್ತರಅಳಿಸಿ
 5. ಕೃಷ್ಣ ಮೂರ್ತಿ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು..
  ನಿಮ್ಮ ಬ್ಲಾಗ್ ನಲ್ಲಿ "ಮನುಸ್ಯರ್ ಮಾತು" ಗಾಗಿ ಹುಡುಕಾಡಿದೆ...ಮೇಲ್ನೋಟಕ್ಕೆ ಸಿಗಲಿಲ್ಲ...ಇರಲಿ ಮತ್ತೊಮ್ಮೆ ತಲಾಶ್ ಮಾಡುತ್ತೇನೆ..

  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ಜಲನಯನ ಸರ್.. ನಿಮ್ಮ ಪ್ರೋತ್ಸಾಹ, ಸಲಹೆ ಸೂಚನೆಗಳು ನನಗೆ ದಾರಿ ದೀಪ...

  ಪ್ರತ್ಯುತ್ತರಅಳಿಸಿ
 7. ಮನಸಿನ ಮಾತು. ಮನಸಿನ ಕ್ಷಣ ಕ್ಷಣಗಳ ಗೊಂದಲವನ್ನೇ ಕವಿತೆಯಾಗಿಸಿದ್ದಿರಿ.. ಚೆನ್ನಾಗಿದೆ...

  ಪ್ರತ್ಯುತ್ತರಅಳಿಸಿ
 8. ಮಾತು ಮುತ್ತು.. ಮುತ್ತು ಸುರಿದಾಗ ಹೆಕ್ಕಿಕೊಳ್ಳಲು ಮನಸಾಗೋಲ್ಲ... ಮನಸಾದಾಗ ಸುರಿಯೋಲ್ಲ. ಈ ಎರಡರ ಬಂಧ ಈ ಕವನದ ಅನುಬಂಧ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ