ಸೆಪ್ಟೆಂಬರ್ 20, 2011

ಮುಗಿದ ಭಾವ..

ಕನಸುಗಳ ಬೆಂಬತ್ತಿದ ಪಯಣವಿದು
ನಿನ್ನುಸಿರು ನನ್ನೆಸರ ಪಿಸುಗುಡೋ ಸಂಭ್ರಮವಿತ್ತು
ಅಳತೆ ಮೀರಿದ ಭಾವಗಳ ಆಂದೋಲನವಿತ್ತು
ನನ್ನನ್ನುರಾಗದಲಿ ಕೋತಿ ನಕ್ಷತ್ರಗಳ ಬೆಳಕಿತ್ತು
 
ಮನತುಂಬಿ ಬರುವ ನಿನ್ನ ನೆನಪುಗಳಿತ್ತು
ಅದೆಷ್ಟೋ ಸಮಯಗಳ ಲೆಕ್ಕ ತಪ್ಪಿತ್ತು
ಮುನಿಸಿಗೂ ಅರ್ಥ ಹುಡುಕುವ ಬಗೆಯಿತ್ತು
ಸರಿಸುವೆನೆಂದರೂ ಸರಿಸಲಾಗದ ಬಂಧನವಿತ್ತು
 
ಈಗಿಂತೆ ನಿನ್ನಲ್ಲಿ ಕೊನೆಗೊಂಡ ಆ ಭಾವಗಳಿಗೆ
ನನ್ನೊಲಿಸಿದ ಮಧುರ ಕ್ಷಣಗಳ ನೆನಪುಗಳಿಗೆ
ಪ್ರತಿ ದಿನ-ಕ್ಷಣಗಳು ಬಿಡದಂತೆ ತಿಲತರ್ಪಣವನ್ನೀಯುತ್ತಿದ್ದೇನೆ
ಮುಗಿದ ನನ್ನೊಲವಿನ ಭಾವಕ್ಕೆ ಶಾಂತಿ ಸಿಗಲೆಂದು..!!

23 ಕಾಮೆಂಟ್‌ಗಳು:

 1. ತಲ್ಲಣಿಸದಿರು ಕಂಡ್ಯ ಮನವೇ...,
  ಮತ್ತೆ ದೂರದಲ್ಲೊಂದು ದೀಪ ಕಾಣಿಸುವುದು..!
  ಕತ್ತಲಾದ ನಂತರ ಬೆಳಕು ಬರುವುದು ಖಚಿತ..!
  ಭರವಸೆಯೇ ಬಾಳಿನ ಬೆಳಕೆಂದು ಮರೆಯದಿರು,,!! :-)

  ಪ್ರತ್ಯುತ್ತರಅಳಿಸಿ
 2. ಭಾವಕ್ಕೆ ನಿಲುಗಡೆ, ಮತ್ತೆ ಚಾಲನೆ ಸಿಗುವವರೆಗೂ.. ಉತ್ತಮ ಭಾವ ನಿರೂಪಣೆ.
  "ಎಳ್ಳುನೀರು ಬಿಡುತ್ತಿದ್ದೇನೆ ಎ೦ಬಲ್ಲಿ ತಿಲತರ್ಪಣವನ್ನೀವೆ..." ಎನ್ನಬಹುದಾ.. ಒ೦ದು ಸಲಹೆ ಅಷ್ಟೆ..:) ಅಭಿನ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ
 3. ಅನಂತ್ ರಾಜ್ ಸರ್...
  ನಿಮ್ಮ ಸಲಹೆಗೆ ತುಂಬು ಹ್ರದಯದ ಧನ್ಯವಾದಗಳು..ನಾನಿನ್ನೂ ಸಾಹಿತ್ಯಿಕ ಪ್ರಪಂಚಕ್ಕೆ ಹೊಸಬಳು..ಬರವಣಿಗೆಯ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ.. ನೀವು ಸೇರಿದಂತೆ ಇತರ ಎಲ್ಲ ಗೆಳೆಯರು ನನ್ನ ತಿದ್ದಿ ತೀಡಿದರಷ್ಟೇ ಬೆಳವಣಿಗೆ ಸಾದ್ಯ...ಇದಕ್ಕಾಗಿ ನಾನು ಅಭಾರಿ...
  ಈ ಹಿಂದೆ ನನ್ನ ಕನಸು ಕಂಗಳ ತುಂಬಾ ಬ್ಲಾಗಿಗೂ ಬಂದು ಪ್ರೋತ್ಸಾಹಿಸಿದ್ದಿರಿ....ಧನ್ಯವಾದಗಳು..ನಿಮ್ಮ ಸಲಹೆ ಸೂಚನೆಗಳು ಹೀಗೆ ಇರುತ್ತಲಿರಲಿ..

  ಪ್ರತ್ಯುತ್ತರಅಳಿಸಿ
 4. ಆಶಾಭಾವ - ನಿರಾಶೆಯಾಗಲು ಹೆಚ್ಚು ಸಮಯ ಬೇಕಿಲ್ಲ ಯಾಕಂದ್ರೆ ಸಂಯಮದ ಕೊರತೆ ಗೆಲ್ಲುತ್ತದೆ...ಚನ್ನಾಗಿದೆ..ಚಿಕ್ಕ ಚೊಕ್ಕ ಕವನ...ಸುಶ್ಮಾ..ಶುಭವಾಗಲಿ

  ಪ್ರತ್ಯುತ್ತರಅಳಿಸಿ
 5. kavana tumba channagide....nanage kavanada jote aa chitravu bahala ishtavaayitu. bhaavanegalaige ellu neeru bitta mele bahusha baduku heegeye marubhoomiyantaaguttadeyeno.....??!!

  ಪ್ರತ್ಯುತ್ತರಅಳಿಸಿ
 6. ಶ್ರುತಿ ಮೇಡಂ.. ಕವನದ ತುಂಬಾ ನಿರಾಸೆಯೇ ತುಂಬಿದ್ದರು ಮೆಚ್ಚಿದ್ದಕ್ಕೆ ಥ್ಯಾಂಕ್ಸ್... ಅಂತಹ ಒಂಟಿತನ ಯಾರಿಗೂ ಬೇಡ...ಇರುವಷ್ಟು ದಿನ ಖುಷಿ ಖುಷಿ ಯಾಗಿ ಇರೋಣ..ಮರುಳುಗಾಡಿನ ಜೊತೆ ನಮಗೆ ಬೇಡ ಅಲ್ಲವೇ?

  ಪ್ರತ್ಯುತ್ತರಅಳಿಸಿ
 7. I wondered at last line.
  usually we say 'may soul rest in peace'but here you said "Bhavakke shanti sigalendu". It clearly put the intensity & core intent. Good one . .
  nice blog, move on . . . .

  ಪ್ರತ್ಯುತ್ತರಅಳಿಸಿ
 8. ಪ್ರೀತಿಯ ವೈಫಲ್ಯದ ಭಾವವನ್ನು ಉತ್ತಮವಾಗಿ ಕವನಿಸಿದ್ದೀರಿ ಸುಷ್ಮಾ,, ಅಭಿನಂದನೆಗಳು! ನನ್ನ ಬ್ಲಾಗ್ ಗೆ ಭೇಟಿ ನೀಡಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಮೇಡಂ..
   ಖಂಡಿತ ನಿಮ್ಮ ಬ್ಲಾಗ್ ಗೆ ಬರುತ್ತೇನೆ..

   ಅಳಿಸಿ
 9. ಕನಸುಗಳ ಬೆಂಬತ್ತಿದ ಪಯಣವಿದು....


  baari ista aytu madam super agide ide...

  ಪ್ರತ್ಯುತ್ತರಅಳಿಸಿ
 10. sundara bhavanegalu... bahusha ee bhavanegalige ee jagadalli arthavilla enisute..:(:(

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಭಿ ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು

   ಅಳಿಸಿ
 11. ಚೆನ್ನಾಗಿದೆ ಕವಿತೆ. ಹಾಗಂತ ನಾನು ಹೊಗಳುವುದಿಲ್ಲ.ಅದಕ್ಕಿಂತ ಮಿಗಿಲಾದ ಅಲೆಗಳು ಭಾವ ಸಮುದ್ರದಲ್ಲಿ ಮನದ ಕಿನಾರೆಗೆ ಬಂದು ಸುಂದರ ರೂಪವತಿಯಾಗುತ್ತಿದೆ.ಕವಿತೆ ಹರಳುಗಟ್ಟೋದು ಅಂತ ಇದಕ್ಕೆ ಇನ್ನೊಂದು ಹೆಸರು.ಅದ್ಬುತ ಭಾವ ಬದುಕಿನ ಪಯಣ ನಿಮ್ಮದು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ರವಿ ಸರ್.....ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು...

   ಅಳಿಸಿ
 12. ellu neeru biduttidhene mugida bahavnegalige shanti sigalendu.. ee nudigalu manakalakuvantavu! great!

  ಪ್ರತ್ಯುತ್ತರಅಳಿಸಿ
 13. ಕೆಲವೊಮ್ಮ ನಡುವಿನ ಬಂಧ ಮರಳುಗಾಡಿನ ಮರೀಚಿಕೆ ಆಗಿ ಬಿಡುತ್ತೆ. ಅಭಿವ್ಯಕ್ತ ಮಾಡುವ ಪರಿ ಇಷ್ಟವಾಯಿತು ಪಿ ಎಸ್

  ಪ್ರತ್ಯುತ್ತರಅಳಿಸಿ