ಅಕ್ಟೋಬರ್ 10, 2011

ನಾನವಳಲ್ಲ..​!

ಮತ್ತೇ ಬಾರದಿರು ಒಲವೇ                        
ನಾನವಳಲ್ಲ..!

ಮರೆತು ಹೋದ ನೆನ್ನೆಗಳ
ನೆನಪು ಮಾಡಲು
ಸುರುಳಿ ಸುತ್ತಿಟ್ಟ ಅಂಧಕಾರದ
ಉರುಳು ಬಿಚ್ಚಲು
ತೊಟ್ಟಿಕ್ಕಿರುವ ಹನಿಯ
ಕೋಡಿ  ಹರಿಸಲು
ಕಾರಿರುಳ ಗರ್ಭದ, ಪುಟಗಳ
ತಿರುವಿ ಹಾಕಲು
ಬಾರದಿರು...ನಾನವಳಲ್ಲ..!

ಎಲ್ಲಾ ಮರೆತ್ತಿದ್ದೇನೆ ನಾನು..!
ನೆನ್ನೆಗಳು - ನಾಳೆಗಳು ನನ್ನಲ್ಲಿಲ್ಲ..
ನವ ವಸಂತಕ್ಕೆ ಹಿಂದಣ
ಬವಣೆಗಳು ಕರಗಿವೆ
ಹಳೆಯದೆಲ್ಲ ಕೊಡವಿ
ನವ ವಧುವಾಗಿದ್ದೇನೆ...ನವ ಬಾಳಿಗೆ


ಕೈ ಮುಗಿವೆ
ಮತ್ತೇ ಬಾರದಿರು
ನಾನವಳಲ್ಲ...!!
 

21 ಕಾಮೆಂಟ್‌ಗಳು:

 1. ಬಪ್ಪದು ಬಾರದು.., ಬಾರದು ಬಪ್ಪದು..
  ಬಾ ಎಂದಾಗ ಬರಲೊಪ್ಪದದು
  ಬರಬೇಡವೆಂದರೂ ಬಿಡದದು..,

  ನೀನವಳಲ್ಲವೆಂಬುದು ತಿಳಿಯದದಕೆ,
  ಅದು ಬಯಸುವುದು ಮಾತ್ರ ಬೇಕದಕೆ,

  ನಿನ್ನೆಗಳ 'ಕಹಿನೆನಪು' ಮರೆಮಾಚಿ
  ನಾಳೆಯ ಬದುಕಿಗೆ 'ಭರವಸೆ' ತುಂಬಲು
  ಬರುತಲಿರುವದದು..!

  ಹಿಂದಿನ ಮುಗ್ಧತೆಯ ಬದಿಗೊತ್ತಿ
  ಇಂದಿನ ಪ್ರಬುದ್ಧತೆಯ ಒರೆಗಚ್ಚಿ
  ಸ್ವೀಕರಿಸಲನುವಾಗು..

  ನವ ಬಾಳಿನ, ನವ ವಸಂತಕೆ ಹೊಸತನ ತುಂಬಿಕೊಂಡು
  ಬಂದಿರುವ ಅದನು ಕೈಹಿಡಿದು ಮುನ್ನಡೆಸು ಹೊಸ ದಿಗಂತದೆಡೆಗೆ..:-)

  ಪ್ರತ್ಯುತ್ತರಅಳಿಸಿ
 2. ಯಾವ ಪ್ರಚಾರದ ಹಂಗಿಲ್ಲದೆ ನಿಮ್ಮ ಪದಗಳನ್ನು ಓದುಗರಿಂದ ಮುಚ್ಚಿಟ್ಟಿದ್ದೀರಿ.ನಾನು ಕವಿತೆ ಬರೆಯುವವನೇ, ಒಂದು ಅಮೂಲ್ಯ ಮುತ್ತು ರತ್ನವನ್ನು ಕಾಪಾಡುವುದು ನನ್ನ ಧರ್ಮ. ಅದಕ್ಕಾಗಿಯೇ ನಾನು ಪ್ರತಿಭೆಯ ಅನ್ವೇಷಣೆಯಲ್ಲಿ ತೊಡಗುತ್ತೇನೆ. ನೀವು ಬೆಳಕಿಗೆ ಬರಬೇಕು. ಅದಕ್ಕೆ ದಾರಿ ನಾವೆಲ್ಲರೂ ತೋರಿಸುತ್ತೇವೆ. ನಿಮ್ಮ ಭಾವಕ್ಕೆ ನನ್ನ ಅನಂತಾನಂತ ಸಲಾಮು.

  ಪ್ರತ್ಯುತ್ತರಅಳಿಸಿ
 3. ತುಂಬಾ ಇಷ್ಟವಾಯಿತು ನೀವು ಬರೆದ ಸಾಲುಗಳು...

  ಮರೆವು ಒಂದು ವರ...
  ಕಹಿಯೆಲ್ಲ ತುಂಬಿಕೊಂಡು ಬದುಕೋದು ಬಲು ಕಷ್ಟ...

  ಬರೆಯುತ್ತಿರಿ....

  ಪ್ರತ್ಯುತ್ತರಅಳಿಸಿ
 4. kaNnedure nintu.. Kara mugidu beDuttiruvantide bhavagaLu... Ravi sir helidante.. Neevu-nimma kavitegalu belakige baralebeku.. Dhanyavaadagalu.

  ಪ್ರತ್ಯುತ್ತರಅಳಿಸಿ
 5. nija prakaashanna helidante marevu ondu vara, kelavomme shaapavu aagi biduttade. aadare kahi nenapugala vishayakke bandare marevu ondu varave.....
  aadare naanu heluvudu ishte kahiyannu mareyiri, nenapugalannalla......avugalannu nimma manada mooleyalli bandhisidi.

  ಪ್ರತ್ಯುತ್ತರಅಳಿಸಿ
 6. tumbe chenagide madam...

  ಮರೆತು ಹೋದ ನೆನ್ನೆಗಳ
  ನೆನಪು ಮಾಡಲು
  ಮತ್ತೇ ಬಾರದಿರು
  ನಾನವಳಲ್ಲ...!!

  very nice..

  ಪ್ರತ್ಯುತ್ತರಅಳಿಸಿ
 7. ಚನ್ನಾಗಿದೆ ಮರೆತ ನಿನ್ನೆ ತಿರುವಿದ ಹಾಳೆ ...ಬೇಕಾದಾಗ ನೆನಪಿಸಿಕೊಳ್ಳಬಹುದು ಆದರೆ ಕಳೆದ ಹೊತ್ತು ಮತ್ತೆ ಬರದು...ಕೈ ಮುಗಿವೆ ಮತ್ತೆ ಬಾರದಿರು ನಾನವಳಲ್ಲ...!!!!

  ಪ್ರತ್ಯುತ್ತರಅಳಿಸಿ
 8. ಮನುಷ್ಯನಿಗೆ ಮರೆವು ಇಲ್ಲದಿದ್ದರೆ ಅವನು ನರಕ ಯಾತನೆ ಅನುಭವಿಸುವುದು ಖರೆ. ಹಳೆಯ ವಿಚಾರಗಳ ಮರೆವಿನಿಂದಲೇ ಹೊಸ ಬದುಕನ್ನು ಸ್ವಲ್ಪವಾದರೂ ನೆಮ್ಮದಿಯಿಂದ ಕಳೆಯಲು..ಸಾಧ್ಯ..

  ಕವನದ ಸಾಲುಗಳು..ಸೊಗಸಾಗಿವೆ..

  ಪ್ರತ್ಯುತ್ತರಅಳಿಸಿ
 9. ಗೆಳತಿ .....

  ಪದಪದಗಳಲ್ಲಿ ಮೆಲ್ಲುವ ಸವಿ ಇರಲು
  ಕದತಟ್ಟದಿರುವುದೇ ಈ ಸಾಲುಗಳು
  ಆ ನೆನಪುಗಳ ಮರೆಯದಿರು ಮನಸೇ....
  ಈ ಜೀವದಾರಿಯಲಿ ಅವುಗಳಲ್ಲವೇ ಕನಸು..
  ನನಗನಿಸುವುದು ಈ ಭಾವನೆಲೆಯಲಿ
  ದೂರಸರಿಯದೆ ಮತ್ತೆ ನನಸಾಗಿ ಬರಲಿ...
  ಈ ಕವಿತೆ ಬರವಣಿಗೆ..
  ಈ ಹಣತೆ ಮೆರವಣಿಗೆ...
  by...
  raj....ಕಣೆ...

  ಪ್ರತ್ಯುತ್ತರಅಳಿಸಿ
 10. ಉತ್ತಮವಾದ ಕವನ ಅಂತರಂಗದ ಭಾವನೆಗಳ ಅನಾವರಣ ಅದ್ಭುತವಾಗಿದೆ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 11. ಮೆಚ್ಚಿ ಪ್ರಕಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 12. ಬೇಡದ ನೆನಪನ್ನು ಕಿತ್ತು ಬಿಸಾಡಿ ಮತ್ತೆ ಅದಕ್ಕೆ ಬರಬೇಡ ಎಂದು ಹೇಳುವ ಪರಿ ಚೆನ್ನಾಗಿದೆ. ನಿಮ್ಮ ಹತ್ತಿರ ಭಾವ ಎನ್ನುವ ಒಂದು ಭಾವದ ಕೆರೆ ಇದೆ ಎನ್ನಿಸುತ್ತೆ. ಬೇಕೆಂದಾಗ ತುಂಬಿ ತುಂಬಿ ಕೊಡುತ್ತೀರಿ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಭಾವದ ಕೆರೆ...?
   ನಿಮ್ಮ ಪ್ರತಿಕ್ರಿಯೆಯಿಂದ ತುಂಬಾ ಖುಷಿಯಾಯಿತು.. ಧನ್ಯವಾದಗಳು...

   ಅಳಿಸಿ