ನವೆಂಬರ್ 3, 2011

ಕಾದಿದ್ದೇನೆ...!ಪ್ರೀತಿ ಜ್ಯೋತಿಯ ಹಚ್ಚಿ
ಒಂದಾಗುತ್ತಿದ್ದ ಕಾಲವದು 
ನಿನ್ನೊಳಗಿನ ದುಃಖ-ದುಮ್ಮಾನಗಳು 
ನನ್ನೊಡಲಲ್ಲಿ  ಕರಗಿಬಿಡುತ್ತಿದ್ದವು
ತೊಯ್ದ ತುಂಬಿಕ್ಕೊಂಡ ಸೆರಗ 
ಶುಭ್ರ ಮಾಡಿ
ಮತ್ತೆ ಹಾಗೆಯೇ ಕುಳಿತಿರುತ್ತಿದ್ದೆ
ನೀ ಬರುತ್ತಿದ್ದೆ
ನನ್ನೊಡಲು ತುಂಬುತ್ತಿದ್ದೆ 

ಆರಿದ ಪ್ರೀತಿ ಜ್ಯೋತಿಯ ಮುಂದೆ 
ನಾನಿಂದು ಒಬ್ಬಂಟಿ
ಅನುರಾಗ ಸುಳ್ಳಾಯಿತೇ?
ಕಂಬನಿ ಉಕ್ಕುಕ್ಕಿ ಹನಿಯುತಿರೆ
ಎದೆಯುಕ್ಕಿ ಬಿಕ್ಕುತಿರೆ
ದೀಪವಿಲ್ಲದ ದಾರಿಯಲ್ಲಿ - ನಟ್ಟಿರುಳು !
ಕುರುಡಾಗಿದ್ದೇನೆ..
ಅಂದು ನಿನಗೆ ನಾ ಬೇಕಿದ್ದಂತೆ
ಇವೊತ್ತು ನನಗೆ ನೀನು!
ಇರುಳ ಅಂಧಕಾರವ ಸೀಳಿ ಬಾರೆಯಾ?
ಸೆರಗೊಡ್ಡಿ ಕಾದಿದ್ದೇನೆ...!


29 ಕಾಮೆಂಟ್‌ಗಳು:

 1. ತುಂಬಾ ಸುಂದರ ಸಾಲುಗಳು.. ಭಾವಗಳು..

  ಇಷ್ಟವಾಯಿತು..
  ಚಂದದ ಕವನಕ್ಕಾಗಿ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 2. ಚೆನ್ನಾಗಿದೆ ಮತ್ತು ಚೆನ್ನಾಗಿದೆ.
  ವಿಚಿತ್ರ ನೋಡಿ, ಪ್ರೇಮದ ಸಾಲುಗಳು ಇಷ್ಟವಾಗ್ತವೆ.
  ಆದರೆ-ಅಗಲಿಕೆ, ದುಃಖ, ವಿರಹದ ಸಾಲುಗಳು ನಮ್ಮಲ್ಲೇ ಇಳಿದು ಅಲ್ಲೇ ಉಳಿದುಬಿಡ್ತವೆ. ಹಾಗಾದ್ರೆ ಎಲ್ಲರಲ್ಲೂ ದುಃಖಿ, ವಿರಹಿ ಜೀವಂತ ಅನ್ನಿ.
  ಥ್ಯಾಂಕ್ಯು

  ಪ್ರತ್ಯುತ್ತರಅಳಿಸಿ
 3. Bhaavanegalu chennagi moodive.. Nimma preethi sikke sigatte... But Taalme erali.

  Vinay.

  ಪ್ರತ್ಯುತ್ತರಅಳಿಸಿ
 4. kavite, bhavanegalu chennaagive... abhinandanegalu... Nimma neerikshe nijavaagiddare... Adashtu bega neraverali... :)

  ಪ್ರತ್ಯುತ್ತರಅಳಿಸಿ
 5. ಭಾವ ಪೂರ್ಣ ಸುಂದರ ಕವಿತೆ.ಅಭಿವ್ಯಕ್ತಿಸಿದ ರೀತಿ ಇಷ್ಟವಾಯಿತು.

  ಪ್ರತ್ಯುತ್ತರಅಳಿಸಿ
 6. ಕನಸುಗಳು ಹೀಗೂ ಮಾತಾಡುತ್ತೆ ಅಂತ ಈಗ ಗೊತ್ತಾಯಿತು. ಕವಿತೆಯಲ್ಲಿ ಸೆರೆ ಹಿಡಿದದ್ದು ಒಳ್ಳೆಯದಾಯಿತು. ಬಣ್ಣದ ಕನಸುಗಳಿಗಿಂತ ಕಪ್ಪು-ಬಿಳುಪು ಕನಸುಗಳು ಅಚ್ಚೊತ್ತುತ್ತವೆ.ಕನಸುಗಳು ನಿಮ್ಮ ಬದುಕ ತುಂಬಲಿ.ನೆರವೇರಲಿ. ಚೆನ್ನಾಗಿದೆ ಕವಿತೆ.

  ಪ್ರತ್ಯುತ್ತರಅಳಿಸಿ
 7. ಸರಳ ..ಸುಂದರ..ಭಾವಪೂರ್ಣ ಸಾಲುಗಳು;
  ಕವನ ಚೆನ್ನಾಗಿದೆ :-)

  ಪ್ರತ್ಯುತ್ತರಅಳಿಸಿ
 8. ಅಯಿಸುವುದು, ನೊಯಿಸುವುದು... ಆದರು ನಾವು ಕಾಯುವುದು ಬಿಡಲ್ಲ, ಪ್ರೀತಿಯ ಭಾವನೆಗಳ ಜೊತೆಯೆ ಪಯಣ... ಸು೦ದರ ಸಾಲುಗಳು...

  ಆ ಪ್ರೀತಿ ನಿಮಗೆ ಸಿಗಲಿ ಎ೦ದು ಹಾರೈಸುವೆ...

  ಪ್ರತ್ಯುತ್ತರಅಳಿಸಿ
 9. ವಿಧಿಯ ಕಠೋರತೆಯೆಂದರೆ ಇದಲ್ಲವೇ..??

  ಹಲ್ಲಿದ್ದಾಗ ಕಡಲೆ ಇಲ್ಲ..
  ಕಡಲೆ ಇದ್ದಾಗ ಹಲ್ಲಿರುವುದಿಲ್ಲ..
  ಒಂದು ವಸ್ತುವಿನ ಮೌಲ್ಯ ನಮಗರಿವಾಗುವುದು..
  ಅದು ನಮ್ಮಿಂದ ದೂರಾವಾದಗಲೇ..! :'(
  ಬಾಡಿ ಹೋದ ಬಳ್ಳಿಯಿಂದ ಹೂ ಅರಳಬಲ್ಲುದೇ..??

  ಬೆಳಕೇ ಕಾಣದ ದಾರಿಯಲ್ಲಿ.,ಕಡು ಕಗ್ಗತ್ತಲೆಯಲ್ಲಿ !
  ಕಣ್ಣು ಕುರುಡಾಗಿಸಿ ಹೋದ ಅಂದಿನ ಆ ನಿನ್ನ ಒಲವು..
  ಇರುಳ ಅಂಧಕಾರವ ಸೀಳಿ ನಿನ್ನ ಬಳಿ ಬರುವಷ್ಟು
  ಸಾಮರ್ಥ್ಯವಾದರೂ ಅದರಲ್ಲುಳಿದಿರುವುದೇ..??

  ಅದಕ್ಕೆ ಕಾಲವೇ ಉತ್ತರಿಸಬೇಕು..!
  "ಕಾಲಾಯಾ ತಸ್ಮೈ ನಮಃ"

  ಶುಭವಾಗಲಿ..! :'(

  ಪ್ರತ್ಯುತ್ತರಅಳಿಸಿ
 10. ಹ್ರುದಯದಿ೦ದ ಬಯಸಿದ್ದು ಸಿಕ್ಕೆ ಸಿಗುತ್ತದೆ.. ಜೀವನದಲ್ಲಿ ನ೦ಬಿಕೆ, ವಿಶ್ವಾಸ ಬಹಳ ಮುಖ್ಯ. ನಮ್ಮ ಪಾಲಿಗಿದ್ದಿದ್ದು ನಮಗೆ ಸಿಕ್ಕೇ ಸಿಗುತ್ತದೆ. ಸಹನೆ ಇರಲಿ.
  ಸು೦ದರವಾದ ಸಾಲುಗಳು...ಇಷ್ಟವಾಯಿತು. ಹೀಗೆ ಬರೆಯುತ್ತಿರಿ.......:)

  ಪ್ರತ್ಯುತ್ತರಅಳಿಸಿ
 11. ಬೆಳಕೇ ಕಾಣದ ದಾರಿಯಲ್ಲಿ
  ಕಡು ಕಗ್ಗತ್ತಲೆಯಲ್ಲಿ..
  ಕಣ್ಣು ಕುರುಡಾಗಿಸಿ ಹೋದ
  ನಿನ್ನ ಅಂದಿನಾ ಒಲವು..

  ಇಂದಿನ ಇರುಳ ಅಂಧಕಾರವ ಸೀಳಿ
  ನಿನ್ನ ಬಳಿ ಸುಳಿವಷ್ಟು.
  ಸಾಮರ್ಥ್ಯವಾದರೂ ಅದರಲ್ಲುಳಿದಿದೆಯೇ..?

  ಅದಕ್ಕೇ ಕಾಲವೇ ಉತ್ತರಿಸಬೇಕು..!
  "ಕಾಲಾಯಾ ತಸ್ಮೈ ನಮಃ"

  ಪ್ರತ್ಯುತ್ತರಅಳಿಸಿ
 12. ಕಾಯುವಿಕೆ ನಿರಂತರವಾದದ್ದು..!
  ನಿರೀಕ್ಷೆ, ಆಸೆ,ದುಃಖ ಮಾನವಸಹಜ....
  ಏನು ಬೇಡ ಎನುತ್ತಲೇ ಬೇಕು ಎನ್ನುವುದಕ್ಕೆ ಗಂಟು ಬಿದ್ದಿರುವ ಹುಲುಮಾನವರು ನಾವು!

  ಪ್ರತಿಬಾರಿಯೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ, ನಿರೀಕ್ಷೆಗಳೆಲ್ಲ ಕೈಗೂಡಲಿ ಎಂದು ಹಾರೈಸುವ, ಬರಿಯುವುದಕ್ಕೆ ಸ್ಫೂರ್ತಿ ತುಂಬುವ ಈ ಪ್ರೀತಿಗೆ ಹೇಗೆ ಥ್ಯಾಂಕ್ಸ್ ಹೇಳಲಿ?
  ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 13. ಕವನ ಚೆನ್ನಾಗಿದೆ . ಕಾಯುವಿಕೆ ಫಲಿಸಲಿ .

  ಪ್ರತ್ಯುತ್ತರಅಳಿಸಿ
 14. ಸುಶ್ಮಾ, ಭಾವನಾ ಲಹರಿಯಂತೆ ತೇಲಿಬಿಟ್ಟ ಕವನದ ಸಾಲುಗಳು...
  ಅದರಲ್ಲೂ ನನಗೆ ಇಷ್ಟವಾಗಿದ್ದು...
  ದೀಪವಿಲ್ಲದ ದಾರಿಯಲ್ಲಿ - ನಟ್ಟಿರುಳು !
  ಕುರುಡಾಗಿದ್ದೇನೆ..
  ಅಂದು ನಿನಗೆ ನಾ ಬೇಕಿದ್ದಂತೆ
  ಇವೊತ್ತು ನನಗೆ ನೀನು!
  ಇರುಳ ಅಂಧಕಾರವ ಸೀಳಿ ಬಾರೆಯಾ?
  ಸೆರಗೊಡ್ಡಿ ಕಾದಿದ್ದೇನೆ...!

  ಪ್ರತ್ಯುತ್ತರಅಳಿಸಿ
 15. ಈಶ್ವರ ಭಟ್ ಅವರೇ ತಮ್ಮ ಹಾರೈಕೆಗೆ ಮತ್ತು ಅಜಾದ್ ಸರ್ ತಾವು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 16. ವಿರಹದ ನೋವನ್ನು, ಕಾಯುವಿಕೆಯ ನಿರ೦ತರತೆಯನ್ನು ಹೃದಯ ಸ್ಪರ್ಶಿಯಾಗಿ ಕವನಿಸಿದ್ದೀರಿ, ಅಭಿನ೦ದನೆಗಳು ಸುಷ್ಮಾ.

  ಪ್ರತ್ಯುತ್ತರಅಳಿಸಿ
 17. ದೀಪವಿಲ್ಲದ ದಾರಿಯಲ್ಲಿ - ನಟ್ಟಿರುಳು !
  ಕುರುಡಾಗಿದ್ದೇನೆ..
  ಭಾವತೀವ್ರತೆಯ ಕವನ.... ಈ ಕವನದ ಸ್ಥಾಯಿಗುಣ 'ಆಸರೆ ನಿರೀಕ್ಷೆ' ಆದರೆ 'ಯಾರಿಗೆ ಯಾರುಂಟು ಎರವಿನ ಸಂಸಾರ' ಎಂಬುದನ್ನು ನೆನೆದಾಗ ಈ ಆಸರೆ ನಿರೀಕ್ಷೆ ಅವಶ್ಯಕವಿತ್ತೆ ಎನಿಸುತ್ತದೆ........

  ಪ್ರತ್ಯುತ್ತರಅಳಿಸಿ
 18. ಒಂದೇ ಜೀವವನ್ನು ನೆಚ್ಚಿಕ್ಕೊಂಡು..ಆ ಜೀವಕ್ಕಾಗಿಯೇ ತನ್ನದೆಂಬ ಬದುಕು ಮೀಸಲಿಟ್ಟಗ ಈ ಥರದ ನಿರೀಕ್ಷೆ ಸಹಜ...ನಿರೀಕ್ಷೆ ಹುಸಿಯದಾಗ ಉಂಟಾಗುವ ತಲ್ಲಣ ತೀವ್ರ ತೆರನಾದದ್ದು...
  ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 19. ಭಾವನೆಗಳ ಗುಚ್ಚದಲ್ಲಿ ತೇಲಿ ಹೋದ ಬೆಳಕು
  ಮತ್ತೆ ಬಾರದೆಂದರೆ
  ಮತ್ತದೆ ಕಾರು ಬಾರು
  ಸುಖ ಸುಮ್ಮನೆ
  ದುಖಃ ದುಮ್ಮಾನ
  ನೆನಪು ಸಾರಗದ ಕಡಲು
  ಕೊರೆವ ಚಳಿಗೆ
  ಮೈ ಹೊದಿಕೆ

  ಪ್ರತ್ಯುತ್ತರಅಳಿಸಿ
 20. ಭಾವತು೦ಬಿದ ಸು೦ದರ ಸಾಲುಗಳು...ಚೆನ್ನಾಗಿದೆ.

  ನನ್ನ ಬ್ಲಾಗಿಗೆ ಸ್ವಾಗತ ಹಾಗೂ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 21. ಭಾವ ತೀವ್ರತೆಯ ಕವನ.

  ಪರಸ್ಪರ ಹಂಚಿಕೊಳ್ಳುವುದೇ ಪ್ರೇಮ. ಪ್ರೇಮ ರಾಹಿತ್ಯದ ನೋವು ಬೇಗ ಮಾಗಲಿ.

  ಪ್ರತ್ಯುತ್ತರಅಳಿಸಿ
 22. ಹರೀಶ್ ಸರ್, ಮನಮುಕ್ತ, ಬದರಿನಾಥ್ ಸರ್... ಪ್ರತಿಕ್ರಿಯೆಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 23. ಚೆನ್ನಾಗಿದೆ .... ಭಾವನಾತ್ಮಕ .... ಹೀಗೆ ಮನಸ್ಸಿನ ಭಾವನೆಗಳನ್ನು ಹೊರ ಹಾಕುತ್ತಿರಿ ......:)

  ಪ್ರತ್ಯುತ್ತರಅಳಿಸಿ
 24. ಶಾಲೆಯಲ್ಲಿ ಓದಿದ್ದ "ಕಾದಿರುವಳು ಶಬರಿ ರಾಮ ಬರುವನೆಂದು" ಪದ್ಯ ನೆನಪಿಗೆ ಬಂತು. ಜೀವ ತುಂಬುವ ಪದಗಳು ನಿಮ್ಮ ಕವನದ ಶಕ್ತಿ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ