ನವೆಂಬರ್ 26, 2011

ಅವನಿರುವುದೂ ನಮ್ಮೊಳಗೇ..!


ಲಾರಿಯೊಂದು ರೊಯ್ಯನೆ
ಕ್ಷಣಮಾತ್ರವೂ ನಿಲ್ಲದಂತೆ
ಹಾದು ಹೋಗಿದ್ದು - ಸುಮ್ಮನ್ನಲ್ಲ..!
ಹರಿದ್ದಿದ್ದು ವ್ಯಕ್ತಿಯೊಬ್ಬನ ಮೇಲೆ.
ರಕ್ತ ಬಳಬಳನೆ ಸುರಿಯತೊಡಗಿತ್ತು
ಮಾಂಸಖಂಡಗಳು ಕಿತ್ತು ಬಂದಿತ್ತು.

ಜನರೆಲ್ಲಾ ಅಯ್ಯೋ! ಪಾಪ!
ಎನ್ನುತ್ತಲೇ ಧಾವಿಸಿ ಬಂದರು
ಲಾರಿಯವನನ್ನು ದೂರಿದರು
ಬಾರದ ಪೋಲೀಸರ ಬಗ್ಗೆ ಜರಿದರು 
ಟ್ರಾಫಿಕ್ಕಿನ ಕುರಿತು ಕೊರೆದರು
ಯಾವ ತಾಯ ಮಗನೋ ಶಿವನೆ!
ಕನಿಕರಿಸುತ್ತಾ ಮುಂದೆ ಸಾಗಿದರು.

ಜೀವದ ಜೊತೆ ಸೆಣಸಾಡುವ 
ಅವನದು, ತನ್ನತ್ತ ಬರುವವರಿಗಾಗಿ 
ದೀನನೋಟ..!
ಕ್ಷಮಿಸಿ...!
ನಾವಂತೂ ಕೇಸುಗಳ ಮದ್ಯೆ
ಸಿಲುಕಲಾರೆವು...
ಇನ್ನು ಲಾರಿಯವನು ಬರುವುದೆಲ್ಲಿಂದ?
ಅವನಿರುವುದೂ ನಮ್ಮೊಳಗೇ!

19 ಕಾಮೆಂಟ್‌ಗಳು:

 1. ಥ್ಯಾಂಕ್ಸ್ ಶಶೀ...
  ಇದೆ ಥೀಮ್ ಇದ್ದ ಒಂದು ಕವಿತೆ ಬೇರೆಲ್ಲೋ ಓದಿದ್ದೆ....
  ಅದರ ಪ್ರಭಾವಕ್ಕೊಳಗಾಗಿನೆ ಈ ಕವಿತೆ ಬರೆದಿದ್ದು...
  ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 2. ಆಹಾ..!!
  ಹೊಸ ಮಜಲಿನ ಹೊಸ ಕವಿತೆ
  ದೃಷ್ಠಿ ಬೇರೆಡೆ ಹೀಗೆ ಹರಿಯುತಿರಲಿ..!
  ಮೌನ ಭಾವದಿಂದ ಮುಕ್ತಿ ಪಡೆದು
  ಮಾತುಗಳು ಹೀಗೆ ಹೊರಹೊಮ್ಮುತಿರಲಿ..!
  ಅಭಿನಂದನೆಗಳು..! ♥

  ಪ್ರತ್ಯುತ್ತರಅಳಿಸಿ
 3. ಮಾನವೀಯತೆ ಮರೆಯಾಗುತ್ತಿರುವ ದಿನಗಳಿವು:-(

  ಪ್ರತ್ಯುತ್ತರಅಳಿಸಿ
 4. ಚೆಂದ ಬಂದಿದೆ ಕವಿತೆಯ ಪ್ರತಿಮೆ.ಕೊನೆಯ ಸಾಲಿನಲ್ಲಿ ಪ್ರತಿಮೆಯ ನಿಜರೂಪ ಸ್ಪಷ್ಟವಾಯಿತು. ಕವಿತೆ ಹೀಗೆ ಬರಬೇಕು ಓದಿದ ನಂತರ ಆಸ್ವಾಧನೆ ಜೀವಂತವಾಗಿರಬೇಕು.ವಂದನೆಗಳು.

  ಪ್ರತ್ಯುತ್ತರಅಳಿಸಿ
 5. Well narrated.... nija, ellary olleydannu athave kanikara toruvavare horatu, upayogavaguva kelsa yaaru maaduvudilla. adu preeethiyaadaru sari, praanavadaru sari..

  ಪ್ರತ್ಯುತ್ತರಅಳಿಸಿ
 6. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 7. ಅರ್ಥಪೂರ್ಣ ಕವನ. ಇದರ ಸಂಪೂರ್ಣ ಸಾರವನ್ನು 'ಇನ್ನು ಲಾರಿಯವನು ಬರುವುದೆಲ್ಲಿಂದ? ಅವನಿರುವುದೂ ನಮ್ಮೊಳಗೇ' ಸಾಲುಗಳು ಕಟ್ಟಿಕೊಟ್ಟಿವೆ.

  ಪ್ರತ್ಯುತ್ತರಅಳಿಸಿ
 8. ಕುಮಾರ ರೈತ ಸರ್,ಪ್ರತಾಪ್ ಸರ್,suragange ,ತರುಣ್ ಸರ್...
  ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಿರಿ .., ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 9. ಸುಶ್ಮಾ, ವ್ಯವಸ್ಥೆ ಮತ್ತು ಅವನ್ನು ನಿಯಂತ್ರಿಸುವವರು ಈಡುಮಾಡಭುದಾದ ಅವಸ್ಥೆಗೆ ಹೆದರಿ ಮನಸಿದ್ದರೂ ಹಲವರು ಸಹಾಯಕ್ಕೆ ಮುಂದಾಗುವುದಿಲ್ಲ ಎನ್ನುವ ಕಾರಣಕ್ಕೇ ಈಗ ಸುಪ್ರೀಂ ಕೋರ್ಟ್ ಸಹಾರ ಮಾಡಬಯಸುವವರ ರಕ್ಷಣೆಗೆ ನಿಲ್ಲುವ ಕಾನೂನನ್ನು ತಿದ್ದುಪಡಿ ಮಾಡಿದೆ... ಕಾನೂನಿನ ಲೋಪವನ್ನು ದುರುಪಯೋಗಿಸಿ ಪಾರಾಗುವವರನ್ನು ತಡೆಯಲು ಅಲ್ಪಸ್ವಲ್ಪ ತೊಂದರೆ ಬಂದರೆ ಅದನ್ನು ಸಹಿಸಬೇಕಾಗಬಹುದು.

  ಪ್ರತ್ಯುತ್ತರಅಳಿಸಿ
 10. ಕಳೆದು ಹೋಗುತ್ತಿರುವ "ನಾನು ನನ್ನದರ" ಮದ್ಯೆ ಕಾನೂನಿನ ತಿದ್ದುಪಡಿಯ ಉಪಯೋಗವಾಗಬಹುದಾ ಸರ್..?

  ಪ್ರತಿಕ್ರಿಯೆಗೆ ಧನ್ಯವಾದ

  ಪ್ರತ್ಯುತ್ತರಅಳಿಸಿ
 11. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 12. "ಕಳೆದ ವಸ್ತುವನ್ನು ಕಳೆದಲ್ಲೇ ಹುಡುಕು" ಇದು ಯಂಡಮೂರಿ ವೀರೇಂದ್ರನಾಥ್ ಬರೆದಿರುವ ದುಡ್ಡು ದುಡ್ಡು ದುಡ್ಡು ಎನ್ನುವ ಕಾದಂಬರಿಯಲ್ಲಿ ಬರುವ ಸಂಭಾಷಣೆ. ಇರಬೇಕಾದ ಮನುಷ್ಯತ್ವ ನಾವು ಹುದುಕಬೇಕಾದ್ದು ನಮ್ಮಲ್ಲೇ ಅಲ್ಲವೇ. ಸುಂದರ ಸಂದೇಶ ಕೊಡುವ ಸಾಲುಗಳು ಇಷ್ಟವಾಯಿತು ಪಿ ಎಸ್

  ಪ್ರತ್ಯುತ್ತರಅಳಿಸಿ