ಡಿಸೆಂಬರ್ 15, 2011

ಕಾದಿಹೆನು.. !

ಮುನಿಯ ಕೆಂಗಣ್ಣಿಗೆ, ಶಾಪಗ್ರಸ್ಥೆಯಾಗಿ
ವ್ಯಾಮೋಹದ ಸಂಚಿಗೆ  ಬಲಿಯಾಗಿ 
ಅಗಣಿತ ಶಿಲೆಗಳಲ್ಲಿ ತಾನೊಂದು ಶಿಲೆಯಾಗಿ
ಮೋಕ್ಷದ ನಿರಂತರ ನೀರಿಕ್ಷೆಯಲ್ಲಿ 
ಕಾದಿಹೆನು..

ಹೃದಯ ಸೋತಿತು ಪ್ರೇಮದಲ್ಲಿ
ಮುಗ್ದ ಬುದುಕು ಹತವಾದ ನೋವಿನಲ್ಲಿ 
ಪತಿ ಸೇವೆಯ ಭಾಗ್ಯವಿಲ್ಲದ ನಿರಾಶೆಯಲ್ಲಿ 
ಕರಗಲೋಲ್ಲದ ಕೊರಗಿನಲ್ಲಿ
ಕಾದಿಹೆನು..

ಯಾರರಿಯರು ತನ್ನಂತರಂಗದ ತಳಮಳವನ್ನಿಲ್ಲಿ 
ತಟ್ಟಿ ಕುಟ್ಟಿದರೂ ಭಾವವರಿಯದು ಶಿಲೆಯಲ್ಲಿ 
ಬಿಸಿಲ ಧಗೆ ಸುಟ್ಟರೂ ಕಾಯುತ್ತಿದ್ದೇನೆ 
ಮೃದು-ಮಧುರವಾಗೆ
ಬಂದು ಬಿಡು ಶ್ರೀರಾಮ..
ಕಾದಿಹೆನು ನಾ  ಅಹಲ್ಯೆ..

22 ಕಾಮೆಂಟ್‌ಗಳು:

 1. ಅಬ್ಬಾ.... ಎಂತಹ ಪದ ಬಳಕೆ.... ಮೆಚ್ಚ ಬೇಕು ನಿನ್ನ ಈ ಕವನವನ್ನ ಸಿಸ್ಟರ್.....

  ಅಹಲ್ಯೆ ಕಾದಿಗಳು ಆ ಶ್ರೀ ರಾಮನ ಬರುವಿಕೆಗಾಗಿ..... ಹಿಂದೇ ಒಮ್ಮೆ ನಾನು ಬರೆದಿದ್ದೆ ಇನ್ನೂ ಕಾದಿಗಳು ರಾಧೆ ಅನ್ನೋ ಕವನ ಅದು ಈಗ ನನಗೆ ನೆನಪಾಯ್ತು.....

  ಶುಭವಾಗಲಿ
  ~$ಮರೀಚಿಕೆ$~

  ಪ್ರತ್ಯುತ್ತರಅಳಿಸಿ
 2. ದುಃಖಕ್ಕಿಂತ ದುಗುಡ ಹೆಚ್ಚಾದಾಗ.. ಅಳುವಿಗಿಂತ ಅಳುಕೇ ಮೇಲಾದಾಗ ಮೌನವೇ ಮಾತಾಗುತ್ತದೆ...
  ಈ ೨ ವಾಕ್ಯ ನಾನು ಸಿಕ್ಕಾಪಟ್ಟೆ ಇಷ್ಟಪಟ್ಟೆ...... ನಿಮ್ಮ ಪ್ರಯತ್ನಕ್ಕೆ , ನಿಮ್ಮ ಬೆಂಬಲಕ್ಕೆ ನಾವಿದ್ದೇವೆ.....
  ನಿಮ್ಮ ಇಷ್ಟರವರೆಗಿನ ಎಲ್ಲ ಕವನ ಗಳನ್ನೂ ಪುಸ್ತಕ ದ ರೂಪದಲ್ಲಿ ಹೊರ ತರುವಿರಾದರೆ ನಮ್ಮಿಂದ ಆಗುವ ಸಹಕಾರ ನೀಡಲು ನಾನು ಸಿದ್ಧ.... ನಿಮಗೆ ಶುಭವಾಗಲಿ....

  ಪ್ರತ್ಯುತ್ತರಅಳಿಸಿ
 3. TanQ so much annayya...


  ನಿಮ್ಮ ಕಾದಿಹಳು ರಾಧೆ ಓದಿದ್ದೆ...
  ಚಂದದ ಕವನ ಅದು ..
  ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....ಧನ್ಯವಾದಗಳು ..

  ಪ್ರತ್ಯುತ್ತರಅಳಿಸಿ
 4. ನಿತಿನ್ ನಿಮ್ಮ ಅಭಿಪ್ರಾಯ, ಬೆಂಬಲಕ್ಕೆ ಧನ್ಯವಾದಗಳು..

  ಬಹುಶಃ ನೀವು ಕೊಟ್ಟಿರುವ ಇಷ್ಟು ದೊಡ್ಡ offer ಅನ್ನು ಬೇಡವೆನ್ನುವಷ್ಟು ದೊಡ್ಡವಳೂ ನಾನಲ್ಲ..ಹಾಗೆಯೇ ಒಪ್ಪಿಕ್ಕೊಳ್ಳುವಷ್ಟು ಸಾಮರ್ಥ್ಯ, ಪ್ರಬುದ್ದತೆ , ನನಗಿದೆ ಎಂದು ಅನಿಸುತ್ತಲೂ ಇಲ್ಲ....

  ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ...
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ರಾಮನ ಪಾದ ಸ್ಪರ್ಶಕೆ ಕಾಯುತಿರುವ ಅಹಲ್ಯೆಯ ಮನದ ತುಡಿತಗಳು ಚೆನ್ನಾಗಿವೆ ಚಿತ್ರಿತವಾಗಿದೆ. ನಿಮಗೆ ಅಭಿನಂದನೆಗಳು..

  ಪ್ರತ್ಯುತ್ತರಅಳಿಸಿ
 6. ಅಹಲ್ಯಾ ಮೊರೆ ಸು೦ದರವಾಗಿ ಮೂಡಿ ಬ೦ದಿದೆ. ಅಭಿನ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ
 7. ಅಬ್ಬಾಬ್ಬಬ್ಬಬ್ಬಬ್ಬ...!! :)
  Wow... wow... Wow..!!
  ಎಂಥಾ ಕವನ..? ಎಂಥಾ ಕವನ..?? :))
  "ಕಾವ್ಯದ ರಾಣಿ"ಯ ಕೈಯಲ್ಲರಳಿದ ಕಾವ್ಯದ ಸೌಗಂಧವೇ ಸೌಗಂಧ..! :)
  ಒಮ್ಮೊಮ್ಮೆ ಕಾಯುವಿಕೆಯಲ್ಲೂ ಒಂಥಾರ ಸುಖವಿದೆಯೇನೋ ಅನಿಸುತ್ತೆ..!
  ಬಲಿಷ್ಟ ಪದಗಳ ಸೊಗಸಾದ ಕಾವ್ಯರಚನೆಗೆ ಅಭಿನಂದನೆಗಳು..! :)

  ಪ್ರತ್ಯುತ್ತರಅಳಿಸಿ
 8. super lines sushma...:) I don't have any words to say...:):)

  ಪ್ರತ್ಯುತ್ತರಅಳಿಸಿ
 9. ಪ್ರತಾಪ್ ಸರ್, ಅನಂತ್ ಸರ್, ಗೌಡ್ರೆ, ಅಭಿ.... ಮೆಚ್ಚಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು,....
  ಪ್ರೋತ್ಸಾಹ ಹೀಗೆ ಇರಲಿ...

  ಪ್ರತ್ಯುತ್ತರಅಳಿಸಿ
 10. ಅನುಪಮವಾಗಿದೆ ನಿಮ್ಮ ಕವಿತೆ ಗೆಳೆಯರೆ.. ಅಹಲ್ಯ ಭಾವವನ್ನು ಅನನ್ಯವಾಗಿ ಬಿಂಬಿಸಿದ್ದೀರಿ.. ಶುಭವಾಗಲಿ ನಿಮಗೆ..

  ಪ್ರತ್ಯುತ್ತರಅಳಿಸಿ
 11. ಕಾಯುವ ಹೆಣ್ಣಿನ ಪುರಾತನ ಮತ್ತು ನಿರಂತನಗಳ ಮಧ್ಯೆಯ ಭಾವ ಇಷ್ಟ ಆಯ್ತು...ಚನ್ನಾಗಿದೆ

  ಪ್ರತ್ಯುತ್ತರಅಳಿಸಿ
 12. ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಮೋದ್ ಸರ್ & ಅಜಾದ್ ಸರ್..

  ಪ್ರತ್ಯುತ್ತರಅಳಿಸಿ
 13. wonderful usage of literature! pada balake tumba chennagi maadidhira :) ramanigagi kaada ahalyeya chitra kanne munde bandantayitu nimma ee savigavana odi...

  ಪ್ರತ್ಯುತ್ತರಅಳಿಸಿ
 14. ಮಾಡದ ತಪ್ಪಿಗೆ... ಮಾಡಿದ ತಪ್ಪಿಗೆ.. ಶಿಕ್ಷೆ ಘೋರ ಎನಿಸಿದರು ಅದರ ಹಿಂದಿನ ಉದ್ದೇಶ ಯಾವತ್ತಿಗೂ ಚಿರನೂತನ. ಅಭಿಮನ್ಯು ಚಿತ್ರದ ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ ಹಾಡು ನೆನಪಿಗೆ ಬಂತು ನಿಮ್ಮ ಕವನ. ಸುಂದರ ಕವನ ಪಿ ಎಸ್

  ಪ್ರತ್ಯುತ್ತರಅಳಿಸಿ