ಡಿಸೆಂಬರ್ 26, 2011

ಕಿಚ್ಚು..


ಅವನಲ್ಲಿದ್ದ ಪಣವು ಇಷ್ಟೇ ಇಷ್ಟು..
ಹೊಟ್ಟೆಯ ಕಿಚ್ಚಿಗೆ ಸಾಕಾಗುವಷ್ಟು
ಪುಟ್ಟ ಸೂರ ಕಟ್ಟಿಕ್ಕೊಳ್ಳುವಷ್ಟು
ಬಟ್ಟೆ ಬರೆಗೆ ತಕ್ಕಷ್ಟು.
ಇದ್ದಿದ್ದು ಇಷ್ಟೇ ಇಷ್ಟು.
ಬೇಕಿತ್ತು ಅಷ್ಟು..
ಆಸೆ ಸಿಕ್ಕಷ್ಟು ಬಾಚಿಕ್ಕೊಳ್ಳುವಷ್ಟು
ದಾಹಕ್ಕೆ ಮಿತಿಯಿರದಷ್ಟು
ಇಲ್ಲಿ ಸಿಗಲಾರದು ಅಲ್ಲಿರುವಷ್ಟು
ಹೊರವುದಷ್ಟೇ ಸರಿ!

ಇಷ್ಟಪಟ್ಟಿದ್ದು ಕಷ್ಟವಾಗಿದೆ
ಸೊರಗಿ ದೇಹ ನಿತ್ರಾಣವಾಗಿದೆ 
ಜಠರದ ಹಸಿವಿಗೆ
ದೇಹ ದಣಿಯ ತಾಯಾರಿಲ್ಲ
ತಣ್ಣೀರ ಬಟ್ಟೆಯೂ ಆರಿದೆ
ಇಂತಹ ಹೊತ್ತಲ್ಲೇ ಬಿಟ್ಟುಬಂದ
ಅಂವ ನೆನಪಾಗುತ್ತಾನೆ
ಕಿಚ್ಚ ದಹಿಸಲು ಅಸಮರ್ಥನಾದವ  
ಈ ಮೂರು ಗಂಟು ಬಿಗಿದವ.
 

13 ಕಾಮೆಂಟ್‌ಗಳು:

 1. ಜೀವನ ಜೀಕಾಟ ಬಲು ಕಷ್ಟ...
  ಬಡವನ ಒಡಲಿನ ಕಿಚ್ಚು ತಣಿಸುವವರೇ ಇಲ್ಲ..
  ಅದೂ ಒಂದು ದಿನ ಕುವೆಂಪು ಹೇಳುವಂತೆ....
  ಕಲ್ಕಿಯವತಾರ ತಾಳಿ ಸಿಕ್ಕ ಸಿಕ್ಕವರನ್ನು ಕೊಚ್ಚಿ ಹಾಕುತ್ತದೆ..
  ಕಲಿಯುಗದಂತ್ಯದ 'ಕಲ್ಕಿ' ಬಡವನೆ..

  ಏನು ಮಾಡುವುದು ಹೇಳಿ..
  ಬಿಟ್ಟುಬರಬಾರದಿತ್ತು ಹಾಗೆಲ್ಲಾ..
  ಸುಖವಿರಲಿ-ದುಃಖವಿರಲಿ ಸದಾ ಜೊತೆಗಿರಬೇಕು...
  ನಾನು ಬಡವಿ,, ಆತ ಬಡವ..
  ಒಲವೇ ನಮ್ಮ ಬದುಕು,, ಅನ್ನೋ
  ದ.ರಾ.ಬೇಂದ್ರೆಯವರ ಮಾತನ್ನು..
  ಬಿಟ್ಟು ಬರುವ ಮುನ್ನೊಮ್ಮೆ ನೆನಪಿಸಿಕೊಳ್ಳಬೇಕಿತ್ತು..
  ಗಂಟಿನ ನಂಟು.. ಬಿಡಿಸಲಾರದಷ್ಟು ಕಗ್ಗಂಟು..

  ಪ್ರತ್ಯುತ್ತರಅಳಿಸಿ
 2. ಆಸೆ ಪಡುವುದು ತಪ್ಪಲ್ಲ. ಆದರೆ ಆಸೆಯಿ೦ದ ಅನರ್ಥವಾಗಬಾರದಲ್ಲ! ಕನಿಕರವನ್ನಷ್ಟೇ ಪಡಬಹುದೇನೋ ಆಕೆಯ ಬಗ್ಗೆ. ಕವನ ಚೆನ್ನಾಗಿದೆ ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

  ಪ್ರತ್ಯುತ್ತರಅಳಿಸಿ
 3. ಆಸೆ ಅತಿಯಾದಾಗ, ಮೀತಿಯಿಲ್ಲದಷ್ಟು ಬೆಳೆದಾಗ ಇಂತವುಗಳು ಸಂಭವಿಸುತ್ತದೆ..
  ಬಹುಶಃ ಆಗ ಯಾವ ಮಾತೂ, ಯಾರ ಮಾತೂ ಉಪಯೋಗಕ್ಕೆ ಬರಲಾರದು..ಕಾಲನೋಬ್ಬನೆ ಉತ್ತರಿಸಲು ಶಕ್ತ..

  ಧನ್ಯವಾದಗಳು ಗೌಡ್ರೆ, n ಪ್ರಭಾಮಣಿ ಮೇಡಂ..
  ನಿಮ್ಮ ಬ್ಲಾಗ್ ನಲ್ಲಿ ನನ್ನದೂ ಸದಸ್ಯತ್ವ ಇದೆ...thank you so much..

  ಪ್ರತ್ಯುತ್ತರಅಳಿಸಿ
 4. ಅಬ್ಬಾ!! ಸಾಗರದ ಹನಿಯಂತಿದ್ದ ಕವನ, ಬರು ಬರುತ್ತಾ ಬುಸುಗುತ್ತಾ ಹೋಗುತ್ತದೆ.... ಇಷ್ಟವಾಯ್ತು ಕವನ..... ಅಳುಕಿರದೆ ನಿಂತಿಹ ಮೌನ......

  ಪ್ರತ್ಯುತ್ತರಅಳಿಸಿ
 5. ಅತಿ ಆಸೆಯ ಅ೦ತ್ಯ ಯಾವಾಗಲೂ ಹೀಗೆ...ಇಷ್ಟವಾಯಿತು...:)

  ಪ್ರತ್ಯುತ್ತರಅಳಿಸಿ
 6. ಸುಶ್ಮಾ ಕವನದ ಕಡಕ್ ಶಬ್ದಗಳು ಭಾವಗಳ ನಿಲುವನ್ನು ಖಡಾಖಂಡಿತವೆನ್ನುವಂತೆ ಹೇಳುವುದಕ್ಕೆ ಅನುರೂಪನಾಗಿವೆ... ಹೂಂ..

  ಪ್ರತ್ಯುತ್ತರಅಳಿಸಿ
 7. ಧನ್ಯವಾದಗಳು ಅಜಾದ್ ಸರ್ & ಶ್ರುತಿ ಮೇಡಂ..

  ಪ್ರತ್ಯುತ್ತರಅಳಿಸಿ
 8. ಮಂಜಣ್ಣ..., ಸೀತಾರಾಮ್ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 9. "ಓ ನನ್ನ ನಲ್ಲೆ ಚಿತ್ರದ ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ ಓಹ್" ಅನ್ನುವ ಹಾಡಿನಂತೆ ದುಡ್ಡಿದ್ರೆ ದುನಿಯಾ ಜುಖ್ತಾ ಹೇ ತರಹ ಆಗಿಬಿಟ್ಟಿದೆ. ಆಶಾ ಭಾವ ಇಟ್ಟುಕೊಂಡವಳು ನಿಜ ಸಂಗತಿ ಅರಿವಾದಾಗ ಪಡುವ ಪಾಡು... !
  ಸುಂದರವಾದ ಭಾವ ಪಿ ಎಸ್

  ಪ್ರತ್ಯುತ್ತರಅಳಿಸಿ
 10. ದುಡ್ಡೇ ದೊಡ್ಡಪ್ಪ ಆದ್ರೆ, ವಿದ್ಯೆ ಅವರಪ್ಪ ಅಲ್ವೇ ಅಣ್ಣಯ್ಯ ... ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ