ಜನವರಿ 18, 2012

ಹೆಂಗಸು..


ಹರಿದಿದ್ದು ಬೆವರೋ ರಕ್ತವೋ ಅಸ್ಪಷ್ಟ 
ಕದಡಿದಷ್ಟು  ಕೆಸರು ಹೂಳಿಸಿಕ್ಕೋಳ್ಳುತ್ತಿತ್ತು
ದಣಿವರಿಯದ ಮೈಗೆ ರಾತ್ರಿ-ಹಗಲೆರಡರಲ್ಲಿ ಕೆಲಸ
ಚಿಂದಿಯಾದ ಬದುಕಿನ ಶ್ರಮಕ್ಕೆ 
ಸಿಕ್ಕಷ್ಟೇ ಕಾಸು

ಎದೆಯೊಳಗಿನ ಬವಣೆಗಳ ಬಿಸಿ-ಬಿಸುಪಲ್ಲಿ
ಕಾವಾರಿಸಿಕೊಂಡವರೇ ಎಲ್ಲಾ
ಯೌವನಕ್ಕೆ  ದಯೆಯಿಲ್ಲ ಮಗನೇ,ಗಡುಸಾಗುತ್ತದೆ
ಮೈ ಬಗ್ಗಿಸಿದಷ್ಟು ಹೊಳಪೇರುತ್ತದೆ

ಎಲ್ಲರೊಳು ಮೀಗಿ, ಜತನವಾಗಿ
ಸೆರಗ ತುದಿಯಲ್ಲಿ ಕಾಸು ಮಡಚಿ ಕೂಡಿಟ್ಟಿದ್ದೆನೆ 
ಬಯಲ ಹೆಂಗಸೆಂಬುದೊಂದು  ಬಲೆ
ಬಲೆಯೊಳಗೆ  ಬಿದ್ದಮೇಲೆ ನೆಲೆಯಿಲ್ಲ, ಬೆಲೆಯಿಲ್ಲ 

ಯಾರಿಗೆ ಅದೇನೇನೋ ನಾನಾಗಿದ್ದರೂ 
ಕಂದಾ..ನಾ ನಿನ್ನ ಅಮ್ಮನೇ...

20 ಕಾಮೆಂಟ್‌ಗಳು:

 1. ಯಾರಿಗೆ ಅದೇನೇನೋ ನಾನಗಿದ್ದರೂ
  ಕಂದಾ..ನಾ ನಿನ್ನ ಅಮ್ಮನೇ...

  ಮನ ಮುಟ್ಟುವ ಸಾಲುಗಳು ...ಹೀಗೆ ಬರೀತಾ ಇರಿ!

  ಪ್ರತ್ಯುತ್ತರಅಳಿಸಿ
 2. bhaavbagaLalli , padagaLalli , avaLa , niTTusiru ede taTTuttade.. Kavite chennaagide.

  ಪ್ರತ್ಯುತ್ತರಅಳಿಸಿ
 3. ಸುಮನಕ್ಕ, ಪ್ರತಾಪ್ ಸರ್...ಪ್ರತಿಕ್ರಿಯೆಗೆ ಧನ್ಯವಾದಗಳು..

  "ಹೆಂಡತಿಯೆಂದರೆ ಬೇಲಿ
  ಹೆಂಗಸೆಂದರೆ ಬಯಲು "

  ಎಂದು ಎಲ್ಲೊ ಓದಿದ ಸಾಲುಗಳು ಈ ಕವಿತೆಗೆ ಸ್ಫೂರ್ತಿ....ಪ್ರೋತ್ಸಾಹ ಹೀಗೆ ಇರಲಿ..

  ಪ್ರತ್ಯುತ್ತರಅಳಿಸಿ
 4. ಪ್ರತ್ಯುತ್ತರಗಳು
  1. ತಾಯಿಯ ಮಮತೆಗೆ ಸರಿಸಾಟಿ ಯಾವುದು..? ಕಣ್ಣಿಗೆ ಕಾಣುವ ದೇವರು ಅವಳು ತಾನೇ?
   ಪ್ರತಿಕ್ರಿಯೆಗೆ ಧನ್ಯವಾದಗಳು ಗೌಡ್ರೆ...

   ಅಳಿಸಿ
 5. ಸುಶ್ಮಾ ತಾಯ ಮಮತೆಗೆ ಸಮನಿಲ್ಲ.. ಎಷ್ಟು ಬೆಳೆದರೂ ಅಪ್ಪನಿಗೆ ಮಕ್ಕಳು ಬೇರೆ ಬೇರೆ ಕಂಡರೂ ಅಮ್ಮನಿಗೆ ಹಸುಗೂಸೇ... ಚಿತ್ರ ರಚನೆ ನಿಮ್ಮದೇನೇ ಎಂದುಕೊಂಡಿದ್ದೇನೆ..ಒಟ್ಟಿನಲ್ಲಿ ಕವನ ಮತ್ತು ಚಿತ್ರ ಎರಡೂ ಹಿಡಿಸಿದವು..
  ಎಲ್ಲರೊಳು ಮೀಗಿ, ಜತನವಾಗಿ
  ಸೆರಗ ತುದಿಯಲ್ಲಿ ಕಾಸು ಮಡಚಿ ಕೂಡಿಟ್ಟಿದ್ದೆನೆ
  ಈ ಸಾಲುಗಳು..ನನಗೆ ನನ್ನಮ್ಮ ಸ್ಕೂಲಿಗೆ ಹೋಗುವಾಗ ಅಪ್ಪನ ಕಣ್ಣು ತಪ್ಪಿಸಿ ಕೊಡುತ್ತಿದ್ದ ನಾಲ್ಕಾಣೆ ಎಂಟಾಣೆಯನ್ನ ನೆನಪಿಸುತ್ತೆ....

  ಪ್ರತ್ಯುತ್ತರಅಳಿಸಿ
 6. ಚಿತ್ರ ನನ್ನದಲ್ಲ.. ಅಂತರ್ಜಾಲದಲ್ಲಿ ದೊರಕಿತು...ಬಾಲ್ಯ ನೆನಪಿಸಿಕ್ಕೊಂಡು, ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್...

  ಪ್ರತ್ಯುತ್ತರಅಳಿಸಿ
 7. ಮನಸ್ಸಿಗೆ ತಟ್ಟುವ ಕವನವು ಮನಸ್ಸಿನಲ್ಲೇ ಉಳಿದು ಬಿಡುತ್ತದೆ. ಅದರ ಲಯ ಮನಸ್ಸಿನಲ್ಲೇ ರಿಂಗಣಿಸುತ್ತಾ ಇದ್ದು ಬಿಡುತ್ತದೆ.

  ಹೆಂಗಸಿನ ಅನಿವಾರ್ಯ ಕರ್ಮ ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ.

  ಆಕೆಯ ಕಂದನಿಗೆ ಆಕೆ ಉತ್ತರಿಸಲಾರದ ಪ್ರಶ್ನೆ!

  ನನ್ನ ಬ್ಲಾಗಿಗೂ ಸ್ವಾಗತ.

  ಪ್ರತ್ಯುತ್ತರಅಳಿಸಿ
 8. ಬದರಿ ಸರ್, ಅಭಿ...ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 9. ಅಬ್ಬಾ, ಎದೆ ತಟ್ಟುತ್ತಾ ಹೋಗುತ್ತವೆ ಪ್ರತೀ ಸಾಲುಗಳು..... ಆಕೆ ಮಾತ್ರ ವಸುಂಧರೆಯಂತೆ, ಎಲ್ಲವನ್ನೂ ಸಹಿಸಿಕೊಳ್ಳುವ, ಸಲಹುವ ಆಂತರ್ಯದವಳು.... ಆಕೆಗೆ ಆಕೆಯೇ ಸಾಟಿ....

  ಪ್ರತ್ಯುತ್ತರಅಳಿಸಿ
 10. yen yelbeko gottagtilla but neevu balasiruva padagalu sahitya bhasheyalli utkrutavadudu.. adu samanya mahileya badukina chitranavannu heneda bage attyuttamma anistide....

  ಪ್ರತ್ಯುತ್ತರಅಳಿಸಿ
 11. hennina bavane endigu mugiyada kaviteyante... taayi tanna maguvige taanu enadeno tilidalla aadre ninna taayaade ennuvudu hrudayasparshi saalugalu :)

  ಪ್ರತ್ಯುತ್ತರಅಳಿಸಿ
 12. ಧನ್ಯವಾದಗಳು ಪ್ರವರ, ರಾಜ್, ಮೈ ಡ್ರೀಮ್ಸ್....

  ಪ್ರತ್ಯುತ್ತರಅಳಿಸಿ
 13. ಕವನ ಓದಲಿಲ್ಲ ಇನ್ನೂ...ಚಿತ್ರ ಮಾತ್ರ ಸೂಪರ್sssss
  :-)
  ಮಾಲತಿ ಎಸ್....

  ಪ್ರತ್ಯುತ್ತರಅಳಿಸಿ
 14. ಪ್ರತ್ಯುತ್ತರಗಳು
  1. ಇದು ಮೂಕ ಮನದ ರಾಗವೇ...!
   ಮೌನರಾಗ..!
   ಧನ್ಯವಾದಗಳು ಸರ್...

   ಅಳಿಸಿ
 15. ತ. ರಾ ಸು ಅವರ "ಮಸಣದ ಹೂವು" ಚಿತ್ರ ಅಲ್ಲ ಕಾದಂಬರಿ ನೆನಪಿಗೆ ಬಂತು. ನೋವು, ದುಃಖ, ದುಮ್ಮಾನಗಳು ಅನಾವರಣ ಗೊಂಡಿರುವ ಬಗೆ ಎರಡು ಮಾತಿಲ್ಲ ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ