ಜನವರಿ 31, 2012

ಹನಿಗಳು...

೧. ಮಾಗಿಯ ಮುಂಜಾವಲಿ
    ದೃಡವಾಗಿ ನಿಂತಿರುವ ನಿನ್ನನ್ನು
    ನೇಸರ ಮುತ್ತಿಕ್ಕುವ ಮುನ್ನ
    ಬಳ್ಳಿಯಾಗಿ ನಾ ತಬ್ಬಬೇಕಿದೆ

೨. ಮನಸ ದುಮ್ಮಾನವನ್ನೆಲ್ಲಾ
    ನಿನ್ನೆದುರು ಹರವಿ
    ಹಗುರಾಗಿಸಿಕ್ಕೊಳ್ಳೊಣವೆಂದರೆ
    ಆಮೇಲೆ ತಿಳಿದಿದ್ದು
    ನೀ ಮನದ- ಕುರುಡನೆಂದು

೩. ನೀ ಬೆನ್ನು ಮಾಡಿ ಹೋದಾಗ
    ನಾ ಕಾದಿದ್ದೆ, ಪ್ರಬುದ್ಧತೆಯೊಂದಿಗೆ
    ಮರಳುವಿಯೆಂದು
    ನನಗಾಗ ತಿಳಿದಿರಲಿಲ್ಲ
    ನೀ ಬಂಧನವ ಕಳಚಿಟ್ಟು
    ಹೊರ ನಡೆದಿದ್ದೆಂದು

 
೪. ನಿನ್ನ ಕಲ್ಲೆದೆ ಕರಗಲೆಂದು
      ಮತ್ತೆ ಮತ್ತೆ ಬಡಿದೆ
      ನೀ ಕರಗಲಿಲ್ಲ
      ಒಡೆದು ಹೋದೆ...!


೫. ನಿನ್ನ ಮೌನಕ್ಕೊಂದಿಷ್ಟು
     .....ನೀಡಿ ಸಾಯಿಸು
    ನಾ ನಿನ್ನ ಸಂಗಕ್ಕೆ
    ನೇಣು ಬಿಗಿಯುವ ಮುನ್ನ...!!

 19 ಕಾಮೆಂಟ್‌ಗಳು:

 1. ಹನಿಗಳು ಚೆನ್ನಾಗಿವೆ.
  ಮೊದಲನೆದು ತುಂಬಾ ಚೆನ್ನಾಗಿದೆ.
  ಸ್ವರ್ಣಾ

  ಪ್ರತ್ಯುತ್ತರಅಳಿಸಿ
 2. ಎಲ್ಲಾ ಹನಿಗಳೂ ಸೂಪರ್......


  ನಿನ್ನ ಕಲ್ಲೆದೆ ಕರಗಲೆಂದು
  ಮತ್ತೆ ಮತ್ತೆ ಬಡಿದೆ
  ನೀ ಕರಗಲಿಲ್ಲ
  ಒಡೆದು ಹೋದೆ...!

  -ಇದು ಜಾಸ್ತಿ ಇಷ್ಟ ಆಯಿತು....
  http://ashokkodlady.blogspot.com/

  ಪ್ರತ್ಯುತ್ತರಅಳಿಸಿ
 3. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 4. ಹನಿ ಹನಿಗಳ ಸಿಂಚನ..
  ಸಿಹಿ ಮಧುರಾಲಾಪನ..

  ಸ್ಯಾನೆ ಸಂದಾಗೈತೆ ಚುಚಿ... :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಗೌಡ್ರೆ....

   ಬಿಸಿಲು ಬೆಳದಿಂಗಳ ಹುಡುಗಿ ಯನ್ನು ಆದಷ್ಟು ಬೇಗ ಪರಿಚಯ ಮಾಡಿಸಿ...

   ಅಳಿಸಿ
 5. ಸುಶ್ಮಾ ಬಹಳ ಚನ್ನಾಗಿವೆ ಕವನಗಳು... ಮೊದಲನೇ ಮತ್ತು ನಾಲ್ಕನೇ ಕವನಗಳು ಎದ್ದು ನಿಲ್ಲುತ್ತವೆ..
  ಮಾಗಿಯ ಮುಂಜಾವಲಿ
  ದೃಡವಾಗಿ ನಿಂತಿರುವ ನಿನ್ನನ್ನು
  ನೇಸರ ಮುತ್ತಿಕ್ಕುವ ಮುನ್ನ
  ಬಳ್ಳಿಯಾಗಿ ನಾ ತಬ್ಬಬೇಕಿದೆ
  ಇದು ತುಂಬಾ ಇಷ್ಟವಾಯಿತು...

  ಪ್ರತ್ಯುತ್ತರಅಳಿಸಿ
 6. ಅದ್ಭುತವಾದ ಹನಿಗವನಗಳು ಮೇಡಂ ಇಷ್ಟವಾಯಿತು ಈ ಸಾಲುಗಳಂತೂ ತುಂಬಾ ಚೆನ್ನಾಗಿವೆ... >ಮನಸ ದುಮ್ಮಾನವನ್ನೆಲ್ಲಾ ನಿನ್ನೆದುರು ಹರವಿ ಹಗುರಾಗಿಸಿಕ್ಕೊಳ್ಳೊಣವೆಂದರೆ ಆಮೇಲೆ ತಿಳಿದಿದ್ದು
  ನೀ ಮನದ- ಕುರುಡನೆಂದು< ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್...

   ಅಳಿಸಿ
 7. ಪ್ರತಿಕ್ರಿಯೆಗೆ ಧನ್ಯವಾದಗಳು ಗಿರೀಶ್ ಸರ್ & ಈಶ್ವರ್ ಪ್ರಸಾದ್ ಸರ್....
  ಪ್ರೋತ್ಸಾಹ ನಿರಂತರವಾಗಿರಲಿ..

  ಪ್ರತ್ಯುತ್ತರಅಳಿಸಿ
 8. ಓದುತ್ತಾ ಓದುತ್ತಾ ಮನಸು ಮೂಕವಾಯ್ತು... ಭಾವದುಂಧುಬಿ ಮೊಳಗಿಸಿದೀರಿ ...
  ಹುಸೇನ್

  ಪ್ರತ್ಯುತ್ತರಅಳಿಸಿ
 9. ಧನ್ಯವಾದಗಳು ಶ್ರೀವತ್ಸ ಸರ್ & ಹುಸೇನ್ ಸರ್..
  ನಿಮ್ಮ ಅಕ್ಕರೆ ಹೀಗೆ ಜೊತೆಗಿರಲಿ...

  ಪ್ರತ್ಯುತ್ತರಅಳಿಸಿ
 10. ತಮಟೆ ಸದ್ದಿಗೆ ಎದ್ದವರು ಒಬ್ಬರಾದರೆ
  ಡೋಲಿನ ಸದ್ದಿಗೆ ಕುಣಿದವರು ಮತ್ತೊಬ್ಬರು ಎನ್ನುವಂತೆ ವಿವಿಧ ಭಾವ ಭಂಗಿಗಳನ್ನು ಹೊರಳಿಸುವ ಪದಗಳ ನರ್ತನ ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ಬರವಣಿಗೆಗೆ ಬ್ಲಾಗ್ ಬಂಧುಗಳ ಪ್ರೋತ್ಸಾಹವೇ ಕಾರಣ.. ಧನ್ಯವಾದಗಳು...

   ಅಳಿಸಿ