ಫೆಬ್ರವರಿ 8, 2012

ಕನಸ ಖಜಾನೆ..

ಅಟ್ಟದ ಮೇಲೊಂದು ಇಟ್ಟಿಗೆಯ ಬದಿಯಲ್ಲಿ
ಕನಸ ಖಜಾನೆಗೆ ಬೀಗ ಜಡಿದು ಇಟ್ಟುಬಿಟ್ಟಿದ್ದೆ 
ಸುಮ್ಮನಾದರೂ ಕೂರುತ್ತ, ಅಲೆಯುತ್ತಾ
ದಿಕ್ಕಿಲ್ಲದೆ ಎಡವುತ್ತಾ, ಪರದಾಡುತ್ತಾ..!
ಖಜಾನೆಯ ಕೀಲಿಕೈ ಕಳೆದುಹೋಗಿತ್ತು 
ಒಳಗಿನ ಕನಸುಗಳಂತೆ..
ದುಃಖವಿರಲಿಲ್ಲ..!
ಕತ್ತಲ ಬೆನ್ನಿಗೆ ಬೆಳಕು ಸುತ್ತಲೂ
ಕಳೆದುಹೋದುದು ತಡಕಾಡಿತು
ಜಡಿದ ಬೀಗ ಮುರಿದು ಹೋಯಿತು 
ಅಂಧಃಕಾರದ  ಕಾನನದಲ್ಲಿ
ಎತ್ತಲೊಂದು ಸೂರ್ಯರಶ್ಮಿ 
ಹೂ ಬಿಸಿಲು ಆವರಿಸುತ್ತದೆ ಮುತ್ತಿಡುತ್ತದೆ, 
ತೆರೆದ ಪೆಟ್ಟಿಗೆಯಲ್ಲಿ ರಾಶಿ ಕನಸುಗಳು 
ಕೈಬೀಸಿ ಕರೆದಂತಿತ್ತು 
ಕಸು ಮಾಡಲು ಕಾದಂತಿತ್ತು
ತುಟಿ ಬಿರಿಯಲು ಮೂಡಿತೊಂದು ಆತ್ಮವಿಶ್ವಾಸ 
ಕತ್ತಲ ಸರಿಸಿ ಬೆಳಕು ಹರಿಯಿತು
ಅಪ್ಪಿಕೊಂಡ ಕನಸ ಖಜಾನೆ ಭದ್ರವಾಯಿತು.25 ಕಾಮೆಂಟ್‌ಗಳು:

 1. ಸುಮ್ಮನಾದರೂ ಕೂರುತ್ತ, ಅಲೆಯುತ್ತಾ
  ದಿಕ್ಕಿಲ್ಲದೆ ಎಡವುತ್ತಾ, ಪರದಾಡುತ್ತಾ..!
  ಖಜಾನೆಯ ಕೀಲಿಕೈ ಕಳೆದುಹೋಗಿತ್ತು
  ಒಳಗಿನ ಕನಸುಗಳಂತೆ..
  ee saalugalu istavaadavu....

  kanasina khajaane bhadravaagiralu aatmavishwasa beke beku... Chandada kavana.

  ಪ್ರತ್ಯುತ್ತರಅಳಿಸಿ
 2. ಸುಂದರ ಕವನ. ಸೂರ್ಯರಶ್ಮಿ ತಾಗಿ ಕನಸುಗಳು ಚಿಗುರಿ ಹಸಿರಾಗುವ ವಿಶ್ವಾಸ ಮೂಡಿತಲ್ಲಾ...ಅವು ನನಸಾಗಲು ಇನ್ನೇನು ಬೇಕು.

  ಪ್ರತ್ಯುತ್ತರಅಳಿಸಿ
 3. ತೆರೆದ ಪೆಟ್ಟಿಗೆಯಲ್ಲಿ ರಾಶಿ ಕನಸುಗಳು
  ಕೈಬೀಸಿ ಕರೆದಂತಿತ್ತು
  ಕಸು ಮಾಡಲು ಕಾದಂತಿತ್ತು
  nice lines ...liked it

  ಪ್ರತ್ಯುತ್ತರಅಳಿಸಿ
 4. ಸುಂದರ ಪದಗಳ ಮೋಡಿ ಕವನದ ಸೌಂದರ್ಯ ಹೆಚ್ಚಿಸಿದೆ.
  ಜಡಿದ ಬೀಗ ಮುರಿದಾಗ, ಜಾಡ್ಯ ಜಾರಿ ಹೋಗಿ ,
  ಮೂಡಿ ಬರುವ ಆತ್ಮವಿಶ್ವಾಸ, ನಿಮ್ಮ ಕನಸ ಖಜಾನೆಯನ್ನು ತೆರೆಸಬಲ್ಲುದು.
  ಸುಂದರ ಕವನ

  ಪ್ರತ್ಯುತ್ತರಅಳಿಸಿ
 5. ಕತ್ತಲ ಹಿಂದೆಯೇ ಬೆಳಕು..
  ಎಲ್ಲಾ ಮುಗಿದೇ ಹೋಯಿತೆನ್ನುವಷ್ಟರಲ್ಲಿ..
  ಮತ್ತೊಂದು ಆತ್ಮವಿಶ್ವಾಸದ ಜ್ಯೋತಿ ಮಿಣುಕುತ್ತಿರುತ್ತದೆ..
  ಆ ಬೆಳಕನರಿಸಿ,, ಆ ಬೆಳಕಲ್ಲಿ ನಮ್ಮತನವನ್ನುಡುಕುವ ಹಂಬಲಿಕೆ...

  ಹಾಗೇ ಸಾಗುತ್ತದೆ ಜೀವನ ಪಯಣ...
  ಎಲ್ಲವನ್ನರಸುವುದೇ ಬದುಕಿನ ಕಾಯಕ..

  ಸುಂದರ ರಚನೆಯ ಕವಿತೆ...
  ಮೌನರಾಗದಲ್ಲಿ...
  ಮೌನಾಂ'ತರಂಗ'...ಮೀಟಿ ಬಂದ ಭಾವ'ತರಂಗ'ಗಳು
  ಹೃನ್ಮನ ತಣಿಸಿವೆ...
  ಸದಾ ಹೀಗೆ ನಿಮ್ಮ ಹೃದಯವೀಣೆಯನ್ನು ನುಡಿಸು(ಮೀಟು)ತಿರಿ...
  ಶುಭವಾಗಲಿ..... :)

  ಪ್ರತ್ಯುತ್ತರಅಳಿಸಿ
 6. ತುಂಬ ಸುಂದರವಾದ ಕವನ >ಕತ್ತಲ ಬೆನ್ನಿಗೆ ಬೆಳಕು ಸುತ್ತಲೂ
  ಕಳೆದುಹೋದುದು ತಡಕಾಡಿತು
  ಜಡಿದ ಬೀಗ ಮುರಿದು ಹೋಯಿತು < ಬದುಕಿನಲ್ಲಿ ಒಮ್ಮೊಮ್ಮೆ ಇಂಥ ಪ್ರಸಂಗಗಳು ಸರ್ವೇ ಸಾಮಾನ್ಯವಾಗಿಬಿಡುತ್ತದೆ ಅವುಗಳನ್ನು ತುಂಬಾ ಸೂಕ್ಷ್ಮವಾಗಿ ವರ್ಣಸಿಸ್ಸೀರ ಧನ್ಯವಾದಗಳು,,,,,

  ಪ್ರತ್ಯುತ್ತರಅಳಿಸಿ
 7. ಸುಶ್ಮಾ ತುಂಬಾ ಸೊಗಸಾದ ನವಿರುಬೆಳಕಲ್ಲಿ ಅಮೂಲ್ಯ ಹುಡುಕುವ ಮನೋಸ್ಥಿತಿಯನ್ನು ಸುಂದರ ಸಾಲುಗಳಲ್ಲಿ ಬಂಧಿಸಿದ್ದೀರಿ....
  ಅಂಧಃಕಾರದ ಕಾನನದಲ್ಲಿ
  ಎತ್ತಲೊಂದು ಸೂರ್ಯರಶ್ಮಿ .....ಇಲ್ಲಿ ಎತ್ತಲೊಂದು.... ಈ ಬಳಕೆಯಲ್ಲಿ ಏನೋ..ಅಪೂರ್ಣ ಅಥವಾ ಹೊಂದುತ್ತಿಲ್ಲ ಅನಿಸುತಿದೆ...ಏನಂತೀರಾ...??

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೌದು ಸರ್..! ನನಗೂ ಹಾಗೆ ಅನಿಸಿತು..
   ಆದರೆ..,
   ಬದುಕೇ ಕತ್ತಲು ಅನ್ನುವಂಥ ಮನಸ್ಥಿತಿಯಲ್ಲಿ, ಎತ್ತಲಿಂದಲೋ ಮೂಡಿ ಬಂದ ಬೆಳಕು -ಆ ಸೂರ್ಯರಶ್ಮಿ ಅನ್ನುವ ಅರ್ಥದಲ್ಲಿ 'ಎತ್ತಲೊಂದು' ಪದ ಬಳಕೆ ಮಾಡಿದ್ದೇನೆ ...
   'ಮರದ ಕಿಂಡಿಯಲ್ಲೊಂದು ಸೂರ್ಯರಶ್ಮಿ..'
   ಎಂದರೆ ಪೂರ್ಣವಾಗಬಹುದೇ ಸರ್..??

   ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು....

   ಅಳಿಸಿ
 8. ಪ್ರತ್ರಿಯಿಸಿದ ಎಲ್ಲರಿಗೂ ತುಂಬು ಮನದ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 9. ಸುಶ್ಮಾ... ಭಾವಮಂಥಿತ ಕವನ ತನ್ನದೇ ಜಾಡಲ್ಲಿ ಕವಿಯ ಮನವನ್ನು ಪ್ರತಿಬಿಂಬಿಸುತ್ತದೆ..ಹಾಗಾಗಿ ನನ್ನ ಅನಿಸಿಕೆ ಕೊಟ್ಟೆ ಅಷ್ಟೇ.. ನಿಮ್ಮ ಆಲೋಚನಾ ದಿಶೆಯೂ ಸಾಧುವಾದ್ದೇ.. ಧನ್ಯವಾದ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಾನಿನ್ನೂ ಕಲಿಯಬೇಕಾದ್ದು ಬಹಷ್ಟಿದೆ , ಒಂದು ಕವನ ಪಕ್ವವಾಗಲು ಇನ್ನಷ್ಟು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ್ದಿರಿ .. ಪ್ರೋತ್ಸಹಿಸಿದ್ದಿರಿ... ಈ ನಿಟ್ಟಿನಲ್ಲಿ ಇದು ಧನಾತ್ಮಕ ಅಂಶ ನನಿಗೆ...
   ನಿಮ್ಮ ಸಲಹೆ , ಸೂಚನೆಗಳು ನನಗೆ ದಾರಿದೀಪ..
   ಪ್ರೋತ್ಸಾಹ ನಿರಂತರವಾಗಿರಲಿ...ಧನ್ಯವಾದಗಳು..

   ಅಳಿಸಿ
 10. Nimma kanasina aa khajaane endigu bhadra:)
  Very nice poem. Super lines.. :):)

  ಪ್ರತ್ಯುತ್ತರಅಳಿಸಿ
 11. ಕವನಗಳಲ್ಲಿ ಮೊದಲ ಬಾರಿಗೆ ಆಶಾ ಭಾವ ಮುಟ್ಟುವ ಒಂದು ಕವನ ಖುಷಿ ಕೊಟ್ಟಿತು. "ಆಸೆಯ ಭಾವ ಒಲವಿನ ಜೀವ" ಎನ್ನುವ ಮಾಂಗಲ್ಯ ಭಾಗ್ಯ ಚಿತ್ರದ ಹಾಡು ಕಣ್ಣಲ್ಲಿ ಕುಣಿಯಿತು. ಸುಂದರ ಪಿ ಎಸ್

  ಪ್ರತ್ಯುತ್ತರಅಳಿಸಿ