ಫೆಬ್ರವರಿ 16, 2012

ನಿತ್ಯ ನಿರ್ಲಿಪ್ತ..!

ಅನುರಾಗದ ಭೂಮಿಕೆಯಲ್ಲಿ 
ಬಿಡದೆ ಕಾಡುವ ನಿನ್ನ ಭಾವಬಿಂಬಗಳು
ಜಡಿಮಳೆಯಂತೆ ಸುರಿವ ನೆನಪುಗಳು 
ಕನಸು ಕಣ್ಣಿನ ಪ್ರೀತಿ ಹನಿಗಳು
ನನ್ನೆದೆಯ ಹುಡುಗ ಇಣುಕುತ್ತಿದ್ದಾನೆ ಅಲ್ಲಿ
ತಾ ನಿತ್ಯ ನಿರ್ಲಿಪ್ತನೆಂಬ ಸ್ಥಿತಿಯಲ್ಲಿ..!

ಒಮ್ಮೊಮ್ಮೆ ದೀನ ಸ್ಥಿತಿ 
ಪಾದ ಮುಟ್ಟಿ ಬೇಡಿ, ಒಪ್ಪಿಸಿಕೋ ಎನ್ನುವಂತೆ
ಮಗದೊಮ್ಮೆ ಹೇರಳ ಆಸ್ಥೆ 
ಬಿಡದೆ ಭೋರ್ಗರೆದು 
ಮನದ ಬಂಡೆಗೆ ಅಪ್ಪಳಿಸುತ್ತದೆ
ಕರಗಿತೇನೋ ಎನ್ನುವಂತೆ..
ಹಂಬಲಿಕೆಯೇ ಬದುಕಾದಂತೆ..!
ಚಿಮ್ಮುವ, ಪಿಸುಗುಡುವ ಸವಿನೆನಪುಗಳು
ಭ್ರಮೆಯ ಕಣ್ಣುಗಳಂತೆ!
ಅವನು ಮಾತ್ರ ನಿತ್ಯ ನಿರ್ಲಿಪ್ತ..

ಇಂದಲ್ಲ ನಾಳೆ ಜೊತೆಯಾಗಿ ಬಂದಾನು
ಸಾವಿರ ಕನಸಿಗೆ ರಂಗು ತಂದಾನು
ಕಾರ್ಮೋಡ ಕರಗಿ ಮಳೆಯಾಗಿ ಹನಿಸುವುದನ್ನು 
ಕಾಣಲು ತವಕಿಸುತ್ತಿದ್ದೇನೆ ಇನ್ನಿಲ್ಲದಂತೆ28 ಕಾಮೆಂಟ್‌ಗಳು:

 1. Manju's ಪಂಚ್ ಲೈನ್ :-

  "ಕಾಯುವಿಕೆ ಕಾಯಿಸುವಿಕೆ ವಿಜ್ಞಾನದ ಒಂದು ಭಾಗ ಆದರೆ ಪ್ರೇಮಿಗಳಿಗೆ ಅದೊಂದು ದೊಡ್ಡ ರೋಗ"..!
  https://www.facebook.com/manjudoddamani/posts/1443314698631

  ಪ್ರತ್ಯುತ್ತರಅಳಿಸಿ
 2. ಸುಂದರ ಸಾಲುಗಳು ಸುಶ್ಮಾ...
  ಕರಗಿತೇನೋ ಎನ್ನುವಂತೆ..
  ಹಂಬಲಿಕೆಯೇ ಬದುಕಾದಂತೆ..!
  ಚಿಮ್ಮುವ, ಪಿಸುಗುಡುವ ಸವಿನೆನಪುಗಳು
  ಭ್ರಮೆಯ ಕಣ್ಣುಗಳಂತೆ!
  ಅವನು ಮಾತ್ರ ನಿತ್ಯ ನಿರ್ಲಿಪ್ತ..
  ನಿಜಕ್ಕೂ ಭಾವದ ಭಾವಪ್ರಕಟಣೆಯ ಮಧ್ಯದ ಶಾಂತತೆ ಎಷ್ಟು ಕಾಡುತ್ತದೆ ಎನ್ನುವುದು ವಿದಿತ...ಇಲ್ಲಿ.

  ಪ್ರತ್ಯುತ್ತರಅಳಿಸಿ
 3. `ಅನುರಾಗದ ಭೂಮಿಕೆಯಲ್ಲಿ
  ಬಿಡದೆ ಕಾಡುವ ನಿನ್ನ ಭಾವಬಿಂಬಗಳು
  ಜಡಿಮಳೆಯಂತೆ ಸುರಿವ ನೆನಪುಗಳು
  ಕನಸು ಕಣ್ಣಿನ ಪ್ರೀತಿ ಹನಿಗಳು`
  ಸುಸ್ಮಾ ಜಿ ಈ ಮೇಲಿನ ಸಾಲುಗಳು ತುಂಭಾ ಚೆನ್ನಾಗಿವೆ.

  ಪ್ರತ್ಯುತ್ತರಅಳಿಸಿ
 4. ಸುಂದರ, ಅರ್ಥಪೂರ್ಣ ಸಾಲುಗಳು...ಇಷ್ಟ ಆಯಿತು ಮೇಡಂ ...

  ಪ್ರತ್ಯುತ್ತರಅಳಿಸಿ
 5. ಉತ್ತಮ ಪದ ಬಳಕೆ.... ತುಂಬಾ ಚನ್ನಾಗಿದೆ ಸಿಸ್ಟರ್.....

  ಪ್ರತ್ಯುತ್ತರಅಳಿಸಿ
 6. ಎಂದಿನಂತೆ ಪ್ರೀತಿಯಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಗೌಡ್ರು, ಅಜಾದ್ ಸರ್, ಕನಸು, ಅಶೋಕ್ ಸರ್, ಮಂಜು....
  Thank you so much..

  ಪ್ರತ್ಯುತ್ತರಅಳಿಸಿ
 7. ನಿತ್ಯ ನಿರ್ಲಿಪ್ತ ಎಂಬುದೇ ಹಿಂಸೆ ಭಾವ. ಪ್ರೀತಿ ಪುಷ್ಕರಣಿಯಲಿ ಒಲವಿನ ಶುದ್ಧೀಕರಣವಾಗದಾಗ ಹೃದಯ ಅಟಮಟಿಸಿ ಹೋಗುತ್ತದೆ.

  ವ್ಹಾವ್ ಅಮೋಘ ಅರೆ ವಿರಹಗೀತೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ವಿರಹ ಗೀತೆಯೇ ಪ್ರೀತಿಯನ್ನು ಇನ್ನಷ್ಟು ಮಗದಷ್ಟು ಬಲಾಡ್ಯವಾಗಿಸುತ್ತದೆ ಅಲ್ಲವೇ ಸರ್...?
   ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

   ಅಳಿಸಿ
 8. ತುಂಬಾ ಚೆನ್ನಾಗಿದೆ ಕವನ..ಒಳ್ಳೇ ಪದಗಳು..

  ಪ್ರತ್ಯುತ್ತರಅಳಿಸಿ
 9. ನಿಮ್ಮವ ಬಂದು ನಿಮ್ಮೆದೆ ಕದ ತಟ್ಟಲಿ. ಸೊಗಸಾದ ಸುಂದರ ಸಾಲುಗಳು

  ಪ್ರತ್ಯುತ್ತರಅಳಿಸಿ
 10. ನಿಮ್ಮ ಮನಪೂರ್ವಕ ಹಾರೈಕೆಗೆ ಧನ್ಯವಾದಗಳು ಸರ್....

  ಪ್ರತ್ಯುತ್ತರಅಳಿಸಿ
 11. ನಿರ್ಲಿಪ್ತನನ್ನು ಕಾಯುವ ತೀವ್ರತೆಯನ್ನು ಸುಂದರವಾಗಿ ಬರೆದಿದ್ದಿರಾ... ಇಷ್ಟ ಆಯಿತು.

  ಪ್ರತ್ಯುತ್ತರಅಳಿಸಿ
 12. ಸುಷ್ಮಾ, ನಿಮ್ಮ ಕವನದಲ್ಲಿನ ಪದಗಳು ಅತಿ ಸುಂದರ. ನನ್ನ ಮನದ ಭಾವನಗೆಳನ್ನು ತಟ್ಟಿ ಎಬ್ಬಿಸಿದಂತೆ ಆಯಿತು. ಸಧ್ಯ ನನ್ನದು ಅದೇ ಸ್ಥಿತಿ....

  ಪ್ರತ್ಯುತ್ತರಅಳಿಸಿ
 13. ನಿರ್ಲಿಪ್ತತೆ ಎಂಬುದು ಸಾಮಾನ್ಯನಿಗಿಂತ ತುಸು ಎತ್ತರದಲ್ಲಿ ಪ್ರಬುದ್ದತೆಯ ಮಟ್ಟದಲ್ಲಿ ನಿಲ್ಲುವಂತದ್ದು , ನಿರ್ಲಿಪ್ತತೆ ಹಾಗೂ ಸಾಮಾನ್ಯ ಮನುಷ್ಯನ ಸಹಜ ಚಂಚಲತೆ ಇಲ್ಲಿ ಕವಿತೆಯ ವಸ್ತು.. ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು ಅಭಿ...

  ಪ್ರತ್ಯುತ್ತರಅಳಿಸಿ
 14. ಇಂದಲ್ಲ ನಾಳೆ ಜೊತೆಯಾಗಿ ಬಂದಾನು
  ಸಾವಿರ ಕನಸಿಗೆ ರಂಗು ತಂದಾನು
  ಕಾರ್ಮೋಡ ಕರಗಿ ಮಳೆಯಾಗಿ ಹನಿಸುವುದನ್ನು
  ಕಾಣಲು ತವಕಿಸುತ್ತಿದ್ದೇನೆ ಇನ್ನಿಲ್ಲದಂತೆ

  nice ಕನಸುಗಳು ಕೈಗೂಡಲಿ ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ
 15. "ಮಗದೊಮ್ಮೆ ಹೇರಳ ಆಸ್ಥೆ
  ಬಿಡದೆ ಭೋರ್ಗರೆದು
  ಮನದ ಬಂಡೆಗೆ ಅಪ್ಪಳಿಸುತ್ತದೆ
  ಕರಗಿತೇನೋ ಎನ್ನುವಂತೆ.."
  ಚೆನ್ನಾಗಿದೆ.ಬರೆಯುತ್ತಿರಿ.

  ಪ್ರತ್ಯುತ್ತರಅಳಿಸಿ
 16. ಕವನದ ಪ್ರತಿ ಸಾಲಿನಲ್ಲಿಯೂ ಕಾಯುವಿಕೆಯ ತೀವ್ರತೆ ಎದ್ದು ಕಾಣುತ್ತಿದೆ. ಅಭಿನಂದನೆಗಳು

  ಪ್ರತ್ಯುತ್ತರಅಳಿಸಿ
 17. ವೆಂಕಟೇಶ್ ಸರ್, ಸ್ವರ್ಣಾ, ಮಂಜುಳಾದೇವಿ ಮೇಡಂ..... ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 18. ಪ್ರತಿ ಸಾಲಿನಲ್ಲೂ ನಿರೀಕ್ಷೆಯ ಆಶಾಭಾವವಿದೆ. ಉತ್ತಮವಾದ ಕವನ ಧನ್ಯವಾದಗಳು ಹಾಗೆ ಯುಗಾದಿ ಹಬ್ಬದ ಶುಭಾಶಯಗಳು....

  ಪ್ರತ್ಯುತ್ತರಅಳಿಸಿ
 19. ಗಟ್ಟಿ ಕಲ್ಲೊಳಗೆ ಮೆದುತ್ವವನ್ನು ಪರಿಶೀಲಿಸಿದ ಭಾವ ಸ್ಫುರಿಸುವುದು ಸಹಜ. ಕಲ್ಲಿಗೆ ಕಲ್ಲುಗಳು ಕುಟ್ಟಿ, ಮೃದುತ್ವಕೆ ಮೆತ್ತೆಗೆ ಕುಟ್ಟಿ ಭಾವಗಳ ಪಟ್ಟಿ ವಿಸ್ತಾರವಾದಂತೆ ಖುಷಿ ಆಯಿತು. ತುಂಬಾ ಚೆಂದದ ಭಾವಗಳು ನಿಮ್ಮದು. ಇನ್ನಷ್ಟು ಎತ್ತರಕೆ ಬೆಳೆಯಲಿ ಎಂದು ಹಾರೈಸುತ್ತೇನೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿ..... ನಿಮ್ಮ ಪ್ರೋತ್ಸಾಹವಿದ್ದರೆ ಇನ್ನಷ್ಟು, ಮತ್ತಷ್ಟು ಬರೆಯಬಹುದು...
   ಧನ್ಯವಾದಗಳು ಸರ್...

   ಅಳಿಸಿ
 20. "ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ" ಎನ್ನುವ ನಿನಗಾಗಿ ನಾನು ಹಾಡು ನೆನಪಿಸಿದ ಈ ಕವನದಲ್ಲಿ ತೋರ್ಪಡಿಸಿದ ಆಶಾ ಭಾವ ಸುಂದರವಾಗಿದೆ. ನೀನು ನೀನಾಗಿರು ನಾ ನಿನಗೆ ಕಾಯ್ವೆ ಎನ್ನುವ ಭಾವ ಇಷ್ಟವಾಯಿತು. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಾ ಇಷ್ಟ ಪಟ್ಟಿದ್ದು
   ನೀ ನೀನಾಗಿದ್ದಾಗಲೇ..
   ಮುಂದೆಯೂ ಹಾಗಿರು..
   ನಾನು ನೀನಾಗುತ್ತೇನೆ...!

   -ಧನ್ಯವಾದಗಳು ಅಣ್ಣಯ್ಯ...

   ಅಳಿಸಿ