ಏಪ್ರಿಲ್ 10, 2012

ನಿರೀಕ್ಷೆ...

ಕನಸಿನರಮನೆಯ ನಿನ್ನದಾಗಿಸಿ
ಮನಸಿನ ಭಾವಾನುರಾಗ ನನ್ನದಾಗಿಸಿರುವೆ
ಕನಸು-ಮನಸು ಅದಲು ಬದಲಾಗಿಸಿ
ಬೀಸಿದ ಗಾಳಿಯ ತಂಗಾಳಿಯಾಗಿಸಿ
ನಾ ನಿನ್ನೊಳಗೇ ಸೇರಿ ಬಿಟ್ಟಿರುವೆ


ನಿನ್ನ ಕಿರುನಗೆಯಲ್ಲಿ ಕರಗಿ
ಮಂದಹಾಸದಲ್ಲಿ ಮಿನುಗುತ್ತೇನೆ
ಕಣ್ಣಹನಿಯಲ್ಲಿ ಸತ್ತು
ಹೃದಯದಲ್ಲಿ ಬದುಕುತ್ತೇನೆ
ನಿನ್ನುಸಿರಲ್ಲಿ ಕನಸಿಟ್ಟು
ನನ್ನುಸಿರ ಅಡವಿಡುತ್ತೇನೆ..

ಅಪರಿಚಿತ ಭಾವವೊಂದು ಒಳಸೇರಿ
ಪರಿಚಯವಾಗಿ ಕಾಡುತಿದೆ
ಮನದ ಚುಕ್ಕಿಯ ರಂಗೋಲಿ
ರಂಗು ಅರಸುತಿದೆ 
ಬಿರಿದ ನೆನಕೆಗಳ ಗಂಧ
ಬಾಗಿಲಾಚೆಗೆ ಕಣ್ಣು ನೆಟ್ಟಿದೆ 

ಒಡಮೂಡಿದ ಭಾವಗಳ ಬಂಧ
ನಿನ್ನಲ್ಲಿ ಬೆಸೆಯಬೇಕು
ಯಾವಾಗ ಸಿಗುತ್ತಿಯಾ ಹುಡುಗಾ? 

24 ಕಾಮೆಂಟ್‌ಗಳು:

 1. ಕವನ ತುಂಬಾ ಚೆನ್ನಾಗಿದೆ .. ನಲ್ಮೆಯ ಗೆಳಯ ನಿಮ್ಮವನಾಗಲಿ, ನಿಮ್ಮೆಲ್ಲಾ ಮಧುರ ಕಾಮನೆಗಳನ್ನು ಈಡೇರಿಸಲಿ ಎಂದು ಆಶಿಸುತ್ತೇನೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತುಂಬಾ ಧನ್ಯವಾದಗಳು ಸರ್.....
   ನಿಮ್ಮ ಪ್ರೋತ್ಸಾಹ ಎಂದೂ ಜೊತೆಗಿರಲಿ.....

   ಅಳಿಸಿ
 2. ಅಪರಿಚಿತ ಭಾವವೊಂದು ಒಳಸೇರಿ
  ಪರಿಚಯವಾಗಿ ಕಾಡುತಿದೆ
  ಮನದ ಚುಕ್ಕಿಯ ರಂಗೋಲಿ
  ರಂಗು ಅರಸುತಿದೆ ...
  ಸುಂದರ ಸಾಲುಗಳು... :)

  ಪ್ರತ್ಯುತ್ತರಅಳಿಸಿ
 3. ಈ ಬದುಕು ಮತ್ತು ಪ್ರಕೃತ್ತಿಯಲ್ಲಿ ಕೆಲವೊಮ್ಮೆ ಮೋಡ ಮುಸುಕಬಹುದು. ನಿಮ್ಮ ಕವಿತೆ ಓದಿ ನವೋಲ್ಲಾಸವನ್ನು ಪಡೆದುಕೊಳ್ಳಬಹುದು. ತುಂಬಾ ಮುಗ್ದ ಭಾವಗಳನ್ನು ಕಾಣುತ್ತಿದ್ದೇನೆ. ಹೇಗೆಂದರೆ, ಆಗಸದ ನಕ್ಷತ್ರಗಳು ಅಂಗಳದಲ್ಲಿ ಹರವಿದ ಹಾಗೆ. ಚೆನ್ನಾಗಿದೆ. ಆ ಹುಡುಗ ... ಈ ಹುಡುಗಿ ... ಸುಂದರ ಭಾವ ವಿಧಾನ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿಸಾರಿಯೂ ಹುರಿದುಂಬಿಸುವ ಮಾತನ್ನಾಡಿ ಪ್ರೋತ್ಸಹಿಸುತ್ತಿರಿ.....ಧನ್ಯವಾದಗಳು ಸರ್....

   ಅಳಿಸಿ
 4. ಒಡಮೂಡಿದ ಭಾವಗಳ ಬಂಧ
  ನಿನ್ನಲ್ಲಿ ಬೆಸೆಯಬೇಕು...

  Super... Keep it up dear..

  ಪ್ರತ್ಯುತ್ತರಅಳಿಸಿ
 5. ಪ್ರೀತಿಯ ಹ೦ಚಲು ನೂರಾರು ಕನಸು... ಭಾವನೆಗಳು ಅತೀಥ... ತು೦ಬಾ ಸು೦ದರವಾದ ಕವನ... ಬಹಳ ಇಷ್ಟವಾಯಿತು ಸುಶ್ಮಾ...

  ಪ್ರತ್ಯುತ್ತರಅಳಿಸಿ
 6. ಮಳೆಗೆ ಹಪಹಪಿಸುವ ಧರಿತ್ರಿಯ ಒಡಲಾಳದ ಮಾತುಗಳು ಮಧುರವಾಗಿ ಸೋನೆಯಾಗಿದೆ ಆಸ್ವಾದಿಸುವಾಗ.. ಪ್ರೀತಿ ಎಷ್ಟು ಬರೆದರೂ ಮುಗಿಯದ ಕಡಲು, ಆ ಅಗಾಧ ಆಗರದಿಂದ ಮುತ್ತು ರತ್ನಗಳನ್ನೇ ಹೆಕ್ಕಿದ್ದೀರಿ ಸುಷ್ಮ.. ಚೆಂದದ ಅಭಿವ್ಯಕ್ತಿ..
  ಕಣ್ಣಹನಿಯಲ್ಲಿ ಸತ್ತು
  ಹೃದಯದಲ್ಲಿ ಬದುಕುತ್ತೇನೆ
  ಈ ಸಾಲನ್ನು ಓದುವಾಗ ಒಮ್ಮೆ ಹೃದಯ ಭಾರವಾಗಿ ನಂತರ ಹಗುರಾಗಿ ನಕ್ಕಂತಾಯ್ತು.. ಶುಭವಾಗಲಿ..:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರಸಾದ್ , ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....
   ಹೀಗೆ ಬರುತ್ತಿರಿ.... ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಅಭಾರಿ...

   ಅಳಿಸಿ
 7. " ಕಣ್ಣಹನಿಯಲಿ ಸತ್ತು, ಹೃದಯದಲ್ಲಿ ಬದುಕುತ್ತೇನೆ.. "
  ರಂಗೋಲಿಗೆ ಬೇಕಾದ ರಂಗು... ಅಬ್ಬಾ ಎಂಥಹ ಸಾಲುಗಳು.. ಚೆನ್ನಾಗಿದೆ ಕವನ ಅಕ್ಕಾ. ಆ ಹುಡುಗ ಬೇಗ ಸಿಗಲಿ :-)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿರೀಕ್ಷೆಗಳೆಲ್ಲ ಕೈಗೂಡಲೆಂದು ಹಾರೈಸಿ ಪ್ರತಿಕ್ರಿಯಿಸಿದ್ದಿರಿ...ಧನ್ಯವಾದಗಳು....

   ಅಳಿಸಿ
 8. ಬಹುಶ ಆ ನೀರಿಕ್ಷೆ ಹಳೆ ನೆನಪುಗಳನ್ನು ಎಲ್ಲೊ ಮರೆಯದೆ, ಹೊಸ ಭಾವವ ಸ್ವೀಕರಿಸದೆ, ಮಧ್ಯ ಸಿಲುಕಿರುವ ಹೊಸ ಭಾವ ನನಗೆ ಈ ಸಾಲುಗಳಲಿ ನನಗೆ ಕಾಣುತ್ತಿದೆ. ಅದು ನನ್ನ ಅಪೇಕ್ಷೆಯೂ ಗೊತ್ತಿಲ್ಲ. bt ನೀವು ಪದಗಳನ್ನು ಅರ್ಥವತ್ತಾಗಿ ಹೆಣೆಯುತ್ತೀರಿ ಎಂಬುದು ಕಾದಿಹೆನು, ನಿತ್ಯ ನೀರ್ಲಿಪ್ತ ,ಕಿಚ್ಚು, ಹೆಂಗಸು , ನಾನವಳಲ್ಲ, ಮುಗಿದ ಭಾವ,. ಮುಂತಾದ ಕವಿತೆಯ ಸಾಲುಗಳೇ ಹೇಳುತ್ತವೆ. ನೀರ್ಲಿಪ್ತ ನೀರಿಕ್ಷೆ ಕಲಕಿದ ಅನುಭವ. ಕವಿತೆ ತುಂಬಾ ಚೆನ್ನಾಗಿದ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 9. ಪರೀಕ್ಷೆಯಿಲ್ಲದ ವಿಧ್ಯಾಭ್ಯಾಸ
  ನಿರೀಕ್ಷೆಯಿಲ್ಲದ ಪ್ರೀತ್ಯೋತ್ಸಾಹ
  ನೀರಿಲ್ಲದ ಕಡಲಿನ ಅಲೆಗಳಂತೆ
  ಸುಂದರ ಕವನ ಪಿ ಎಸ್

  ಪ್ರತ್ಯುತ್ತರಅಳಿಸಿ