ಆಗಸ್ಟ್ 8, 2012

ಅಂತರಂಗದ ಪುಟಗಳು..


ಅಂತರಂಗದ ಪುಟಗಳು ಹಾಗೆಯೇ..!!
-ತೆರೆದುಕೊಳ್ಳುವುದಿಲ್ಲ..

ಕಟ್ಟಿ ಕೂಡಿ ಕಳೆಯುವುದಕ್ಕೆ ಬರುವುದಿಲ್ಲ 
ನೂಕು ನುಗ್ಗಲು ದೂಕಿ ಹೊರಡುವುದಿಲ್ಲ
ಪ್ರಶ್ನೆಗಳಿಗೆ ಉತ್ತರ ಬೇಡುವುದಿಲ್ಲ.
ನೆನಪುಗಳ ನಾವೆಯಲ್ಲಿ ಒಂಟಿ ಪಯಣ
ಉಬ್ಬಿದ ಕೊರಳ ಸೆರೆಗೆ ಉಸಿರ ಸಾಂತ್ವನ 

ಅಂತರಂಗದ ಪುಟಗಳು ಹಾಗೆಯೇ...!
-ತೆರೆದುಕೊಳ್ಳುವುದಿಲ್ಲ...

ಬೇಕು ಬೇಡಗಳ ಪ್ರಶ್ನೆಯೇ ಇಲ್ಲಾ
ಮೌನದ ಪರಿಧಿಯೊಳಗೆ ಮುಚ್ಚಿಕ್ಕೊಳ್ಳುತ್ತದೆ
ಭಾವದ ಅಲೆಗಳಲ್ಲಿ ತನ್ನ ತಾನು ಬಡಿದುಕೊಳ್ಳುತ್ತದೆ
ಹಿರಿದು ಕಿರಿದುಗಳ ಬರಿದಾಗಿಸುತ್ತದೆ
ಹೃದಯದ ತುಮುಲಕ್ಕೆ ಅಟಮಟಿಸುತ್ತದೆ.

ಅಂತರಂಗದ ಪುಟಗಳು ಹಾಗೆಯೇ..!!
-ತೆರೆದುಕೊಳ್ಳುವುದಿಲ್ಲ..


21 ಕಾಮೆಂಟ್‌ಗಳು:

 1. ಉತ್ತರಿಸಲಾರದ ಪ್ರಶ್ನೆಗಳ ಸರಸ್ಸಾಗರ ಅಂತರಂಗ!

  ಎಂತಹ ಒಳ್ಳೆಯ ಕವನ ಇದು. ವಾರೇವ್ಹಾ!!!

  ಪ್ರತ್ಯುತ್ತರಅಳಿಸಿ
 2. Ubbida korala serege usira santhwana..! Arthapoornavaadudu..ella saalugalu thumba chennagive madam..nice one!!!

  ಪ್ರತ್ಯುತ್ತರಅಳಿಸಿ
 3. ಬದುಕಿನ ನೌಕೆಯಲ್ಲಿ ನೆನಪುಗಳ ಹೊತ್ತು ಒಂಟಿ ಪಯಣದಲ್ಲಿ ಸಾಗಲೇ ಬೇಕು ಅಲ್ಲವೇ?
  ಈ ಅಂತರಂಗದ ಪುಟ ತುಂಬ ಭಾವನೆಗಳಿಂದ ಕೂಡಿದೆ... ಚೆನ್ನಾಗಿದೆ... ಹೀಗೆ ಬರೆಯುತ್ತಿರಿ...

  ಪ್ರತ್ಯುತ್ತರಅಳಿಸಿ
 4. ಅಂತರಂಗದ ಪುಟಗಳು ಹಾಗೆಯೇ..!!
  -ತೆರೆದುಕೊಳ್ಳುವುದಿಲ್ಲ..
  :::
  ಇಷ್ಟವಾಯಿತು ಎಂದಷ್ಟೇ ಹೇಳಬಲ್ಲೆ...

  ಪ್ರತ್ಯುತ್ತರಅಳಿಸಿ
 5. ನೆನಪುಗಳ ನಾವೆಯಲ್ಲಿ ಒ೦ಟಿ ಪಯಣ
  ಉಬ್ಬಿದ ಕೊರಳ ಸೆರೆಗೆ ಉಸಿರ ಸಾ೦ತ್ವಾನ... ಅದೇಕೋ ಈ ಸಾಲುಗಳು ಬಹಳ ಇಷ್ಟವಾಯಿತು...

  ಪ್ರತ್ಯುತ್ತರಅಳಿಸಿ
 6. ಸುಂದರ ಸಾಲುಗಳನ್ನು ಪೋಣಿಸಿದ್ದೀರಿ...ಉತ್ತಮ ಕವನ...ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 7. ಅಂತರಂಗದ ಪುಟಗಳು ಹಾಗೆಯೇ..
  ಸುಲಭಕ್ಕೆ ತೆರೆಯುವುದಿಲ್ಲ.. ಬಟ್ಟೆ ಕಟ್ಟಿದ ಕಣ್ಣೆದುರೇ ಇದ್ದರೂ ನಮಗೆ ತೋರದಂತೆ, ಅಡಗಿಯೇ ಕಳೆಯುವುದು..ಚೆನ್ನಾಗಿದೆ :-)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಂತರಂಗದ ಪುಟಗಳು ಹಾಗೆಯೇ ತೆರೆದುಕ್ಕೊಳ್ಳುವುದಿಲ್ಲ... ಮೆಚ್ಚಿದ್ದಕ್ಕೆ ಧನ್ಯವಾದಗಳು...

   ಅಳಿಸಿ
 8. ಹೌದು, ಅಂತರಂಗದ ಪುಟಗಳು ಹಾಗೆಯೇ.. ಮನದ ಮರೆಯಲ್ಲಿ ನೆನಪ ಪದರಗಳಾಗಿ ಅವಿತುಕೊಳ್ಳುತ್ತವೆ., ಉಸಿರೊಳಗೆ ಬೆರೆತುಕೊಳ್ಳುತ್ತವೆ..!
  ಉತ್ತಮ ಕವನ ಸುಷ್ಮಾ, ಬಹಳ ಇಷ್ಟವಾಯಿತು!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸತೀಶ್ ಸರ್, ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು....

   ಅಳಿಸಿ
 9. ಅಂತರಂಗದ ಪುಟಗಳು ತೆರೆದುಕೊಳ್ಳುವುದಿಲ್ಲ, ತೆರೆದುಕೊಂಡರೆ ಅಂತರಂಗದಲ್ಲಿ ಏನೂ ಉಳಿಯುವುದಿಲ್ಲ
  ಆಮೇಲೆ ಅಲ್ಲಿ ಎಲ್ಲವೂ ಬಹಿರಂಗವಲ್ಲಾ?  ಒಂದು ಮಾತು:

  ಬೇಕು ಬೇಡಗಳ ಪ್ರಶ್ನೆಯೇ ಇಲ್ಲಾ
  ಮೌನದ ಪರಿಧಿಯೊಳಗೆ ಮುಚ್ಚಿಕ್ಕೊಳ್ಳುತ್ತವೆ
  ಭಾವದ ಅಲೆಗಳಲ್ಲಿ ತನ್ನನ್ನು ತಾನು ಬಡಿದುಕೊಳ್ಳುತ್ತವೆ
  ಹಿರಿದು ಕಿರಿದುಗಳ ಬರಿದಾಗಿಸುತ್ತವೆ
  ಹೃದಯದ ತುಮುಲಕ್ಕೆ ಅಟಮಟಿಸುತ್ತವೆ.

  ಅಂತರಂಗದ ಪುಟಗಳು ಹಾಗೆಯೇ...!

  ಪ್ರತ್ಯುತ್ತರಅಳಿಸಿ
 10. ಅಂತರಂಗ ಬಹಿರಂಗವಾಗಲು ಇಷ್ಟಪಡುವುದಿಲ್ಲ.
  ಧನ್ಯವಾದಗಳು ಸರ್ ಪ್ರತಿಕ್ರಿಯೆಗೆ....

  ಪ್ರತ್ಯುತ್ತರಅಳಿಸಿ
 11. ಹಳೆಯ ಹಿಂದಿ ಚಿತ್ರ ಗೋಲ್ ಮಾಲ್ ನಲ್ಲಿ ಹೇಳುವಂತೆ "ಈ ಪ್ರೀತಿ ಅನ್ನುವುದು ಅಕೌಂಟ್ಸ ಅಥವಾ ಗಣಿತವಲ್ಲ ಇಲ್ಲಿ ಒಂದು ಪ್ಲಸ್ ಒಂದು ಎರಡು ಆಗಬಹುದು ಮೂರು ಆಗಬಹುದು ಅಂತ"
  ಹಾಗೆಯೇ ಲೆಕ್ಕಕ್ಕೆ ಸಿಕ್ಕದ.... ಓದಲು ಆಗದ ಪುಟ ತಿರುವಿ ಹಾಕಲು ಸಾಧ್ಯವಾಗದ ಅಂತರಂಗ. ಸುಂದರ ಕವನ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತೆರೆದುಕೊಳ್ಳದ ಅಂತರಂಗವನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

   ಅಳಿಸಿ