ಸೆಪ್ಟೆಂಬರ್ 12, 2012

ಹನಿ ಹನಿ ಇಬ್ಬನಿ..

1. ಮರೆತ ನೆನ್ನೆಯ
ನೆನಪಾದಾಗ
ಜಾರಿದ ಕಣ್ಣ ಹನಿಯಲ್ಲೂ
ನಿನ್ನದೇ ಬಿಂಬ..!


2. ನಿನ್ನ ನೆನಪುಗಳ
ಹೂತಿಡಬೇಕು
ನನ್ನ ಹೃದಯ
ಹಿಂದಿರುಗಿಸುತ್ತಿಯಾ...?

3. ನಿನ್ನ ತೋಳಿಡಿದು
ಓಡಾಡಲಾಗದ
ಈ ಸಂಜೆಗಳೆಂದರೆ
ನನಗೆ ರೇಜಿಗೆ..!

4. ನೀ ನನ್ನ
ಹೃದಯವನ್ನು
ಕೇಳುವುದಕ್ಕಿಂತ
ಪ್ರಾಣ ಕೇಳಬೇಕಾಗಿತ್ತು!

5. ನಿನ್ನ ನೆನಪಿನಿಂದ
ಕೆನ್ನೆ ಜಾರಿದ ಹನಿಗಳೆಲ್ಲ
ಮುತ್ತಾಗಿವೆ
ಸಿಗುತ್ತಿಯಾ?
ನಿನ್ನ ನೆನಪುಗಳನ್ನು
ಹಿಂದುರಿರುಗಿಸಬೇಕು..

6. ಪ್ರೇಮ ಗೀತೆಗಳಿಗಿಂತ
ವಿರಹ ಗೀತೆಗಳೇ
ಹೆಚ್ಚು ಕಾಡುವುದು
ನಿನ್ನ ನೆನಪುಗಳಿಂದಾನೆನ?

6 ಕಾಮೆಂಟ್‌ಗಳು:

 1. ಹನಿಗಳೋ ಗೆಳತಿ ಇವು ಕಣ್ಣ ಹನಿಗಳೋ? ಕದಲಿಸಿ ಹಾಕುತ್ತಾವೆ ವಿರಹ ಗೀತೆಗಳು.

  ಪ್ರತ್ಯುತ್ತರಅಳಿಸಿ
 2. ನಿನ್ನ ನೆನಪಿನಿಂದ
  ಕೆನ್ನೆ ಜಾರಿದ ಹನಿಗಳೆಲ್ಲ
  ಮುತ್ತಾಗಿವೆ
  ಸಿಗುತ್ತಿಯಾ?
  ನಿನ್ನ ನೆನಪುಗಳನ್ನು
  ಹಿಂದುರಿರುಗಿಸಬೇಕು.........Ishta aitu...

  ಪ್ರತ್ಯುತ್ತರಅಳಿಸಿ
 3. ಸಂಧ್ಯಾ ಶ್ರೀಧರ್, ಬದರಿ ಸರ್, ಅಶೋಕ್ ಸರ್ .. ನಿಮ್ಮ ಪ್ರೋತ್ಸಾಹಕ್ಕೆ, ಮೆಚ್ಚುಗೆಗೆ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 4. ಹರಿದ ಹಿಮದ ಗಂಗೆಯಂತೆ
  ನೆನೆದ ಬೆಟ್ಟದ ಹುಲ್ಲಿನಂತೆ
  ಹನಿ ಹನಿಯು ಜಿನುಗುತ್ತಲಿರುವಾಗ
  ಚಂದ ಯಾವುದು ಎಂದು ಹೇಗೆ ಹೇಳಲಿ ಪಿ ಎಸ್
  ಪ್ರತಿ ಹನಿಯು ತಾಯಿ ಹಡೆದ ಮಕ್ಕಳಂತೆ ಪ್ರತಿಯೊಂದು ಸೊಗಸು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸೊಗಸಾದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

   ಅಳಿಸಿ