ಸೆಪ್ಟೆಂಬರ್ 5, 2012

ಹನಿ ಹನಿ ಇಬ್ಬನಿ..!!

1.ನೀ ನನಗೆ
ಸುಂದರವಾಗಿ ಕಾಣುವುದು
ನಿನ್ನ ಸೌಂದರ್ಯದಿಂದಲ್ಲ ಗೆಳೆಯಾ
ಚಿಗುರುಮೀಸೆಯಡಿಗಿನ
ಆ ನಿನ್ನ ಕಿರುನಗೆಯಿಂದ..!


2.ನಿನ್ನ ಮೇಲಿನ ಕೋಪಕ್ಕೆ
ನಿನ್ನ ಜಡತ್ವಕ್ಕಲ್ಲ ಗೆಳೆಯಾ
ನಾ ವಿಚ್ಚೇದನ ನೀಡಿದ್ದು
ಅದು- ನನ್ನ ಬದುಕಿಗೆ..!

3.ಹಿರಿಯರು ತೆಪ್ಪಗಾದರೆ
ಕಿರಿಯರು
ಕೆಪ್ಪರಾಗುವುದರಲ್ಲಿ
ಆಶ್ಚರ್ಯವಿಲ್ಲ...!


4.ಮನದ ಮೂಲೆಯಲ್ಲಿ
ಹುಟ್ಟಿಕ್ಕೊಂಡ
ಪ್ರಶ್ನೆಗಳಿಗೆ ಉತ್ತರ
ನೀನೇ....!!

5.ಜೀವಕ್ಕೆ ಜೀವ
ಕೊಡುತ್ತೆನೆಂದಿದ್ದು
ನಿನಗಲ್ಲ ಗೆಳೆಯಾ
ನನ್ನ ಪ್ರೀತಿಗೆ..!


6.ಮುಚ್ಚಿಟ್ಟ ಹೃದಯದಲ್ಲಿ
ಬಿಚ್ಚಿ ಹೋದ ಕನಸುಗಳು
ರಾಡಿಯಾಗಿದೆ
ಕೂಡಿಡುವ ನಂಟಿನ ಗಂಟು
ನನ್ನಲ್ಲಿಲ್ಲ..
ನೀನಂತೂ ಬರುವುದಿಲ್ಲ
ಹೃದಯದ ಉಸಿರು ಬಿಗಿಯಾಗಿದೆ
ನಿಂತು ಹೋಗುವ ಭಯ ನನಗಾಗಿದೆ
ದಯಮಾಡಿ ನನ್ನ ಕನಸುಗಳ
ಕಟ್ಟಿಕೊಡು
ನಾನು ಬದುಕಬೇಕು
ನೀನಿಲ್ಲದೆಯೂ...!!


7.ಬದಲಾಯಿಸಿಕ್ಕೊಳ್ಳದ
ನಿನ್ನನ್ನು
ನೋಡನೋಡುತ್ತಲೇ
ನಾ
ಬದಲಾಗಿಬಿಟ್ಟೆ.....!!!


13 ಕಾಮೆಂಟ್‌ಗಳು:

 1. ಇಬ್ಬನಿ ತಬ್ಬಿದ ಇಳೆಯಲ್ಲಿ ಹನಿ ಹನಿ ಮಳೆಯು ಸೊಗಸಾಗಿದೆ..

  ಪ್ರತ್ಯುತ್ತರಅಳಿಸಿ
 2. ಮಸ್ತ್ ಮಸ್ತ್ ಹನಿಗಳು .. ಈ ತಂಪಲ್ಲು ಬೆಚ್ಚನೆ ಅನುಭವ ನೀಡಿತು...

  ಹುಸೇನ್(nenapinasanchi.wordpress.com)

  ಪ್ರತ್ಯುತ್ತರಅಳಿಸಿ
 3. ಜೀವಕ್ಕೆ ಜೀವ ಕೊಡುತ್ತೆನೆಂದಿದ್ದು ನಿನಗಲ್ಲ ಗೆಳೆಯಾ ನನ್ನ ಪ್ರೀತಿಗೆ..!
  ತುಂಬಾ ಇಷ್ಟವಾಯಿತು..ಎಲ್ಲಾ ಹನಿಗಳು ಚೆನ್ನಾಗಿವೆ..

  ಪ್ರತ್ಯುತ್ತರಅಳಿಸಿ
 4. ಹುಸೇನ್ ಸರ್, ಸುಧಾಕರ್ & ಗಣೇಶ್ ಸರ್ ನಿಮ್ಮ ಚಂದದ ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ

 5. ಹಿರಿಯರು ತೆಪ್ಪಗಾದರೆ
  ಕಿರಿಯರು
  ಕೆಪ್ಪರಾಗುವುದರಲ್ಲಿ
  ಆಶ್ಚರ್ಯವಿಲ್ಲ.

  ಜೀವಕ್ಕೆ ಜೀವ
  ಕೊಡುತ್ತೆನೆಂದಿದ್ದು
  ನಿನಗಲ್ಲ ಗೆಳೆಯಾ
  ನನ್ನ ಪ್ರೀತಿಗೆ..!

  ವಾವ್ ...ಸುಂದರ ಹನಿಗಳು....ಇಷ್ಟ ಆದವು...

  ಪ್ರತ್ಯುತ್ತರಅಳಿಸಿ
 6. ಹಿರಿಯರು ತೆಪ್ಪಗಾದರೆ
  ಕಿರಿಯರು
  ಕೆಪ್ಪರಾಗುವುದರಲ್ಲಿ
  ಆಶ್ಚರ್ಯವಿಲ್ಲ...!

  4.ಮನದ ಮೂಲೆಯಲ್ಲಿ
  ಹುಟ್ಟಿಕ್ಕೊಂಡ
  ಪ್ರಶ್ನೆಗಳಿಗೆ ಉತ್ತರ
  ನೀನೇ....!!

  Wow....!!!!!

  ಪ್ರತ್ಯುತ್ತರಅಳಿಸಿ
 7. ಸು೦ದರವಾದ ಸಾಲುಗಳು... ಬಹಳ ಇಷ್ಟವಾಯಿತು...:)

  ಪ್ರತ್ಯುತ್ತರಅಳಿಸಿ
 8. ಮಳೆಯ ಹನಿ ಬಿದ್ದಾಗ ಚಂದ
  ಪಿ ಎಸ್ ಪದಗಳು ಹರಿದಾಗ ಚಂದ
  ಹನಿಗಳು ಮಸ್ತ್ ಇದ್ದಾವೆ. ಒಂದು ಹನಿ ಮನ ತೋಯಿಸಿದರೆ ಇನ್ನೊಂದು ಮನದ ಭಾವನ್ನು ನೆನೆಸುತ್ತದೆ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ