ಸೆಪ್ಟೆಂಬರ್ 15, 2012

ಮೌನರಾಗ...!

ಈ ನನ್ನ ಮೌನರಾಗಕ್ಕೆ ಎರಡು ವರ್ಷದ ಸಂಭ್ರಮ...ಬ್ಲಾಗ್ ಲೋಕದ ಪರಿಚಯವಾಗಿ ಎರಡು ವರ್ಷಗಳು ತುಂಬಿ ಬಿಟ್ಟವೇ..!? ನನ್ನಲ್ಲಿ ಅಚ್ಚರಿ...!
ನೋಟ್ ಬುಕ್ಕಿನ ಕೊನೆಯ ಹಾಳೆಯಲ್ಲಿ, ಡೈರಿಯ ಮೂಲೆ ಮೂಲೆಯಲ್ಲಿ ಅವಿತಿರುತ್ತಿದ್ದ ತಿರುಗು ಮುರುಗು ಸಾಲುಗಳೆಲ್ಲ ಈಗ ಮೌನರಾಗದಲ್ಲಿ ಬೆಚ್ಚಗಿವೆ.. ಬರೆದಿದ್ದು ತೀರಾ ಕಡಿಮೆ.. ಆದರೂ ಅಂತರಂಗದ ಒತ್ತಡಗಳನ್ನು ನಿವಾರಿಸಿದ, ಸಂತೋಷಕ್ಕೆ ಜೊತೆಯಾದ ಕೀರ್ತಿ ನನ್ನ ಬ್ಲಾಗ್ ಗೇನೇ ಸಲ್ಲುತ್ತದೆ...ಕೆಲವೊಮ್ಮೆ ಇಂತಹ ಅಂತರಂಗದ ಗೆಳತಿಯನ್ನೂ ಅಂತರಂಗದಿಂದ ದೂರವೇ ಇಟ್ಟಿದ್ದೇನೆ.. ಎರಡು ಮೂರು ತಿಂಗಳು ಸುಮ್ಮನಿದ್ದು ನಾಲ್ಕನೆ ತಿಂಗಳಿಗೆ ಮಾತಾಡಿದ್ದು ಇದೆ..ಮೌನ ಮೌನವೇ..! ಆದರೂ ಇದು ಮೌನಾಂ'ತರಂಗ'.... ಮೀಟಿದ ಭಾವ'ತರಂಗ'...!!’Sweet & Simple Girl....’ ನನ್ನ ಬಗ್ಗೆ ನಾನೇ ಹಾಕಿಕೊ೦ಡು ಬೆನ್ನು ತಟ್ಟಿಕೊ೦ಡಿದ್ದೇನೆ..
ನಿಜಕ್ಕೂ ನಾನ್ಯಾರು...!?
ನಾನು ಮೌನರಾಗ..! ಹೀಗೆಂದು ಹೇಳಿಕೊಳ್ಳುತ್ತೇನೆ..!
ನಿಜ ನಾಮಧೇಯ ಸುಷ್ಮಾ. ಊರು ಮೂಡುಬಿದಿರೆ.
ಕರಾವಳಿಯ ಹುಡುಗಿ.. ಕೆಲಸದ ನಿಮಿತ್ತ ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸ.. ಊರು, ಮನೆ, ಅಮ್ಮ ಎಂದರೆ ಜೀವ, ತುಡಿತ, ಮಿಡಿತ...
ಬದುಕಿನೆಡೆಗೆ ಹಾಕುತ್ತಿರುವ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ನೋವು, ನಿರಾಸೆ, ಪ್ರೀತಿ ಮತ್ತು ಕನಸು...
ನನಗೆ ನಾನೇ ಹಾಕಿಕೊಂಡ ಕಟ್ಟುಪಾಡುಗಳಲ್ಲಿ ಕನಸಿನ ಬದುಕು..
ತೀರಾ ಬರೆಯಬೇಕೆಂದು ಹೊರಟವಳಲ್ಲ... ಹೃದಯದ ಮಾತುಗಳಿಗೆ ಕಿವಿಯಿರಲಿ ಎಂದೆನಿಸಿದಾಗ ಬರೆದ್ದಿದ್ದು ಇಷ್ಟು ದೂರ ಎಳೆದುಕೊ೦ಡು ಬಂದಿದೆ.. ಒಂದಷ್ಟು ಸಹೃದಯಿ ಗೆಳೆಯರನ್ನು ಕೊಟ್ಟಿದೆ..ತಪ್ಪಾದಾಗ ತಿದ್ದಿ ಹೇಳುವ, ಪ್ರೋತ್ಸಾಹಿಸುವ ಸನ್ಮಿತ್ರರನ್ನು ಒದಗಿಸಿದೆ..ಬರೆದಿದ್ದು ಇಷ್ಟೇ ಇಷ್ಟಾದರೂ ಧನ್ಯತೆಯಿದೆ.. ಅದಕ್ಕಾಗಿ ನಾನು ಋಣಿ..

11 ಕಾಮೆಂಟ್‌ಗಳು:

 1. ಎರಡನೇ ವಾರ್ಷಿಕೋತ್ಸವದ ಶುಭಾಶಯಗಳು ಸುಷ್ಮಾ:) ನಿಮ್ಮ `ಮೌನರಾಗ' ನಮ್ಮೆಲ್ಲರ ಮನವನ್ನು ಅರಳಿಸಿದೆ. ಈ ರಾಗ ನಿರ೦ತರವಾಗಿರಲಿ.

  ಪ್ರತ್ಯುತ್ತರಅಳಿಸಿ
 2. ಶುಭಾಶಯಗಳು..ಮೌನರಾಗದಲ್ಲಿ ಒಳ್ಳೆಯ ಲೇಖನಗಳು ಮುಂದುವರೆಯಲಿ....

  ಪ್ರತ್ಯುತ್ತರಅಳಿಸಿ
 3. ಒಂದು ವರ್ಷದ ಮೌನ ರಾಗಕ್ಕೆ ಶುಭಾಶಯಗಳು, ಒಳ್ಳೆಯ ಬ್ಲಾಗ್ ನಿಮ್ಮದು, ಮೌನ ರಾಗ ಮತ್ತಷ್ಟು ಉತ್ತಮವಾಗಿ ಬರಲಿ. ನಾವೆಲ್ಲಾ ನಿಮ್ಮಿಂದ ಮತ್ತಷ್ಟು ಒಳ್ಳೆಯದನ್ನು ನಿರೀಕ್ಷಿಸುತ್ತವೆ.ಅಭಿನಂದನೆಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ಪ್ರತ್ಯುತ್ತರಅಳಿಸಿ
 4. ಅಭಿನಂದನೆಗಳು ಸುಷ್ಮಾ..... ನಿಮ್ಮೂರಿನ ಸಾವಿರ ಕಂಬದಂತೆ ನಿಮ್ಮ ಬ್ಲಾಗ್ ಮುಂದುವರೆಯಲಿ ಎಂದು ಆಶಿಸುತ್ತೇನೆ...

  ಪ್ರತ್ಯುತ್ತರಅಳಿಸಿ
 5. ನಿಲ್ಲದಿರಲಿ ರಾಗ.... ಹೊಮ್ಮಿ ಬರಲಿ ಹೊಸ ಭಾವಾಂತರಂಗ...

  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ಗಿರೀಶ್ ಸರ್ & ಸಂಧ್ಯಾ ಮೇಡಂ...

  ಪ್ರತ್ಯುತ್ತರಅಳಿಸಿ
 7. ಧನ್ಯವಾದಗಳು ಶ್ರುತಿ.... ನಿಮ್ಮ ಮನತುಂಬಿದ ಹಾರೈಕೆಗೆ ಋಣಿ...

  ಪ್ರತ್ಯುತ್ತರಅಳಿಸಿ
 8. ರಾಗಕ್ಕೆ ತಾಳ ಬೇಕು
  ತಾಳಕ್ಕೆ ಭಾವ ಬೇಕು
  ಭಾವಕ್ಕೆ ಮೌನ ಬೇಕು
  ಮೌನಕ್ಕೆ ಅಕ್ಷರ ಬೇಕು
  ಅಕ್ಷರಕ್ಕೆ ಜೀವ ಬೇಕು
  ಆ ಜೀವ ತುಂಬುವ ರಾಗವೇ ಮೌನ ರಾಗ.
  ಅಭಿನಂದನೆಗಳು ಪಿ ಎಸ್ ಮುಂದುವರೆಯಲಿ ಮೌನ ರಾಗ

  ಪ್ರತ್ಯುತ್ತರಅಳಿಸಿ