ಸೆಪ್ಟೆಂಬರ್ 25, 2012

ಹನಿ ಹನಿ ಇಬ್ಬನಿ...

1. ಒಂಟಿತನವನ್ನೇ
ಉಸಿರಾಡಿದವಳಿಗೆ
ಸಂಬಂಧಗಳ್ಯಾಕೋ
ಉಸಿರುಕಟ್ಟಿಸುತ್ತವೆ...!


2. ಒಡಲ ಬಗೆದು
ಒಡಲ ನೋವ
ಶಮನ
ಮಾಡುತ್ತೇನೆಂದವರು..!!


3. ಇವನು-
ಅಮಾವಾಸ್ಯೆಯಂತಹ
ಬದುಕಲ್ಲಿ
ಹಾಲು ಬೆಳದಿಂಗಳ
ಸುರಿಸಿದ ಚಂದ್ರಮ...


4. ಅಮ್ಮ-
ಒತ್ತಿ ಬರುವ
ದುಃಖಕ್ಕೆ
ತಡೆಗೋಡೆಯಾಗಿ
ನಿಂತವಳು...


5. ಅವಳ ಜೊತೆ
ನಿನ್ನ ಕಂಡಾಗಲೇ
ಅಸಹನೆಯ
ಹೊಗೆಯಾಡಿದ್ದು...!


6. ನೀ ಜೊತೆ ಇರೆ
ನಿನ್ನ ಕಣ್ಣ ಬೆಳಕಲ್ಲೇ
ಕತ್ತಲ ಸರಿಸಿ
ಬದುಕ ಸವೆಸಿಯೇನು..


7. ನನ್ನೊಲುಮೆ
ಆಕಾಶದಷ್ಟು ವಿಶಾಲ
ಎನ್ನುತ್ತಿದ್ದಂತೆಯೇ
ನಿನ್ನ ಪ್ರೀತಿಯ
ಕ್ಷೀರಸಾಗರದಲ್ಲಿ
ಮಿಂದಿದ್ದೆ...


8. ನಿನ್ನ ಜಾಗವನ್ನು
ಯಾರೂ ತುಂಬಲಾರರು
ಎನ್ನುತಿದ್ದೆ...
ಈಗ ನನ್ನವಳು ಆ ಮಾತನ್ನ
ಸುಳ್ಳಾಗಿಸಿದ್ದಾಳೆ.


9. ಕೆನ್ನೆ ತೋಯಿಸಿದ
ನೆನಪುಗಳೆಲ್ಲ ಮುತ್ತಾಗಿವೆ...
ನಾ ಮುತ್ತುಗಳ
ರಾಣಿಯಾಗಿದ್ದೇನೆ..!!


10. ನೆನಪಿನ
ಹೂಜಿಯಲ್ಲಿ
ಕನಸಿನ ಬೀಜ
ಮೊಳಕೆಯೊಡೆದಿದೆ...

11 ಕಾಮೆಂಟ್‌ಗಳು:

 1. ಅವಳ ಜೊತೆ
  ನಿನ್ನ ಕಂಡಾಗಲೇ
  ಅಸಹನೆಯ
  ಹೊಗೆಯಾಡಿದ್ದು...!
  ಯಾರ ಜೊತೆ ಕಂಡಾಗ?

  ಪ್ರತ್ಯುತ್ತರಅಳಿಸಿ
 2. ಪ್ರೀತಿಯನ್ನು ಕ್ಷೀರ ಸಾಗರಕ್ಕೆ ಹೋಲಿಸಿದ್ದು ಇಷ್ಟವಾಯ್ತು..:)

  ಪ್ರತ್ಯುತ್ತರಅಳಿಸಿ
 3. ಎಲ್ಲ ಹನಿಗಳೂ ತೀವ್ರವಾಗಿ ತಟ್ಟುವಂತಿವೆ.

  ಮುಖ್ಯವಾಗಿ ಒಂಟಿತನ ಮತ್ತು ಅಮಾವಾಸ್ಯೆಯ ಬಗೆಯದು.

  ಶುಭಾಶಯ ಪತ್ರಗಳಿಗೂ ಹೇಳಿ ಮಾಡಿಸಿದ ವಿಶಿಷ್ಟ ಸಾಲುಗಳು.

  ಪ್ರತ್ಯುತ್ತರಅಳಿಸಿ
 4. ಒಂಟಿತನವನ್ನೇ
  ಉಸಿರಾಡಿದವಳಿಗೆ
  ಸಂಬಂಧಗಳ್ಯಾಕೋ
  ಉಸಿರುಕಟ್ಟಿಸುತ್ತವೆ...!
  As usual ellavu soooppppeeerrrrruuuuu....

  ಪ್ರತ್ಯುತ್ತರಅಳಿಸಿ
 5. ಧನ್ಯವಾದಗಳು ಬದರಿ ಸರ್ & ಸಂಧ್ಯಾ ಮೇಡಂ...

  ಪ್ರತ್ಯುತ್ತರಅಳಿಸಿ
 6. ನೋವು ನಲಿವು ಗೆಲುವು ಮೂರು ಅಕ್ಕ ಪಕ್ಕದ ಪದಗಳು.. ಆದರೆ ನಡುವಿನ ಅಂತರ ಮಾತ್ರ ಅಪಾರ. ಹೇಳಬೇಕಾದುದ್ದನ್ನು ಚುಟುಕಗಳಲ್ಲಿ ಹೇಳುವ ನಿಮ್ಮ ಶೈಲಿ ಇಷ್ಟವಾಯಿತು ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮನದ ತೊಳಲಾಟ ಹೊರಹೊಮ್ಮುವ ಪರಿ ಇದು.. ಧನ್ಯವಾದಗಳು...

   ಅಳಿಸಿ