ಸೆಪ್ಟೆಂಬರ್ 8, 2012

ಹನಿ ಹನಿ ಇಬ್ಬನಿ..

1. ನನ್ನೆದೆಯ ಬಾಗಿಲು ತೆರೆದಿದೆ
 ಹಿಂದುರುಗುತ್ತಿಯಾ?
ನನ್ನೊಡಲ ನೋವನ್ನು
ನಿನ್ನ ಮಡಿಲಿಗೆ ಹಾಕಿ
ಹಗುರಾಗಬೇಕು...!


2.
ಬಯಸಿದ್ದೆಲ್ಲ ಸಿಗುವಂತಿದ್ದರೆ
ನೀನೇ ಬೇಕೆಂದು
ನಾ ಬೇಡುವುದಕ್ಕೆ
ಅರ್ಥವೇನಿರುತ್ತಿತ್ತು?!


3.
ದಕ್ಕಿದ್ದು ಸಿಗಲಿಲ್ಲವೆಂದು
ನಾ ಎದೆಬಡಿದು ಅತ್ತಿದ್ದು
ಸುಮ್ಮನಲ್ಲ..
ಸಿಗದಾಗ ಸೋರಿ ಹೋಗಿದ್ದು
ನನ್ನ ನಿನ್ನ - ಬದುಕು..!!


4.
ನೀ ತೀರಾ ಸನಿಹ ಬಂದು
ಸೋಕಿದಾಗಲೇ
ನನಗರಿವಾಗಿದ್ದು
ನಿನ್ನ ಉಸಿರಲೂ
ನನ್ನ ಹೆಸರಿರುವುದು..!


5. ಪ್ರೀತಿಯೆಂದರೆ
ನೀನು ಮತ್ತು ನೀನು ಮಾತ್ರ
ಮತ್ತು ಬದುಕೆಂದರೆ
ನಾನು ಮತ್ತು ನಾನು ಮಾತ್ರ!!


6.
ಬದುಕಿಗಾಗಿ ನೀನೋ
ನಿನಗಾಗಿ ಬದುಕೋ
ಅರ್ಥವಾಗದೇನೆ
ನಿನ್ನೊಂದಿಗೆ ಇಷ್ಟು ದೂರ
ಕ್ರಮಿಸಿಬಿಟ್ಟೆ...!


7.
ಜೀವನದ ಮಜಲುಗಳ
ಎಳೆ ಬಿಡಿಸುವುದು ಕಷ್ಟ
ಎಂದು ಕೈಚೆಲ್ಲಿದ್ದಾಗಲೇ
ನನಗೆ ನೀನು ಕಾಣಿಸಿಬಿಟ್ಟೆ.


8.
ನೀ ಮನದಲ್ಲಿ ಮೂಡಿಸಿದ
ನಿನ್ನ ನೆನಪುಗಳ ಹೆಜ್ಜೆಗಳೇ
ಇಂದು ನನ್ನ ಬದುಕಲ್ಲಿ
ಭರವಸೆಯ ದೀಪವಿಡಿದು
ಮೆರವಣಿಗೆ ಹೊರಟಿರುವುದು..!


9.
ನೆನ್ನೆ ರಾತ್ರಿ
ಗುಡುಗು ಮಿಂಚಿನೊಂದಿಗೆ
ಸುರಿದ ಜಡಿಮಳೆ
ನಿನ್ನ ನೆನಪುಗಳದ್ದೆನಾ?


10. ನಾ ಮುಖ ಬಾಡಿಸಿ ಕೂತರೆ
ನೀ ಬರುವವನೇ ಎಂದು ಗೊತ್ತಿತ್ತು
ಅದಕ್ಕೆ ನೆನ್ನೆ ಸಂಜೆ
ಮಾವಿನ ತೊಪಲ್ಲಿ ಹಾಗೆ ಕುಳಿತಿದ್ದು..!

 

16 ಕಾಮೆಂಟ್‌ಗಳು:

 1. ಎಲ್ಲ ಹನಿಗಳೂ ಅದ್ಭುತವಾಗಿವೆ..

  ನೀ ತೀರಾ ಸನಿಹ ಬಂದು
  ಸೋಕಿದಾಗಲೇ
  ನನಗರಿವಾಗಿದ್ದು
  ನಿನ್ನ ಉಸಿರಲೂ
  ನನ್ನ ಹೆಸರಿರುವುದು..!

  ತುಂಬಾ ಇಷ್ಟವಾಯಿತು...

  ಪ್ರತ್ಯುತ್ತರಅಳಿಸಿ
 2. ಎಲ್ಲಾ ಹನಿಗವನಗಳು ಚೆನ್ನಾಗಿವೆ... ಶುಭವಾಗಲಿ!

  ಪ್ರತ್ಯುತ್ತರಅಳಿಸಿ
 3. ಈ ಹತ್ತು ಹೆಜ್ಜೆಗಳು ನನಗೆ ನೆನಪುಗಳ ಬುತ್ತಿ ಕಟ್ಟಿಕೊಟ್ಟವು.

  ಹೇ ನಿಮಗೆ ಮಾವಿನ ತೋಪೂ ಗೊತ್ತೆ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಗುರುಗಳೇ, ಕನಸು ಕಲ್ಪನೆಗಳು ಅಂತ ಹೋದರೆ ನೋಡಿದ್ದು, ನೋಡದ್ದು ಎಲ್ಲದೂ ಕಾಣಸಿಗುತ್ತದೆ ಅಲ್ಲವೇ..?
   ನಾನು ಸ್ವಲ್ಪ ಆ ಕಡೆಯವಳು...!
   ಧನ್ಯವಾದಗಳು,...

   ಅಳಿಸಿ
 4. ಮಾವಿನ ತೋಪಲ್ಲಿ ಒಲವಿನ ನೆನಪು - ಕನಸುಗಳ ಮಳೆಯ ಮೆರವಣಿಗೆ...
  ಚಂದದ ಬರಹಗಳ ಗುಚ್ಛ...

  ಪ್ರತ್ಯುತ್ತರಅಳಿಸಿ
 5. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 6. ಎಲ್ಲಾ ಹನಿಗಳೂ ಇಷ್ಟ ಆದವು....ಅಭಿನಂದನೆಗಳು....

  ಪ್ರತ್ಯುತ್ತರಅಳಿಸಿ
 7. ನಾ ಮುಖ ಬಾಡಿಸಿ ಕೂತರೆ
  ನೀ ಬರುವವನೇ ಎಂದು ಗೊತ್ತಿತ್ತು
  ಅದಕ್ಕೆ ನೆನ್ನೆ ಸಂಜೆ
  ಮಾವಿನ ತೊಪಲ್ಲಿ ಹಾಗೆ ಕುಳಿತಿದ್ದು..!
  soooper..... ellavu chennaagive...

  ಪ್ರತ್ಯುತ್ತರಅಳಿಸಿ
 8. yellavu ishta aaytu sushma avre..:) tumba channagi bariteeri... nim blog SIMPALLAAG OND LOVE STORY kanri..:)

  ಪ್ರತ್ಯುತ್ತರಅಳಿಸಿ
 9. ಇದು ನಿಮ್ಮ ಕವನಗಳ ತಾಕತ್. ಸರಳ ಶಬ್ಧಗಳು.. ವಿರಳ ಭಾವಗಳು ಸೂಪರ್ ಪಿ ಎಸ್. ನನಗೆ ತುಂಬಾ ಇಷ್ಟವಾದ ಸಾಲುಗಳು ಇವು

  "ನೀ ತೀರಾ ಸನಿಹ ಬಂದು
  ಸೋಕಿದಾಗಲೇ
  ನನಗರಿವಾಗಿದ್ದು
  ನಿನ್ನ ಉಸಿರಲೂ
  ನನ್ನ ಹೆಸರಿರುವುದು..!"

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಇಷ್ಟ ಪಟ್ಟು ಚಂದದ ಕಾಮೆಂಟ್ ಹಾಕಿದಕ್ಕೆ ಧನ್ಯವಾದಗಳು ಅಣ್ಣಯ್ಯ...

   ಅಳಿಸಿ