ಸೆಪ್ಟೆಂಬರ್ 17, 2012

HAPPY BIRTHDAY TO YOU

ಇವನು-
ಖಾಲಿ ಮನಸಿಗೆ ಕನಸು ತಂದವನು
ನೀರಸ ಬದುಕಿಗೆ ಬೆಳಕ ತಂದವನು

ಬಳಲಿದ ಕಂಗಳಿಗೆ ಕಾಂತಿಯ ತಂದವನು
ಬರಿದಾದ ಹೃದಯಕ್ಕೆ ಒಡೆಯನಾಗಿ ಬಂದವನು
ನನ್ನ ದನಿಗೆ ಕಿವಿಯಾದವನು
ಸುಮ್ಮಸುಮ್ಮನೆ ಬೇಸರಿಸಿದವನು

ನನ್ನೊಳಗೆ ಸಾವಿರ ಹಣತೆಗಳ ಹಚ್ಚಿಟ್ಟವನು
ಕೈ ಹಿಡಿದು ಮುನ್ನಡೆಸಿದವನು
ನನಗಾಗೆ ನಾಲ್ಕು ಸಾಲು ಗೀಚಿ ಕವಿಯಾದವನು
ಹಣೆಯ ಮುತ್ತಲ್ಲಿ ಧೈರ್ಯ ಹೇಳಿದವನು

ದೇಹಕ್ಕೆ ಜೀವವಾಗಿ ಬಂದವನು
ಜೀವದ ಉಸಿರಾದವನು
ಹೃದಯದ ಮಿಡಿತವಾದವನು
ಬಿಗಿ ಅಪ್ಪುಗೆಯಲ್ಲಿ ನೋವ ಮರೆಸಿದವನು

ನನ್ನೊಳಗೆ ಎಲ್ಲವೂ ಆದವನು
ನನ್ನ ಪ್ರಾಣ ಪದಕ - ಇವನು.

 HAPPY BIRTHDAY TO YOU

ಹುಟ್ಟು ಹಬ್ಬದ ಸಂಭ್ರಮದಂತೆ
ಜೀವಮಾನವಿಡಿ ಸಡಗರ ತುಂಬಿರಲಿ

ಸಾಲು ದೀಪಗಳ ಬೆಳಕಂತೆ
ಜೀವನ ಬೆಳಗುತಿರಲಿ
ಸುಖ ಸಂತೋಷ ನೆಮ್ಮದಿಗಳು
ಮೊಗೆ ಮೊಗೆದು ಬರುತಿರಲಿ

ಹುಟ್ಟು ಹಬ್ಬದ ಶುಭಾಶಯಗಳು ನನ್ನ ಜೀವವೇ...


4 ಕಾಮೆಂಟ್‌ಗಳು:

 1. ಸಂತಸವೇ ನಿನ್ನ ಮನಸ್ಸು ತುಂಬಲಿ ಹುಡುಗ
  ಖುಷಿಯಷ್ಟೇ ನಿನ್ನ ಪಾಲಾಗಲಿ
  ಹುಟ್ಟು ಹಬ್ಬದ ಶುಭಾಶಯಗಳು

  ಪ್ರತ್ಯುತ್ತರಅಳಿಸಿ
 2. ಜೀವ ದೇಹವನ್ನು ನೆರಳಾಗಿ ಹಿಂಬಾಲಿಸುತ್ತದೆ ಅಂತಹ ಜೀವಾತ್ಮನಿಗೆ ಶುಭಾಶಯ ಹೇಳುವ ಪರಿ ಇಷ್ಟವಾಗುತ್ತದೆ..ದೇಹವು ಬೆವರು ಸುರಿಸಿದರೆ...ಜೀವ ತನ್ನ ಕಣಗಳನ್ನು ತುಂಬಿಕೊಂಡು ಆ ಬೆವರನ್ನು ಸಾರ್ಥಕಗೊಳಿಸುತ್ತದೆ..ಸುಂದರ ಬರಹ ಪಿ.ಎಸ್

  ಪ್ರತ್ಯುತ್ತರಅಳಿಸಿ
 3. ಬದರಿ ಸರ್, ಚಿನ್ಮಯ್, ಅಣ್ಣಯ್ಯ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ