ಅಕ್ಟೋಬರ್ 9, 2012

ಹನಿ ಹನಿ ಇಬ್ಬನಿ..

1. ಚಿಂತೆಯ ಕರಿಮೋಡ
ನನ್ನಯ ಚಂದ್ರಮನನ್ನು
ಮುತ್ತಿದಾಗ
ನನ್ನೀ ಬಾಳ ತುಂಬಾ
ಕಗ್ಗತ್ತಲೇ...


2. ದುಃಖದಲ್ಲೇ
ಬದುಕು ಸುಖವಾಗಿದೆ
ಎಂದುಕೊಂಡು
ಕಣ್ಣು ತುಂಬಿಕೊಳ್ಳುತ್ತೇನೆ..!


3. ಯಾರೋ ಅದೇನೋ
ಹೇಳಿದರೆಂದು
ಸಾಯುವುದಿದ್ದರೆ
ನಾ ಅದೆಷ್ಟು ಬಾರಿ
ಸಾಯಬೇಕಿತ್ತು....?!


4. ತಾರಕಕ್ಕೆರಿದ್ದ
ಹುಚ್ಚು ಮುನಿಸು
ನಿನ್ನ ಮುದ್ದಿನ ಮದ್ದಲ್ಲಿ
ಕಾಣೆಯಾಯಿತು...

  
5. ಜಾಣೆ-
ತಿರುವಿನ
ದಾರೀಲಿ
ಎಡವಿ
ಬೀಳುತ್ತಾಳೆ..!


6. ಬದುಕಿನ ಕೊನೆವರೆಗೂ
ಜೋತೆಯಾಗಿರುತ್ತೆನೆಂದವನು
ಮನೆಯ ಪಕ್ಕದ ತಿರುವಿನವರೆಗೆ
ಬರಲಾಗದೆ ಹೋದ..!


7. ಬವಣೆಗೆ ಬದುಕು ಸತ್ತಿದೆ
ಸತ್ತ ಬದುಕಿಗೂ
ಬದುಕುವ ಬಯಕೆಯಾಗಿದೆ
ಬಯಕೆಗೆ ಬದುಕಿಲ್ಲ
ಬದುಕು ಮತ್ತೆ ಸತ್ತಿದೆ...!!!!

  
8. ಎದೆಯ ಬಿರುಗಾಳಿ
ರಪ್ಪೆಂದು ನಿನ್ನೆದೆಗೆ
ರಾಚಿದಾಗ
ಎದೆಯೊಡ್ಡಿ
ನಿಂತಿದ್ದೆಯಲ್ಲಾ....!


9. ನಿನ್ನ
ಜಾಣ ಕಿವುಡುತನದ
ಮುಂದೆ, ನಾ
ಮೂಕಿಯಾಗಿರಬೇಕಿತ್ತು.

  
10. ಬಿತ್ತಿ ಬುಲೆ
ಕೈ ಪತ್ತುದುಂಡು
ನೀನ್ನೋ ಉಡಲ್ ದಿಂಜಿ

ಮೊಕೆದ ಲೆಕ್ಕೊನೆ
(ತುಳು ಭಾಷೆ)

6 ಕಾಮೆಂಟ್‌ಗಳು:

 1. ಮನಕೆ
  ಮುದನೀಡಿದ
  ಹನಿ ಹನಿ
  ಇಬ್ಬನಿ.

  ಸುಂದರವಾಗಿದೆ.

  ಪ್ರತ್ಯುತ್ತರಅಳಿಸಿ
 2. ಎಲ್ಲಾ ಚುಟುಕುಗಳೂ ಇಷ್ಟವಾಯಿತು. ಮುಖ್ಯವಾಗಿ ೯ ನೆಯ ಚುಟುಕು.

  ತುಳು ಚುಟುಕು ಕನ್ನಡೀಕರಿಸಿ ಉಪಕರಿಸಿ.

  ಪ್ರತ್ಯುತ್ತರಅಳಿಸಿ
 3. ಗಣೇಶ್ ಸರ್, ಚಿನ್ಮಯ್ & ಬದರಿ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 4. "ನನ್ನ ಹಾಡು ನನ್ನದು" ಎನ್ನುವ ಸುಪ್ರಭಾತ ಚಿತ್ರದ ವಿಷ್ಣು ಹಾಡಿದ ಹಾಡಿನಂತೆ ನಾವು ಬದುಕಿದ ಹಾದಿ ನಮಗೆ ಎನ್ನುವ ಭಾವ ತುಂಬಿದ ಈ ಸಾಲು ಇಷ್ಟವಾಯಿತು.
  "ಯಾರೋ ಅದೇನೋ
  ಹೇಳಿದರೆಂದು
  ಸಾಯುವುದಿದ್ದರೆ
  ನಾ ಅದೆಷ್ಟು ಬಾರಿ
  ಸಾಯಬೇಕಿತ್ತು....?!"

  ಹಾಗೆ ಮಿಕ್ಕ ಚುಟುಕಗಳು ಪಟಾಕಿ ಸಿಡಿದಂತೆ ಚಟ ಪಟಾ ಎನ್ನುತ್ತಿವೆ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತೀರಾ ಅವಮಾನ, ಸಂಕಟ ಅನುಭವಿಸಿದ ಸಂದರ್ಭದಲ್ಲಿ ಜಿನುಗಿದ ಹನಿ ಇದು.. ಮೆಚ್ಚಿದ್ದಕ್ಕೆ ಧನ್ಯವಾದಗಳು.... :)

   ಅಳಿಸಿ