ಅಕ್ಟೋಬರ್ 17, 2012

ನಮ್ಮವರು..!

ನೋವುಗಳ ಬೆಂಕಿಯಲ್ಲಿ
ಒಡಲು ಉರಿಯುತ್ತಿರುವಾಗ
ತುಪ್ಪ ಸುರಿದವರು..


ಬಯಕೆಗಳ ಗೋರಿಯಲ್ಲಿ
ಬದುಕು ನರಳುವಾಗ
ಹನಿ ನೀರು ಬಿಡದವರು..


ಬೆಳಕ ದಾರಿಯ ಸರಿಸಿ
ಕಗ್ಗತ್ತಲ ಕೂಪಕ್ಕೆ

ತಳ್ಳಿಹೋದವರು..


ಮುಗ್ಗರಿಸಿ ಬಿದ್ದಾಗ
ಚೆಲ್ಲಿದ ಕನಸುಗಳ
ತುಳಿಯುತ್ತಾ ಸಾಗಿದವರು..


ಸೋಲಿನ ರಭಸದ ಛಡಿಯೆಟಿಗೆ
ಮೂಲೆ ಸೇರಿದಾಗ
ಮತ್ತೊಂದು ಪೆಟ್ಟು ನೀಡಿದವರು..


ದುಃಖದ ಬೇನೆಗೆ ಕುದಿಯುತ್ತಿದ್ದ
ನನ್ನೊಡಲ ರಕುತದಲ್ಲೇ
ತಮ್ಮ ದಾಹ ತೀರಿಸಿಕ್ಕೊಂಡವರು


ಇಂತಿಪ್ಪ ಇವರು - ನಮ್ಮವರು..!

ಸೋಲುಗಳ ಮೆಟ್ಟಿಲಲ್ಲಿ
ಗೆಲುವಿನ ಸೌಧ ಕಟ್ಟಿದಾಗ
ನಗೆಯ ಹೊತ್ತು ಬಂದವರು..!


-ಇವರು ನಮ್ಮವರು..!


8 ಕಾಮೆಂಟ್‌ಗಳು:

 1. ಕೆಟ್ಟ ಜನರ ಬಗೆಗೆ ಒಳ್ಳೆಯ ಕವನ.

  ನಮ್ಮವರು ಹೇಳುವರು,
  ಇರಿದು ತಿಂಬೋ ಈ ಮಂದಿ
  ಅಕ್ಕಿ ಬೆಳೆ ಖಾಲಿಯಾದರೆ
  ಬೆನ್ನ ಮಾಂಸವೇ ಬೇಯಿಸಿರಿ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಬ್ಬಾ...!!
   ಅತ್ತ ದರಿ ಇತ್ತ ಪುಲಿ..
   ಧನ್ಯವಾದಗಳು ಬದರಿ ಸರ್...

   ಅಳಿಸಿ
 2. ಭಾಗ್ಯವಂತ ಚಿತ್ರದ "ಮನುಷ್ಯರೋ ಇವರು ರಾಕ್ಷಸರೋ.. ತಿಳಿದವರೋ ಇಲ್ಲ ಮೂಢರೋ" ಹಾಡು ನೆನಪಿಗೆ ಬಂತು ನಿಮ್ಮ ಕವನ ಓದಿ. ಅಬ್ಬಾ ಆ ಪುಟ್ಟ ಹೃದಯದಲ್ಲಿ ಎಂತಹ ಅದ್ಭುತ ಬರಹಗಳು ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕೆಲವೊಮ್ಮೆ ಅನುಭವಗಳು ಹಾಗೆಯೇ ಅಕ್ಷರಕ್ಕಿಳಿಯುತ್ತವೆ ಅಣ್ಣಯ್ಯ... ಧನ್ಯವಾದಗಳು.... :)

   ಅಳಿಸಿ