ಅಕ್ಟೋಬರ್ 23, 2012

ಕುಂತಿಯರು..!

ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಅವರವರಿಗೆ ಅವರವರ ಬದುಕು 
ಗಂಡಸೋ ಬದುಕಿ ಬಿಡುತ್ತಾನೆ 
ಹೆಂಗಸೂ ಬದುಕಿ ಬಿಡುತ್ತಾಳೆ 
ಬಲಿಯಾಗಿದ್ದು ಬಡಕೂಸು 
 
ಅನಾಥಾಶ್ರಮದ ಬಾಗಿಲಲ್ಲಿ 
ಕಸದ ತೊಟ್ಟಿಯಲ್ಲಿ 
ನಾಯಿ ನೊಣಗಳ ದಬ್ಬಾಳಿಕೆಯಲ್ಲಿ 
ಉಸಿರುಗಟ್ಟಿಸುವ ಯಾತನೆಯಲ್ಲಿ 
ಸಾವು ಬದುಕಿನ ಅನಿಶ್ಚಿತತೆಯಲ್ಲಿ 
ಅದರ ಜನನ 

ಜೀವ ಕೊಟ್ಟು 
ಜೀವನ ಕಸಿದುಕೊಂಡವರು..!
ಈ ಅಧುನಿಕ ಕುಂತಿಯರು..!6 ಕಾಮೆಂಟ್‌ಗಳು:

 1. ಕೆಟ್ಟ ಜನರ ಕೆಟ್ಟ ಕೆಲಸ ಈ ಹಡೆದು ಬಿಸಾಡುವ ಕೆಲಸ.

  ಸಮಾಜ ಎಂದು ಕಲಿಯುತ್ತದೋ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಜ ಸರ್..
   ಅಂತಹ ಮನಸ್ಥಿತಿಗಳು ಬದಲಾಗಬೇಕು.....
   ಪ್ರತಿಕ್ರಿಯೆಗೆ ಧನ್ಯವಾದಗಳು...

   ಅಳಿಸಿ
 2. ನಿಜ ಸುಷ್ಮಾ...ವಾಸ್ತವ..
  "ನಾಯಿ ನೊಣಗಳ ದಬ್ಬಾಳಿಕೆಯಲ್ಲಿ" ಈ ಪದಗಳ ಬಳಕೆ ಇಷ್ಟವಾಯ್ತು..
  ಬರೆಯುತ್ತಿರಿ..
  ನಮಸ್ತೆ...

  ಪ್ರತ್ಯುತ್ತರಅಳಿಸಿ
 3. "ಯೌವನದ ಹೊಳೆಯಲ್ಲಿ ಈಜಾಟ ಆಡಿದರೆ ಓ ಹೆಣ್ಣೇ ಸೋಲು ನಿನಗೆ" ಹಾಡನ್ನು ನೆನಪಿಗೆ ತಂದಿತು ಈ ಕವನ. ತಪ್ಪು ಇಬ್ಬರದು ಪಲಿತಾಂಶ ಮಾತ್ರ ಕಂದನಿಗೆ. ಕುಂತಿ ಸೂರ್ಯ ಸದಾ ಬೆಳಗುತ್ತಲೇ ಇದ್ದಾರೆ. ಕರಗಿದ್ದು ಮಾತ್ರ ಕರ್ಣ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ