ಅಕ್ಟೋಬರ್ 30, 2012

ಹನಿ ಹನಿ ಇಬ್ಬನಿ ..

1. ಪ್ರತಿಯೊಂದಕ್ಕೂ
ಅಂತ್ಯವಿದೆಯಂತೆ
ನೋವುಗಳಿಗೂ
ಆ ತೆರದ್ದೊಂದು
ಇದ್ದೀತಾ?


2. ಮೌನ ಮಾತಾಗದ ಹೊರತು
ಕಂಬನಿಗಳ ತಡೆಯುವರಿಲ್ಲ
ಮಾತು ನೀನಾಗದ ಹೊರತು
ದುಮ್ಮಾನಕ್ಕೆ ಅಂತ್ಯವಿಲ್ಲ..


3.
ಮನದಲ್ಲಿ
ಕನಸ ಕಾಮನಬಿಲ್ಲು
ಹೃದಯದಲ್ಲಿ
ಪ್ರೀತಿಯ ಸೊಲ್ಲು..

4.
ಅಂಧಕಾರದ ನಡುವೆ
ಬಿಕ್ಕಳಿಸಿ ಕೂತಾಗ
ನೀ ಪೂರೈಸಿದ
ಈ ಬೆಳದಿಂಗಳೆಷ್ಟು ಹಿತ...!


5.
ಮಳೆಬಿಲ್ಲಿನಂತಹ ಭಾಂದವ್ಯಕ್ಕೆ
ಈ ಆರ್ಭಟದ
ಗುಡುಗು ಮಿಂಚುಗಳಿಗಿಂತ
ಮುಂಜಾವಿನ ತುಂತುರು ಹನಿಗಳೇ
ಸಾಕಿತ್ತು..

6.
ಬರಪೀಡಿತ ಪ್ರದೇಶಗಳಿಗೆ
ಸವಲತ್ತುಗಳು ಉಚಿತ
ಬರಪೀಡಿತ ಮನಸ್ಸುಗಳಿಗೆ...?


7. ಒಳಗೊಳಗೇ
 ಅದುಮಿಟ್ಟ ನೋವುಗಳು
 ಜ್ವಾಲಾಮುಖಿಯಂತೆ
ಸಿಡಿದು ಹೋಗಲು ತವಕಿಸುತ್ತಿರುತ್ತವೆ...


8. ಮೋಸಗಾತಿ ಎನಬೇಡ
ನಿನಗೆ ನಾ
ಮೋಸ ಮಾಡಲು ಸಾದ್ಯವಿಲ್ಲ
ಮಾಡಿದ್ದರೆ
ಅದು ನನಗೆ ನಾನೇ..!


9. ನಿನ್ನೊಳಗೆ ಬಂದು
ಈ ಪರಿ ಕಾಡಿದೆನೆಂದು
ಬೇಸರಿಸದಿರು ಗೆಳೆಯಾ
ಕಳೆದುಹೋಗಿರೋ ನನ್ನತನವ
ನಾ ಹುಡುಕುವುದು ನಿನ್ನಲ್ಲೇ..!

10. ನನ್ನಯ ಹೆಜ್ಜೆಗೆ
ಮುನ್ನುಡಿಯಾಗುವೆಯೆಂದು
ಬಂದವಳು
ಬರಿಯ ಬೆನ್ನುಡಿ ಬರೆದು
ಹೋಗಿಬಿಟ್ಟಳು..

6 ಕಾಮೆಂಟ್‌ಗಳು:

 1. ಅದೆಷ್ಟು ಹೃದಯಂಗಮವಾಗಿ ಬರೆಯುತ್ತೀರಾ ಸುಷ್ಮಾ...ನಿಮ್ಮ ಕವನಗಳಲ್ಲಿ ಪದಗಳನ್ನು ಮೀರಿದ ಭಾವವಿದೆ....

  ಓಳ್ಳೆಯದಾಗಲಿ ಅಂತ ಆಷ್ಟೇ ಹೇಳಬಲ್ಲೆ...

  ನಮಸ್ತೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಚಿನ್ಮಯ್...

   ಅಳಿಸಿ
 2. ನೆಲವನ್ನು ಬಗೆದಂತೆ ಸಿಗುವ ಪದರಗಳ ಹಾಗೆ ಪ್ರತಿಯೊಂದು ಹನಿಯು ಪದರ ಪದರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸುಂದರ ಅತಿ ಸುಂದರ ಪಿ ಎಸ್

  ಪ್ರತ್ಯುತ್ತರಅಳಿಸಿ