ನವೆಂಬರ್ 27, 2012

ಭಯವಾಗುತ್ತಿದೆ ನನಗೆ..

ಭಯವಾಗುತ್ತಿದೆ ನನಗೆ..
ನಿನ್ನೊಡಲ ಬೆಂಕಿಯಲ್ಲಿ ಭಸ್ಮವಾದೇನೆಂಬ ಭಯ
ನಿನ್ನ ಕಣ್ಣಿರ ಕೋಡಿಯಲ್ಲಿ ಕೊಚ್ಚಿ ಹೋದೆನೆಂಬ ಭಯ
ನಿನ್ನ ಮೌನದ ಉರಿಯಲ್ಲಿ ಬೆಂದೇನೆಂಬ ಭಯ
ನಿನ್ನ ಅಕ್ಷಿಯ ದೃಷ್ಟಿಯಲ್ಲಿ ನಾಶವಾದೇನೆಂಬ ಭಯ

ಭಯವಾಗುತ್ತಿದೆ ನನಗೆ..
ಮಾತುಗಳೆಲ್ಲ ಮೂಕವಾಗುವ ಭಯ
ಕಳಚಿಟ್ಟ ಬಂಧನ ಬಂಧವಾಗುವ ಭಯ
ವಿನಾಕಾರಣ ನಿನ್ನ ದೂಷಿಸಿದ ಭಯ
ಏಕಾಂಗಿಯಾಗಿಸಿ ನಾ ಹೊರನಡೆದೆನೆಂಬ ಭಯ

ಭಯವಾಗುತ್ತಿದೆ ನನಗೆ..
ನಿರ್ಲಿಪ್ತವಾಗಿರೋ ನಿನ್ನ ಕಂಗಳ ಭಯ
ಪಾಪಪ್ರಜ್ಞೆ ಕೊಂದೀತೆಂಬ ಭಯ
ಆಯಸ್ಸು ಧಾಪುಗಾಲು ಇಕ್ಕೀತೆಂಬ ಭಯ
ನಾ ಮಾಡಿದ ಘೋರಕ್ಕೆ ಮಡಿದೇನೆಂಬ ಭಯ
ಬದುಕಬೇಕೆಂಬ ಆಸೆಗೇ ಭಯ.


ಭಯವಾಗುತ್ತಿದೆ ನನಗೆ..
ನೀ ಹೀಗೆ ಕಾಣಿ(ಡಿ)ಸದಿರು ಹುಡುಗಿ 
ಭಯದ ನೆರಳಲ್ಲಿ 
ಭಯಂಕರ ರಾಕ್ಷಸನಿದ್ದಾನೆ
ನಾನು ಬದುಕಬೇಕು.. ಹೋಗಿ ಬಿಡು..!


                                       (ಚಿತ್ರ- ಅಂತರ್ಜಾಲ)

9 ಕಾಮೆಂಟ್‌ಗಳು:

 1. ಭಯದ ಬೆಳಕಲ್ಲಿದ್ದಾಗ ಇರುವೆಯು ಭೂತಾಕಾರ ತಾಳುತ್ತದೆ..ಎಷ್ಟು ಪರಿಯಾದ ಭಯ ಕಾಡುತ್ತದೆ..ಆಸೆಯೇ ಭಯವೆಂಬ ರಾಕ್ಷಸ..ತಲ್ಲಣಿಸದಿರು ಕಂಡ್ಯಾ ತಾಳು ಮಾನವೇ..ಎಲ್ಲಹುದಕು ಅವ ಇಹನು ಇದಕೆ ಸಂಶಯವಿಲ್ಲ...ಸುಂದರ ಪುಟ್ಟಿ ಸೊಗಸಾಗಿದೆ ಭಯದ ಅನಾವರಣ...

  ಪ್ರತ್ಯುತ್ತರಅಳಿಸಿ
 2. ಭಯ ವಿಸ್ಮೃತಿ..ಧೈರ್ಯ ಸುಕೃತಿ....ಮನದ ಗೊಂದಲಗಳು,ಆತಂಕಗಳು ಹೃದಯಂಗಮವಾಗಿ ಮೂಡಿಬಂದಿದೆ...ಬರೆಯುತ್ತಿರಿ..

  ಹಾಂ ಈ ಕವನದ ಕೆಳಗಿನ ಚಿತ್ರ ಇಷ್ಟವಾಯ್ತು....ಉತ್ತಮ ಆಯ್ಕೆ ಸುಷ್ಮಾ..

  ನಮಸ್ತೆ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಚಿನ್ಮಯ್ ನಿಮ್ಮ ಪ್ರತಿಕ್ರಿಯೆ ನನಗೆ ಸ್ಫೂರ್ತಿ... ಧನ್ಯವಾದಗಳು...

   ಅಳಿಸಿ
 3. ಈ ಭಯಗಳ ಆಳ ಒಲುಮೆಯೇ ಅಲ್ಲವೇ? ಒಲಿದ ಜೀವ ಕಾಡಿಸಿ, ಪೀಡಿಸಬಾರದು ಅಷ್ಟೇ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಜ ಸರ್.. ಒಲುಮೆಯಲ್ಲಿ ಭಯವಿರಬಾರದು..
   ಧನ್ಯವಾದಗಳು...

   ಅಳಿಸಿ
 4. ಅದೇನೋ ಅಂತಾರಲ್ಲ ಹೆಣ್ಮಕ್ಕಳೇ ಸ್ಟ್ರಾಂಗು ಅಂತ
  ಖರೆ ಅದರಿ ಉತ್ತಮ ಕವಿತೆ

  ಪ್ರತ್ಯುತ್ತರಅಳಿಸಿ
 5. ಹೌದು ನನಗೂ ಭಯವಾಗುತ್ತಿದೆ......ಸುಂದರ ಕವನ....

  ಪ್ರತ್ಯುತ್ತರಅಳಿಸಿ
 6. ಧನ್ಯವಾದಗಳು ಉಮೇಶ್ ಸರ್ & ಅಶೋಕ್ ಸರ್...

  ಪ್ರತ್ಯುತ್ತರಅಳಿಸಿ