ಡಿಸೆಂಬರ್ 7, 2012

ಹನಿ ಹನಿ ಇಬ್ಬನಿ..

1. ಅಂದು
ಗೆಜ್ಜೆ ಸದ್ದಿನ ದಾರೀಲಿ
ಹೆಜ್ಜೆ ಇಟ್ಟು ಬಂದವನು
ಇಂದು
ಸಪ್ತಪದಿಯ ಹೆಜ್ಜೆಗೆ 
ಗೆಜ್ಜೆಯ ಸದ್ದಾದ...! 


 2. ಅಕ್ಷರಗಳನ್ನೆಲ್ಲ
ಹನಿಯಾಗಿಸುತ್ತಿದ್ದವಳು
ಇಂದೇಕೋ
ತನ್ನ ಕಣ್ಣ ಹನಿಗಳ ಮುಂದೆ
ಮೌನಿಯಾಗಿದ್ದಾಳೆ.

3. ಕೊತಕೊತ ಕುದಿವ
ಒಡಲ ನೆತ್ತರಿಗೆ
ಒಂದು ತೊಟ್ಟು
ನಿನ್ನ ಪ್ರೇಮ ಜಲ ನೀಡು
ಇಂಗಿ ಬಿಡಲಿ
ಅದರ ಪ್ರೇಮದಾಹ..!


4. ಮನಸು ಮತ್ತು ಕನಸು
ಎರಡು ಒಂದೇ ಎಂಬ
ನನ್ನ ಮೊಂಡು ವಾದಕ್ಕೆ
ಕಾರಣ

ಎರಡರಲ್ಲೂ ನೀನೇ ಇರುವುದು..


5. ಚಳಿಯೆಂದು
ಮುದುಡಬೇಡ
ನನ್ನ ಕನಸುಗಳ
ಸುಟ್ಟದರೂ ನೀ
ಬೆಚ್ಚಗಿರು...!

6. ಸಂತಸದ ಚಿಲುಮೆಗೆ
ಈ ಮಳೆಯೇ ಆಗಬೇಕೆಂದೇನಿಲ್ಲ
ನನಗೆ ನೀನೆಯಾದರೂ

ಸಾಕಾಗುತ್ತದೆ..

7. ಒಡಲ ಪ್ರೀತಿಯು
ಹೊರಬಾರದಂತೆ
ಅದುಮದುಮಿ
ಇಟ್ಟುಕೊಂಡೆ
ಅದು ಉಸಿರುಗಟ್ಟಿ
ಸತ್ತುಹೋಯಿತು...!


8. ನೀ ಸಿಕ್ಕಿದಿಯೆಂಬ ಭ್ರಮೆಯಲ್ಲಿ
ಮನಸ್ಸು ಗಾಳಿಪಟವಾಗಿತ್ತು
ಭ್ರಮೆಯೆಂದು ತಿಳಿದಾಗ
ಪಟದ ಸೂತ್ರ ಹರಿದಿತ್ತು.


9. ನನ್ನ ಭಾವಗಳವು
ಒಳದಬ್ಬಿ ಪಟ್ಟಾಗಿ
ಕೂರಿಸಿದ್ದೇನೆ
ಅಡ್ಡಿ ಮಾಡಬೇಡ
ನಿನ್ನ ಸುಟ್ಟಾವು..!

10. ಕನಸುಗಳು ಆವಿಯಾಗಿ
ಬಾನಂಗಳಲಿ ಹೆಪ್ಪುಗಟ್ಟಿತ್ತು
ಕೈಗೆಟುಕದಂತೆ
ನೀ ಬಂದೆ
ನನ್ನೊಳಗೆ ಈಗ
ಕರಗಿದ ಮೋಡಗಳ ಸೋನೆಮಳೆ.20 ಕಾಮೆಂಟ್‌ಗಳು:

 1. ಚಂದದ ಸಾಲುಗಳು..,ಒಂದಕ್ಕಿಂತ ಒಂದು ಸೂಪರಾಗಿದೆ ಸುಷ್ಮಾ...,ಮನಸು ಮತ್ತು ಕನಸಲ್ಲಿ ಇರುವ 'ಅವನು' ಆದಷ್ಟು ಬೇಗ ಸಿಗಲಿ...:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಸತೀಶ್ ಅವರೇ..
   ಸದ್ಯಕ್ಕೆ ಕನಸು ಮತ್ತು ಮನಸು ಖಾಲಿ ಖಾಲಿ... ;)

   ಅಳಿಸಿ
 2. ಹಾದಿಯಲ್ಲಿ ಬರುವಾಗ ಸಿಕ್ಕ ಸಪ್ತಪದಿಯ ಸಾಲುಗಳಲ್ಲಿ ಕಂಡೆ ಅಕ್ಷರದ ಹನಿಗಳು ನೀಗಿಬಿಡುವ ದಾಹವನ್ನ..ಆ ನೀರಿನ ದಾಹದ ಮನಸಲ್ಲಿ ಮೂಡಿಬಂದ ಕನಸು ಚಳಿಯೆಂದಾಗ ಒಡಲಾಳದಲ್ಲಿ ಅವಿತಿದ್ದ ಅಕ್ಷರಗಳು ಗಾಳಿಪಟವಾಗಿ...ಮೋಡವಾಗಿ ಮುಸಲ ಧಾರೆಯಾಗಿ ಸುರಿಯಿತು ಸುಂದರ ಕವಿತೆಗಳ ಗೊಂಚಲು...ಸುಂದರವಾಗಿದೆ ಪಿ.ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಪ್ರತಿಕ್ರಿಯೆಯೇ ನಮಗೆ ಸ್ಫೂರ್ತಿ..
   ಧನ್ಯವಾದಗಳು ಅಣ್ಣಯ್ಯ..

   ಅಳಿಸಿ
 3. ಈ ಹತ್ತು ಹನಿಗಳ ಒಡಲಲ್ಲೂ ನಿಮ್ಮ ಗ್ರಹಿಕೆಯ ಆಲ ಸ್ಪಷ್ಟವಾಗುತ್ತದೆ.

  ಮುಖ್ಯವಾಗಿ ೭ನೇ ಹನಿಯಲ್ಲಿ ಬರುವ ಅದುಮಿಡುವ ಪ್ರಕ್ರಿಯ ನಮ್ಮನ್ನು ಮುಕ್ಕಾಲು ಹಾಳು ಮಾಡುವ ಕ್ರಮ.

  ಉತ್ತಮ ಹನಿಗಳ ಸಂಚಿಕೆಯಿದು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಮಸ್ತೆ ಬದರಿ ಸರ್..
   ಪ್ರತಿ ಬಾರಿಯೂ ಪ್ರತಿಕ್ರಿಯಿಸಿ ಸ್ಫೂರ್ತಿ ತುಂಬುತ್ತಿರಿ....ಧನ್ಯವಾದಗಳು...

   ಅಳಿಸಿ
 4. ಎಲ್ಲಾ ಹನಿಗಳು ಸುಂದರ.....

  ನೀ ಸಿಕ್ಕಿದಿಯೆಂಬ ಭ್ರಮೆಯಲ್ಲಿ
  ಮನಸ್ಸು ಗಾಳಿಪಟವಾಗಿತ್ತು
  ಭ್ರಮೆಯೆಂದು ತಿಳಿದಾಗ
  ಪಟದ ಸೂತ್ರ ಹರಿದಿತ್ತು.

  ಇದು ಜಾಸ್ತಿ ಇಷ್ಟ ಆಯಿತು......ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ಇದು ಬರೀ ಹನಿ ಹನಿ ಇಬ್ಬನಿಯಲ್ಲ, ಇವೆಲ್ಲ ಮುತ್ತಿನ ಹನಿಗಳು. ತುಂಬಾ ಹಿಡಿಸಿತು. ಶುಭವಾಗಲಿ.

  ಪ್ರತ್ಯುತ್ತರಅಳಿಸಿ