ಜನವರಿ 4, 2013

ಹನಿ ಹನಿ ಇಬ್ಬನಿ..

1. ಆತ್ಮ ಸಂತೋಷಕ್ಕೆ
ಕೊನೆಯ ಪ್ರಯತ್ನ
ಇಲ್ಲದೆ ಇರುವುದನ್ನು
ಇದೆ ಅಂದುಕೊಳ್ಳುವುದು..!!


2. ಬದುಕಿನ ಹಾದಿಲಿ
ಕನಸು ತುಂಬಿದವ ನೀನು
ನೀನೆ ಇಲ್ಲವಾದರೆ
ಖಾಲಿ ಕನಸುಗಳೊಂದಿಗೆ
ಹೇಗೆ ಬದುಕಲಿ ನಾನು?


3. ಮಿಜಿಮಿಜಿಗುಟ್ಟುವ
ಮನಸ್ಸಿಗೆ
ಅಂದುಕೊಂಡಿದ್ದೆಲ್ಲ
ನಿನಗೆ
ದಾಟಿಸಲಾಗದ
ಗಲಿಬಿಲಿ 


4. ನಿನ್ನೆದೆಯ ಬೆಂಕಿ
ಕಾಣಿಸುವವರೆಗೂ
ವಿರಹದುರಿಯಲ್ಲಿ
ಬೆಂದಿದ್ದು ನಾನು ಮಾತ್ರ
ಎಂದುಕೊಂಡಿದ್ದೆ.

5. ಭೋರ್ಗರೆದು ಧುಮ್ಮಿಕ್ಕಿ
ಹರಿಯುವ ತನ್ನೊಡಲ
ಜ್ವಾಲಾ ಪ್ರವಾಹದಲ್ಲಿ
ತಾನೇ ಕೊಚ್ಚಿ ಹೋದವಳು..!


6. ನೋವುಗಳ ದಾಹವಿನ್ನೂ
ತೀರಿಲ್ಲವಂತೆ..
ನನ್ನ ಪೂರ್ತಿಯಾಗಿ
ಮೊಗೆಮೊಗೆದು
ತಿನ್ನದೇ ಬಿಡುವುದಿಲ್ಲವಂತೆ..!


7 . ಹಣೆಯ ಬಿಂದಿಯ ಮೇಲೆ
ವ್ಯಾಮೋಹವಿರಲಿಲ್ಲ ನನಗೆ
ಆದರೂ
ನೀ ಹಣೆಗಿಟ್ಟ ಸಿಂಧೂರ
ಯಾಕೆ ಈ ಪರಿ
ಮನದೊಳಗೇ ಕೂತು
ಕಾಡುತ್ತಿದೆ ಹುಡುಗಾ..?!

  

8. ನೀನು
ಮನದ ಬಾಂದಳದಲ್ಲಿ
ಹಗಲು ಪೂರ
ಪ್ರೀತಿ ಕಿರಣ ಸೂಸುವ ರವಿ
ಇರುಳುಗಳಲ್ಲಿ
ಕನಸೆಂಬ ತಾರೆಯ
ನನ್ನೊಳಗೆ ಬಿತ್ತುವ ಶಶಿ.


9. ನಿನ್ನ ಇಂಚಿಂಚಾಗಿ ಕಡಿದು ಕೊಂದರೂ 
ತಣ್ಣಗಾಗುವುದಿಲ್ಲ ಅವಳೊಡಲ ಬೆಂಕಿ
 
ಅವಳ ಅಮಾಯಕ ಕನಸುಗಳನ್ನು
ಅಮಾನುಷವಾಗಿ ಹೊಸಕಿ
ಸಾವಿನ ಕೂಪಕ್ಕೆ ತಳ್ಳಿದ್ದಕ್ಕಿಂತ
ಘೋರವೇನಲ್ಲ ಅದು.. 


10. ನನ್ನೆದೆಯ ಮೇಲೆ ನೀ ಬರೆದ ರಂಗೋಲಿಗೆ
ನಿನ್ನ ಕನಸುಗಳದೇ ಬಣ್ಣ
ಬಿಡಿ ಬಿಡಿಯಾಗಿ ಪಟ್ಟಾಗಿ ನೀ ಕೂರಿಸಿದ ಚುಕ್ಕಿಗಳು
ಒಂದಾಗಿರುವುದೇ ಚೆನ್ನ
ಒಡಮೂಡಿದ ಕನಸುಗಳು ಅಳಿಯಲಾರವೋ..
ಒಡೆಯಾಲಾರವೋ ನನ್ನ ಚಿನ್ನ.. :)
 

16 ಕಾಮೆಂಟ್‌ಗಳು:

 1. ಪ್ರತ್ಯುತ್ತರಗಳು
  1. ಧನ್ಯವಾದಗಳು ಸರ್.. :) :)
   ನಿಮ್ಮ ಪ್ರತಿಕ್ರಿಯೆ ನನಗೆ ಸ್ಫೂರ್ತಿ..

   ಅಳಿಸಿ
 2. ಹಾಯ್ ,
  ಬಹಳ ದಿನಗಳ ನಂತರ ಬಂದು ನೋಡಿದರೆ
  ನಂಗೆ ನಿಮ್ಮ ಬ್ಲಾಗಿನಲ್ಲಿ ಸಿಕ್ಕಿದ್ದು ಹೃದಯ ಸ್ಪರ್ಶಿ
  ಚೆಂದನೆಯ ಕವಿಗಳು. ಅದರಲ್ಲಿ 2 ಮತ್ತು 7 ನೇ ಕವಿತೆಗಳು
  ಇಷ್ಟವಾದವು..!!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹಾಯ್ ಕನಸು..
   ಬಹಳ ದಿನಗಳ ಮೇಲೆ ಬ್ಲಾಗಿನತ್ತ ಬಂದಿದ್ದಿರಿ... ಇಷ್ಟ ಪಟ್ಟಿದ್ದಿರಿ..ಧನ್ಯವಾದಗಳು...
   ಹೀಗೆ ಬರುತ್ತಿರಿ... ಬರೆಯುತ್ತಿರಿ.. (ನಿಮ್ಮ ಬ್ಲಾಗ್ ನಲ್ಲೂ)

   ಅಳಿಸಿ
 3. ಹತ್ತರಲ್ಲಿ ಮುತ್ತು ಆಯ್ದುಕೊಳ್ಳುವ ಕಠಿಣ ಕೆಲಸ ಕೊಟ್ಟರೆ ಹೇಗೆ ಗೆಳತಿ?

  ಸೂಪರ್ರೂ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನಾನು ಅಭಾರಿ..
   ಧನ್ಯವಾದಗಳು ಸರ್...

   ಅಳಿಸಿ
 4. ಚೆನ್ನಾಗಿದೆ ಹನಿಗಳು.
  ೧. ಸೂಸುವ ಆಗಬೇಕು.
  ಅಮಾಯಕ ಕನಸುಗಳು ಏನೋ ಸರಿ ಕಾಣಲಿಲ್ಲ. ಒಳ್ಳೆಯದಾಗಲಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕಿಟ್ಟಣ್ಣ.. ನಿಮ್ಮ ಸಲಹೆ ಸೂಚನೆಗಳು ದಾರಿದೀಪ..
   ಹೀಗೆ ಪ್ರತಿಕ್ರಿಯೆ ನೀಡುತ್ತಿರಿ...

   ಅಳಿಸಿ
 5. ಚೆನಾಗಿದೆ ಕಣೆ ಹನಿ ಹನಿ ಇಬ್ಬನಿ....
  ಹಾಂ ಎಲ್ಲಾದ್ರೂ ಅಲ್ಪ ವಿರಾಮ ಕೊಡಕೆ ಬರತ್ತಾ ನೋಡು :)P...
  ಬರಿತಾ ಇರು..ಓದೊದೊಂದೇ ನಮ್ ಕೆಲ್ಸಾ...
  ನಮಸ್ತೆ :)

  ಪ್ರತ್ಯುತ್ತರಅಳಿಸಿ
 6. ದಶಕಂಠ ರಾವಣ ತನ್ನ ಪ್ರತಿಭೆಯನ್ನು ರುದ್ರವೀಣ ಸೃಷ್ಟಿಯಲ್ಲಿ ಮಾಡಿದ
  ಹಾಗೆಯೇ ನಮ್ಮ ಸುಷ್ಮಾ ಪುಟ್ಟಿ ಹತ್ತು ಭಾವಗಳಲ್ಲಿ ಹೆಣೆದ ಮಾಲೆ ಮೇಘ ಮಾಲೆಯಿಂದ
  ಸುರಿದ ವರ್ಣ ರಹಿತ ಹನಿಗಳಾಗಿ ಮನದಾಳದಲ್ಲಿ ಇಳಿಯುತ್ತಿದೆ.
  ಸೂಪರ್ ಪುಟ್ಟಿ ಒಂದಕ್ಕಿಂತ ಒಂದು ಸೊಗಸು..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಣ್ಣಯ್ಯ ನಿಮ್ಮ ಕಾಮೆಂಟ್ ಓದೋದೇ ಒಂದು ಹಬ್ಬ...
   ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅಭಾರಿ...ಧನ್ಯವಾದಗಳು..

   ಅಳಿಸಿ
 7. ಪುನಃ ಪುನಃ ಓದಬೇಕು ಎಂದೆನಿಸುವ ಹನಿಗವನಗಳು !
  ಹೀಗೆ ಬರಿಯುತ್ತಿರಿ .

  ಪ್ರತ್ಯುತ್ತರಅಳಿಸಿ