ಫೆಬ್ರವರಿ 20, 2013

ಹನಿ ಹನಿ ಇಬ್ಬನಿ..

ನೋವುಗಳೇ
ಅಭ್ಯಾಸವಾಗಿರುವಾಗ
ಸಂತೋಷಗಳು
ನೆಮ್ಮದಿ ಕೊಡಲಾರದು..!


ಮನದ ಬಾಂದಳದಲ್ಲಿ
ಚುಕ್ಕಿ ಚಂದ್ರಮ ನೀನು
ಅಗಣಿತ ತಾರೆಗಳ ಸರಿಸಿ
ಈ ಭುವಿಯನ್ನೇ
ಸುತ್ತುವೆಯೇನು?
 


ಆಸೆ ಪಟ್ಟಾಗ ದಕ್ಕಲ್ಲ
ದಕ್ಕಿದಾಗ
ಆಸೆ ಅದರಲ್ಲಿ ಇರೋಲ್ಲಾ..


ನಿರಾಕರಿಸಲ್ಪಟ್ಟ
ನಿರೀಕ್ಷೆಗಳಿಗೆ
ನಿಲುವುಗಳನ್ನು
ನಲುಗಿಸುವ
ಸಾಮರ್ಥ್ಯವಿದೆ..!!


ಸಂತೋಷಗಳಿಗೆ ಬಾಳಿಕೆ ಕಡಿಮೆ
ಮುರಿದಷ್ಟು ಜೋಡಿಸುವ ಪ್ರಕ್ರಿಯೆ
ಚಾಲ್ತಿಯಲ್ಲಿರುತ್ತದೆ.
ದುಃಖಗಳಿಗೆ ಆಯಸ್ಸು ಗಟ್ಟಿ
ಜೀವನ ಪೂರ್ತಿ ಜೊತೆಯಾಗುತ್ತೆ.


 

25 ಕಾಮೆಂಟ್‌ಗಳು:

 1. ಹನಿ ಮುತ್ತು ರತ್ನಗಳು ..!

  ಪ್ರತ್ಯುತ್ತರಅಳಿಸಿ
 2. ನೋವನ್ನು ಮನದಾಳದ ಚುಕ್ಕಿ ಚಂದ್ರಮನಿಗೆ ಹೇಳಿದಾಗ ಸಿಗುವ ಆಶಾಭಾವ, ನಿರೀಕ್ಷೆಗಳಿಗೆಗಳನ್ನು ಭದ್ರವಾಗಿ ನಿಲ್ಲಿಸುವ ತಾಕತ್ತು ಮೂಡಿಸುತ್ತದೆ..ಮತ್ತು ಅಂತಹ ತಾಕತ್ತಿಗೆ ಸಂತಸದ ಕ್ಷಣಗಳನ್ನು ಪೋಣಿಸಿ ಮಾಲೆಯಾಗಿಸುವ ಶಕ್ತಿ ಬರುತ್ತದೆ.

  ಒಂದೊಂದು ಹನಿಗಳಲ್ಲು ಕಡಲಷ್ಟು ಭಾವ ತುಂಬುವ ನಿನ್ನ ಬರವಣಿಗೆ ತುಂಬಾ ಮುದ ಕೊಡುತ್ತದೆ ಪಿ ಎಸ್. ತುಂಬಾ ಹಗುರಾದ ಪದಗಳನ್ನು ಭಾರವಾದ ಭಾವಗಳಿಗೆ ಜೋಡಿಸುವ ನಿನ್ನ ಕಲಾತ್ಮಕತೆಗೆ ಶರಣು...ಸೊಗಸಾಗಿದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನನ್ನ ನೆಗೆಟಿವ್ ಹನಿಗಳಿಗೆ ಪಾಸಿಟಿವ್ ಕಾಮೆಂಟಿನ ರಸದೌತಣ...
   ಧನ್ಯವಾದಗಳು ಅಣ್ಣಯ್ಯ...

   ಅಳಿಸಿ
 3. ಬರೀತಿರಿ :) :)
  "ಆಸೆ ಪಟ್ಟಾಗ ದಕ್ಕಲ್ಲ
  ದಕ್ಕಿದಾಗ
  ಆಸೆ ಅದರಲ್ಲಿ ಇರೋಲ್ಲಾ.."
  ಇದ್ಯಾಕೋ ಎಲ್ಲ ಸಂದರ್ಭಕ್ಕೂ ಹೊಂದಲ್ಲಾ ಅನಿಸ್ತು...ನೋಡಿ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಚಿನ್ಮಯ್..
   ಅವರವರ ಭಾವಕ್ಕೆ ಅವರವರ ಭಕುತಿಗೆ...
   ಧನ್ಯವಾದಗಳು..

   ಅಳಿಸಿ
 4. as usual soooper darling..!!! especially...
  ಸಂತೋಷಗಳಿಗೆ ಬಾಳಿಕೆ ಕಡಿಮೆ
  ಮುರಿದಷ್ಟು ಜೋಡಿಸುವ ಪ್ರಕ್ರಿಯೆ
  ಚಾಲ್ತಿಯಲ್ಲಿರುತ್ತದೆ.
  ದುಃಖಗಳಿಗೆ ಆಯಸ್ಸು ಗಟ್ಟಿ
  ಜೀವನ ಪೂರ್ತಿ ಜೊತೆಯಾಗುತ್ತೆ.

  ಪ್ರತ್ಯುತ್ತರಅಳಿಸಿ
 5. ಹನಿ ಹನಿಯಲ್ಲೇ ಬದುಕ ಬಿಡಿಸಿಟ್ಟಿದ್ದೀರಾ...
  ಇಷ್ಟವಾಯಿತು...

  ಪ್ರತ್ಯುತ್ತರಅಳಿಸಿ
 6. ತುಂಬ ಚೆನ್ನಾಗಿವೆ ಸುಶೀ...
  ದು:ಖಗಳಿಗೆ ಆಯಸ್ಸು ಜಾಸ್ತಿ, ಜೀವನಪೂತರ್ಿ ಜೊತೆಯಾಗಿರುತ್ತೆ...!! ಸರಿಯಾದ ವಾಕ್ಯ.. ಸಿಕ್ಕಾಪಟ್ಟೆ ಇಷ್ಟಪಟ್ಟೆ.... ಜೈಹೋ...!!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬಹಳ ದಿನಗಳಾದ ಮೇಲೆ ಮೌನರಾಗದ ಅಂಗಳಕ್ಕೆ ಕಾಲಿಟ್ಟಿದ್ದಿರಿ.. ಥ್ಯಾಂಕ್ಸ್ ಅ ಲಾಟ್ ಶಶೀ....
   ನಿಮ್ಮ ಪ್ರೋತ್ಸಾಹ ಜೊತೆಗಿರಲಿ... ಜೈ ಹೋ...

   ಅಳಿಸಿ
 7. "ನಿರಾಕರಿಸಲ್ಪಟ್ಟ
  ನಿರೀಕ್ಷೆಗಳಿಗೆ
  ನಿಲುವುಗಳನ್ನು
  ನಲುಗಿಸುವ
  ಸಾಮರ್ಥ್ಯವಿದೆ..!!"
  ಬಹಳಷ್ಟು ಬಾರಿ ನನ್ನ ನಿಲುಕಿಗೇ ಈ ಭಾವವೂ ಬಂದು ಹೋಗಿದೆ. ಎಲ್ಲವೂ ಚೆನ್ನಾಗಿವೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿ ಬಾರಿಯೂ ಬೆನ್ನು ತಟ್ಟಿ ಪ್ರೋತ್ಸಹಿಸುತ್ತಿರಿ...
   ಧನ್ಯವಾದಗಳು ಸರ್ ...

   ಅಳಿಸಿ
 8. ನೋವುಗಳೇ
  ಅಭ್ಯಾಸವಾಗಿರುವಾಗ
  ಸಂತೋಷಗಳು
  ನೆಮ್ಮದಿ ಕೊಡಲಾರದು..!
  ee kavitheya saalugalu chennagive

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಸರ್ ...
   ಪ್ರೋತ್ಸಾಹ ನಿರಂತರವಾಗಿರಲಿ...

   ಅಳಿಸಿ
 9. ನಿಜ ನೋವುಗಳನ್ನು ನೋಡಿ ನೋಡಿ ಬೇಸತ್ತವರಿಗೆ ಸಂತೋಷದ ಗಳಿಗೆ ಕೂಡ ಸಂತೋಷವನ್ನು ಕೊಡಲಾರದು ...... ಚೆನ್ನಾಗಿದೆ ನಿಮ್ಮ ಚುಟುಕುಗಳು ....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೌದು ಸರ್..
   ನನಗೂ ಹಾಗೆ ಅನಿಸಿತು. ಅದರ ಪರಿಣಾಮವೇ ಈ ಹನಿ...
   ಧನ್ಯವಾದಗಳು ಸರ್...

   ಅಳಿಸಿ