ಮಾರ್ಚ್ 29, 2013

ಹನಿ ಹನಿ ಇಬ್ಬನಿ..

1.ನಿನ್ನೆಲ್ಲವನ್ನೂ
ಕಿವಿ ಬಾಯಿ ಇಲ್ಲದಂತೆ
ಸಹಿಸಿದ್ದೆನೆಂದರೆ
ನೀನು, ನನ್ನ ಅಹಂಗಿಂತ
ಹೆಚ್ಚು ಅಂತಲೇ ಅರ್ಥ. 


2.ಅಮ್ಮನ ಹುಡುಕುವ ಭರದಲ್ಲಿ
ರಾತ್ರಿಗಳೆಲ್ಲಾ ಅಮ್ಮನೇ ಹೇಳಿದ
ಅವನೊಂದಿಗೆ ಕಳೆದಿದ್ದೇನೆ
ಈಗ ಅವನೂ ಮೋಡಗಳೊಂದಿಗಿನ
ಸರಸದಲ್ಲಿ ನನ್ನ ಮರೆದಿದ್ದಾನೆ
ಬಿಟ್ಟು ಹೋದ ಅಮ್ಮನಂತೆಯೇ..!

 
3.ಮತ್ತೆ ನಾನು ನನ್ನೊಳಗನ್ನು 
ಹರವಿಟ್ಟು ಬೆತ್ತಲಾಗುವುದಿಲ್ಲ
ನಿನ್ನ ಬಾಯಲ್ಲಿ ಎಂಜಲಾಗುವುದಕ್ಕಿಂತ
ನನ್ನೊಳಗೆ ಸುಡುವ ಬೆಂಕಿಯಾಗುತ್ತೇನೆ. 


4.ಮಲಗಿದ್ದ ಕನಸುಗಳು
ಇರುಳ ಕತ್ತಲೆಯ ಭಯಕ್ಕೆ
ದಡಕ್ಕನೆ ಎದ್ದು ಬಿಕ್ಕಳಿಸುವಾಗ
ನಾನಿದ್ದೆನೆಂಬಂತೆ
ಮುದ್ದಿಸುವುದು ಮತ್ತದೇ ಇರುಳು.

 

5.ಬದುಕಿನ ಅರ್ಥವನ್ನು
ನಿನ್ನೊಳಗೆ ಹುಡುಕಲು
ಹೊರಟವಳ
ಮನದೊಳಗೆ ಬಿಟ್ಟುಕೊಂಡು
ಬೆಳಕಾಗಬಾರದೇ..?


6.ಒಳಗಿನ ಒಲವ ನಂಟುಗಳು
ಕಳಚಿ ದೂರವಾಗುವಾಗ
ದೂರದ ಸಂಬಂಧಗಳನ್ನು
ಒಪ್ಪಿಕೊಳ್ಳುವ ಧೈರ್ಯ
ನಾ ಮಾಡುವುದಿಲ್ಲ.

 

7.ಹೆಜ್ಜೆಯ ಹಿಂದಿದ್ದ
ನಿನ್ನ ಛಾಯೆಯ ನೆರಳಲ್ಲೇ
ಬದುಕು
ಮಗ್ಗಲು ಬದಲಿಸಿದ್ದು.


8.ತಬ್ಬಲಿಯೊಂದು
ದಾರಿಹೋಕರತ್ತ
ದೀನದೃಷ್ಟಿ ನೆಟ್ಟು ಕುಂತಿತ್ತು
-ಯಾರೊಬ್ಬರಾದ್ದದಾರೂ
ಪ್ರೀತಿ ತನ್ನ ತಬ್ಬಲಿ ಎಂದು.


9.ಹಸಿ ಹಸಿ ಕಿತ್ತು
ತಿನ್ನುವುದಕ್ಕಿಂತ
ಸುಟ್ಟು ತಿನ್ನು
ಆಗ ಅರೆಬರೆ ಜೀವವೂ
ಇರುವುದಿಲ್ಲ.


10.ನರಳಿಸಿ ಮುಖವರಳಿಸಿಕೊಂಡು
ತೃಪ್ತಿ ಪಡುವವರು
ಇದ್ದರಾದರೆ
ನಾನು ನರಳುವಿಕೆಯಲ್ಲೇ
ಅರಳುತ್ತೇನೆ. 



6 ಕಾಮೆಂಟ್‌ಗಳು:

  1. ಎಲ್ಲ ಚುಟುಕುಗಳೂ ಇಷ್ಟವಾದವು! ಹೀಗೆ ನೋವಿನ ಪದಗಳು ಇಷ್ಟವಾದವು ಎನ್ನುವುದು ಎಂಥಾ ಕಷ್ಟ!!!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೋವುಗಳೇ ಹೆಚ್ಚು ಮನ ತಾಕುವುದು ಅಲ್ಲವೇ ಮೇಡಂ..?
      ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ.. :)

      ಅಳಿಸಿ
  2. ಸುಷ್ಮಾ -
    ಮನದೆ ಜಿನುಗುವ ನೋವಿಗೆ ಇಬ್ಬನಿ ಎಂದು ಹೆಸರಿಟ್ಟೆಯಾ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಒಳಗಿನ ದುಃಖವ ಮರೆಮಾಚಲು ನಗುವ ಮೊಗವ ಹೊರುವುದಿಲ್ಲವೇ..?
      ಹಾಗೆಯೇ ಇದು..
      ಧನ್ಯವಾದಗಳು ಶ್ರೀ..

      ಅಳಿಸಿ
  3. ನಿನ್ನ ಬರಹಗಳಿಗೆ ಮಾತುಗಳ ಚೌಕಟ್ಟು ಹಾಕಲು ಸಾಧ್ಯವೇ ಇಲ್ಲ ಸೂಪರ್ ಪಿ ಎಸ್
    ನೋವುಗಳೆಲ್ಲ ನಲಿವಿನ ಹಾದಿಯ ಮೆಟ್ಟಿಲು ತುಳಿಯುವಂತಾದರೆ ಜೀವನದಲ್ಲಿ ಹೂವಿನ ಪರಿಮಳ ಹಾಗೆ ಪಸರಿಸುತ್ತಾ ಇರುತ್ತದೆ. ಮಗ್ಗುಲು ಬದಲಾಯಿಸು ಒಮ್ಮೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಅಣ್ಣಯ್ಯ...
      ನಿಮ್ಮ ಆಶೀರ್ವಾದ ಸದಾ ಇಂತೆಯೇ ಇರಲಿ..

      ಅಳಿಸಿ