ಏಪ್ರಿಲ್ 16, 2013

ಹನಿ ಹನಿ ಇಬ್ಬನಿ..

1.ಯಾಕೆ ಹೀಗೆ..?
ಮೊದಮೊದಲು
ಮನಸುಗಳು
ಮಾತಾಡುತ್ತಿದ್ದವು
ಈಗೀಗ ರೋದಿಸುತ್ತಿವೆ..!

 
2.ನನಗೆ ಗೊತ್ತು
ನೀನು ನಾನಿಲ್ಲದೆಯೂ ಬದುಕಬಲ್ಲೆ
ಆದರೆ
ನಾನಿರುವಾಗ ನನ್ನೊಂದಿಗೇ
ಬದುಕುತ್ತಿಯಲ್ಲಾ
ಅಷ್ಟೇ ನನ್ನ ಬದುಕು ..!

 
3.ನೋವುಗಳಲ್ಲಿ
ನಗುವುದನ್ನು
ರೂಡಿಸಿಕೊಂಡರೆ
ನಾನೂ ನಿತ್ಯಸುಖಿ
-ನಿನ್ನಂತೆ.. !


4.ಭ್ರಮೆಗಳಲ್ಲಿ
ಸುಖವಾಗಿದ್ದವಳಿಗೆ
ವಾಸ್ತವವ
ಪರಿಚಯಿಸುವ
ಜರೂರತ್ತು ನಿನಗೆನಿತ್ತು..?


5.ಒಂಟಿಯಾಗಿರಬೇಕು
ಏಕೆಂದರೆ
ಜಂಟಿಯೊಳಗಿನ ಗಾಢ ಮೌನಕ್ಕಿಂತ
ಒಂಟಿತನದಲ್ಲಿನ ತನ್ಮಯತೆಯ
ಪ್ರೇಮಿ ನಾನು.. !


6.ನಲಿವುಗಳೆಲ್ಲಾ
ನೋವಿನ ಮಡಿಲಿಗೇ
ಜಾರುವಾಗ
ಹೇಗೆ ಬರೆಯಲಿ
ಖುಷಿಯ ನಾಲ್ಕು ಸಾಲು..?


7.ನೀ ಬಿಟ್ಟು ಹೋಗಿದ್ದಕ್ಕೆ
ನಾ ನೊಂದುಕೊಳ್ಳುವುದಿಲ್ಲ
ಕೆಸರಲ್ಲಿ ಕಾಲು ಹೂತು
ಕಳೆದ ಚಪ್ಪಲಿಗಿಂತ
ಉಳಿಸಿಕೊಂಡ ಕಾಲನ್ನು
ಹೆಚ್ಚು ಪ್ರೀತಿಸುವವಳು ನಾನು.


8.ಮರುಳುಗಾಡ ರಣಬಿಸಿಲು
ಝಳಪಿಸಿ ಸುಡುತಿರೆ
ಎದೆಗೆ ಹನಿನೀರು ಬಿಟ್ಟು
ಬದುಕಿಸುವ ಓಯಸಿಸ್
ನಿನಗೆ ನಾ
ಮರುಳಾದೆನಲ್ಲೇ..?

9.
ಒಂದಿಡಿ ದಿನದ ಧಗೆಗೆ
ಕಂಗಾಲಾಗಿದ್ದ ನನಗೆ
ಈ ಸಂಜೆ ತಣ್ಣಗೆ ನೀ ಬಂದು
ವಿರಹದ ಧಗೆಯ
ತಣಿಸುವ ಅರಿವಿರಲಿಲ್ಲ
ಓ ಮಳೆಯೇ..!!


10.ನಿರೀಕ್ಷೆಗಳಿಲ್ಲದೆ
ನಾ ಬದುಕಿಬಿಡಬೇಕೆಂದು
ಹೇಳುವ ನೀನು
ನಾ ಅಂತೆಯೇ ಇರಬೇಕೆಂದು
ನಿರೀಕ್ಷಿಸಬೇಡ.  


14 ಕಾಮೆಂಟ್‌ಗಳು:

 1. ಮಳೆ ಹನಿಗಳಲ್ಲಿ ಕೆಲವೊಂದು ಮಾತ್ರ ಬಾಯಿ ತೆರೆದ ಕಪ್ಪೆ ಚಿಪ್ಪಿನಲ್ಲಿ ಮುತ್ತಾಗುತ್ತೆ ಎಂದು ಕೇಳಿದ್ದೆ. ಇಲ್ಲಿ ಪ್ರತಿಯೊಂದು ಮುತ್ತೆ. ಭಾವಗಳು ತೆರೆದು ನಿಂತಾಗ ಸಿಗುವ ಮುತ್ತೆಲ್ಲ ಸರವಾಗಿ ನಿಲ್ಲುತ್ತದೆ. ಪ್ರತಿಯೊಂದು ಹನಿಯು ಸೂಪರ್. ತುಂಬಾ ಇಷ್ಟವಾದದ್ದು

  "ನೀ ಬಿಟ್ಟು ಹೋಗಿದ್ದಕ್ಕೆ
  ನಾ ನೊಂದುಕೊಳ್ಳುವುದಿಲ್ಲ
  ಕೆಸರಲ್ಲಿ ಕಾಲು ಹೂತು
  ಕಳೆದ ಚಪ್ಪಲಿಗಿಂತ
  ಉಳಿಸಿಕೊಂಡ ಕಾಲನ್ನು
  ಹೆಚ್ಚು ಪ್ರೀತಿಸುವವಳು ನಾನು" (ಮೈನಸ್ X ಮೈನಸ್ = ಪ್ಲಸ್ ಆಗ್ತಾ ಇರುವ ಬೆಳವಣಿಗೆ ಕಾಣುತ್ತಿದೆ)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಂತೂ ಪೊಸಿಟಿವ್ ಆಯ್ತಲ್ಲಾ.. :D
   ಧನ್ಯವಾದಗಳು ಅಣ್ಣಯ್ಯ... ಎಂದಿನಂತೆ ಚಂದದ ಮತ್ತು ಧನಾತ್ಮಕ ಪ್ರತಿಕ್ರಿಯೆಗಾಗಿ..

   ಅಳಿಸಿ
 2. ಚಂದವೇ ನಿನ್ನ ಹನಿಗಳು ಓ ಇಬ್ಬನಿ... :) ....

  ನನಗೆ ಗೊತ್ತು
  ನೀನು ನಾನಿಲ್ಲದೆಯೂ ಬದುಕಬಲ್ಲೆ
  ಆದರೆ
  ನಾನಿರುವಾಗ ನನ್ನೊಂದಿಗೇ
  ಬದುಕುತ್ತಿಯಲ್ಲಾ
  ಅಷ್ಟೇ ನನ್ನ ಬದುಕು ..!

  Just wow... !! ellavoo...

  ಪ್ರತ್ಯುತ್ತರಅಳಿಸಿ
 3. ಮನಸ್ಸಿನಾಳದ ಭಾವ ಮುತ್ತುಗಳನ್ನು ಹನೀಕರಿಸಿದ ಪರಿ ನೋಡಿ ನಾನು ಮೂಕವಿಸ್ಮಿತ .. ಪ್ರತೀ ಹನಿಯೂ ಕಾಡುತ್ತದೆ .. ಕೆಲವೊಂದು ಹನಿ ಮನಸ್ಸಿನಲ್ಲೇ ಜಿನುಗುತ್ತದೆ ...
  ಅಭಿನಂದನೆಗಳು ಸುಶ್ :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕಾಡಿಸಿಕೊಂಡಿದ್ದಕ್ಕೆ ಥಾಂಕ್ಯು ಹುಸ್ಸೈನ್ ಜೀ... :)

   ಅಳಿಸಿ
 4. ಹೇಳಲಿಕ್ಕೇನೂ ಇಲ್ಲ...
  ಹನಿ ಹನಿಯಲ್ಲಿ ಮನವ ಬಿಚ್ಚಿಡುವ ಪರಿಗೆ ಶರಣು...

  ಪ್ರತ್ಯುತ್ತರಅಳಿಸಿ
 5. ಹನಿಯಿ೦ದ ಹನಿಗೆ `HONEY'ಯನೇ ಸವಿದ ಅನುಭವ! ಚಂದದ ಹನಿಗಳು ಸುಷ್ಮಾ:)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಇಷ್ಟೊಂದು ಸಿಹಿಯಾದ ಪ್ರತಿಕ್ರಿಯೆಗೆ ನಾನು ಶರಣು..
   ಧನ್ಯವಾದಗಳು ಮೇಡಂ..

   ಅಳಿಸಿ