ಜೂನ್ 9, 2013

ಹನಿ ಹನಿ ಇಬ್ಬನಿ..

1. ನೀ ಕಾಲ್ಗೆಜ್ಜೆಗೆ ಪೋಣಿಸಿದ
ನಿನ್ನ ಕನಸುಗಳ
ತೊಡಲಾರೆ ಗೆಳೆಯಾ
ಕರಿಮಣಿಗಳಿಗೆ ಜೋಡಿಸಿ
ಕೊರಳಿಗೆ ಕಟ್ಟು
ನಿನ್ನ ಕನಸುಗಳ ಧರಿಸುತ್ತೇನೆ
-ನನ್ನವೆಂಬಂತೆ.


2. 
ನಾ ನಿನ್ನವಳಾಗಿ ಉಳಿದಿಲ್ಲ 

ಏಕೆಂದರೆ.. 
ನೀನಿಟ್ಟ ಚುಕ್ಕಿಗೆ ಅದಿನ್ಯಾರೋ 
ಗೀಟು ಎಳೆದು ಬಣ್ಣ ತುಂಬಿದ್ದಾರೆ 
ನಾನೀಗ ಅವರ ಮನದಂಗಳದ ರಂಗೋಲಿ..!!

3 .ನಾ ಬಂಧಿಯಾಗಿರಲೇ 
ಇಷ್ಟಪಡುತ್ತೇನೆ 
ತೋಳ ಬಂಧಿಯಲ್ಲಿ 
ಇಷ್ಟೊಂದು ಸುಖವಿರುವುದಾದರೆ. 

4. ಬದುಕು ನರಳಿಸುವ 
ಪೆಟ್ಟುಗಳಿಗೆ ಕಣ್ಣೀರಾಗದಿರು 
ಕಣ್ಣಹನಿಗಳಲ್ಲಿ ನಾನಿದ್ದೇನೆ..  
ಜಾರಿಬಿಟ್ಟೇನು ನಿನ್ನ ಒಂಟಿಯಾಗಿಸಿ. 
ಕಣ್ಣೀರ ಕರಗಿಸಿ ಸೆಡ್ಡು ಹೊಡೆದು ನಿಲ್ಲು 
ಉರುಳುತ್ತೇನೆ ಆನಂದಭಾಷ್ಪವಾಗಿ. 

5. ನಿನ್ನೊಳಗಿಂದ ನೀ ನನ್ನ 
ಹೊರ ದಬ್ಬುವವರೆಗೂ
ನಾ ನಿನ್ನ
ಕನಸಿನ ಬಾಗಿಲ
ತಟ್ಟುವುದು ತಪ್ಪುವುದಿಲ್ಲ ಗೆಳೆಯಾ
ಆಚೆ ನೂಕು ಒಮ್ಮೆ
-ನಾ ಮತ್ತೆಳದಂತೆ 

6. ನಮ್ಮಲ್ಲಿ ಬೇಧವಿಲ್ಲ
ನೀ ಮುಂದಡಿಯಿಡುತ್ತಿದ್ದರೆ 
ನಿನ್ನ ಹೆಜ್ಜೆಯ ಅಚ್ಚಿನ ಹಿಂದೆಯೇ 
ಗೆಜ್ಜೆಯ ಸದ್ದು ಸೇರಿಸುವುದು 
ಅಸಮಾನತೆಯಲ್ಲ..!

7. ದುಃಸ್ವಪ್ನಗಳು 
ಇರುಳ ನಿದ್ದೆಯ ಮೇಲೆ 
ಹಾವಳಿಯಿಡುತ್ತಿರೆ.. 
ನಾ ಅಮ್ಮನ  ಮಡಿಲ ಸೇರುತ್ತೇನೆ 
ಅಲ್ಲಿ ಭಯದ ಭೀತಿಯಿಲ್ಲ.  

8. ನೆನಪುಗಳ ಮುರಿದು 
ಕನಸುಗಳ 
ಜೋಡಿಸಬಲ್ಲೆನಾದರೆ 
ನನಗೆ ನೆನಪುಗಳ ಹಂಗಿಲ್ಲ..!

9.ಮನ ಒಣಗಿ ಬಾಯಾರಿದೆ 
ಬಿರುಕೊಡೆದ ನೆಲದಂತೆ 
ದಾಹ ತೀರಿ ಹಸಿಯಾಗಲು 
ಸುರಿಸುವೆಯಾ 
ನಿನ್ನೊಲವ ಸೋನೆಮಳೆ..?

10.ಕನಸುಗಳು ಬೆಂಗವಲಾಗಬೇಕಿತ್ತು 
ದುಃಸ್ವಪ್ನಗಳಾಗಿ 
ಕಣ್ಣ ರೆಪ್ಪೆಗೆ ಜೋತುಬಿದ್ದಿದೆ 
ಮಲಗಗೊಡುವುದಿಲ್ಲ 
ಬಾಳಗೊಡುವುದಿಲ್ಲ...!
 
 
 

18 ಕಾಮೆಂಟ್‌ಗಳು:

 1. ಗೆಳತಿ ಸುಶೀ... `ನಾ ನಿನ್ನವಳಾಗಿ ಉಳಿದಿಲ್ಲ'... ಮನಸ್ಸಿಗೆ ನಾಟಿತು... ನಿನ್ನೊಳಗೆ ಅದೇನೋ ಶಕ್ತಿಯಿದೆ. ಅದು ಇಂಥ ಬರವಣಿಗೆಯ ಮೂಲಕ ಆಗಾಗ ಬೆಳಕಿಗೆ ಬರುತ್ತಿರಲಿ... ಜೈ ಹೋ...!

  ಪ್ರತ್ಯುತ್ತರಅಳಿಸಿ
 2. ನಿಮ್ಮ ಪ್ರೋತ್ಸಾಹಕ್ಕೆ ನಾನು ಅಭಾರಿ... ಧನ್ಯವಾದಗಳು ಶಶೀ... :)

  ಪ್ರತ್ಯುತ್ತರಅಳಿಸಿ
 3. "ಬದುಕು ನರಳಿಸುವ
  ಪೆಟ್ಟುಗಳಿಗೆ ಕಣ್ಣೀರಾಗದಿರು
  ಕಣ್ಣಹನಿಗಳಲ್ಲಿ ನಾನಿದ್ದೇನೆ..
  ಜಾರಿಬಿಟ್ಟೇನು ನಿನ್ನ ಒಂಟಿಯಾಗಿಸಿ.
  ಕಣ್ಣೀರ ಕರಗಿಸಿ ಸೆಡ್ಡು ಹೊಡೆದು ನಿಲ್ಲು
  ಉರುಳುತ್ತೇನೆ ಆನಂದಭಾಷ್ಪವಾಗಿ"


  ತುಂಬಾ ಇಷ್ಟವಾದ ಸಾಲುಗಳು. ದುಃಖವನ್ನು ಸುಖವನ್ನಾಗಿ ಮಾಡಿಕೊಳ್ಳುವ ತವಕ ಈ ಸಾಲುಗಳಲ್ಲಿ ಕಾಣುತ್ತದೆ. ನೊಂದ ಮನಕ್ಕೆ ಪದಗಳು ಬೇಕೋ.. ಪದ್ಯಗಳು ಬೇಕು ಎನ್ನುವ ಗೊಂದಲದಲ್ಲಿದ್ದಾಗ ಪದಗಳು ಇದ್ದರೇ ದುಃಖವನ್ನು ಪಾದದಲ್ಲಿ ಅವಿಸಿ ಮುಂದೆ ಸಾಗಬಹುದು ಎನ್ನುವ ಆಶಯ ಕೊಡುತ್ತದೆ. ಪ್ರತಿಯೊಂದು ಹನಿಯು ಕೊಡುವ ಅರ್ಥಾವೇಶ ಸೂಪರ್. ಎಲ್ಲ ಸಾಲುಗಳು ಸೊಗಸಾಗಿವೆ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸೋಲುಗಳು ಗೆಲುವಿನತ್ತ ಸಾಗಲೇ ಬೇಕು ಅಲ್ವಾ ಅಣ್ಣಯ್ಯ..... ಧನ್ಯವಾದಗಳು ಚಂದನೆಯ ಪ್ರತಿಕ್ರಿಯೆಗೆ...

   ಅಳಿಸಿ
 4. ವಾಹ್! ಅತ್ಯುತ್ತಮ! "ಕಣ್ಣಹನಿಗಳಲ್ಲಿ ನಾನಿದ್ದೇನೆ..
  ಜಾರಿಬಿಟ್ಟೇನು ನಿನ್ನ ಒಂಟಿಯಾಗಿಸಿ" - ತುಂಬಾ ಚೆನ್ನಾಗಿದೆ!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಗೆ ಸಹಸ್ರ ಸಹಸ್ರ ಧನ್ಯವಾದಗಳು... :)

   ಅಳಿಸಿ
 5. ninna hanigalalli kaledu hodenu.. nanna jopana maadiko maharayti...:) pratiyondu muttugalalle henne... Tuuuuuuuuuuuuuuuuuuuuuuuuuuuuuuuuuubbbbbbbbbbbbaaaaaaaaa Ishtavytu gelatiii...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿನ್ನ ಮುಚ್ಚಟೆ ಮಾಡದೆ ಇರುತ್ತೇನೆಯೇ ಗೆಳತಿ..?
   ನಿನ್ನ ಪ್ರೀತಿಯ ಮೆಚ್ಚುಗೆಗೆ ಧನ್ಯವಾದಗಳು...

   ಅಳಿಸಿ
 6. ಬದುಕು ನರಳಿಸುವ
  ಪೆಟ್ಟುಗಳಿಗೆ ಕಣ್ಣೀರಾಗದಿರು
  ಕಣ್ಣಹನಿಗಳಲ್ಲಿ ನಾನಿದ್ದೇನೆ..
  ಜಾರಿಬಿಟ್ಟೇನು ನಿನ್ನ ಒಂಟಿಯಾಗಿಸಿ.
  ಕಣ್ಣೀರ ಕರಗಿಸಿ ಸೆಡ್ಡು ಹೊಡೆದು ನಿಲ್ಲು
  ಉರುಳುತ್ತೇನೆ ಆನಂದಭಾಷ್ಪವಾಗಿ

  ಅದ್ಭುತ ಸಾಲುಗಳು ಸುಶ್ಮಾ... ಹೀಗೆ ಬರೆಯುತ್ತಿರಿ...:)

  ಪ್ರತ್ಯುತ್ತರಅಳಿಸಿ
 7. ಪ್ರತಿಯ ಹನಿಯೂ ಮನ ತಟ್ಟಿತು ...
  ತುಂಬಾ ಇಷ್ಟವಾಗಿ ನಾ ಕಳೆದು ಹೋದೆ...
  ನೆನಪುಗಳ ಹಂಗಿಲ್ಲದ ಆ ಭಾವ ಯಾಕೋ ತುಂಬಾ ಕಾಡ ಹತ್ತಿದೆ ..
  ನೈಸೂ ನೈಸೂ ಪುಟ್ಟಕ್ಕಾ :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀ ಕಾಡಿಸಿಕೊಂಡರೆ ನನ್ನಲ್ಲಿ ಈ ಪುಟ್ಟ ಮನದಲ್ಲೊಂದು ಸಾರ್ಥಕ್ಯದ ಭಾವ ಚಿಗುರೊಡೆಯುತ್ತದೆ.. ಧನ್ಯವಾದಗಳು ತಂಗ್ಯವ್ವಾ... :)

   ಅಳಿಸಿ
 8. ನಾ ನಿನ್ನವಳಾಗಿ ಉಳಿದಿಲ್ಲ

  ಏಕೆಂದರೆ..
  ನೀನಿಟ್ಟ ಚುಕ್ಕಿಗೆ ಅದಿನ್ಯಾರೋ
  ಗೀಟು ಎಳೆದು ಬಣ್ಣ ತುಂಬಿದ್ದಾರೆ
  ನಾನೀಗ ಅವರ ಮನದಂಗಳದ ರಂಗೋಲಿ..!!

  - Thumba arthagarbithavadha saalugalu, eage bareuthiri.....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಸಾರ್ ....
   ಪ್ರೋತ್ಸಾಹ ನಿರಂತರವಾಗಿರಲಿ..

   ಅಳಿಸಿ
 9. ಬೇರೇನು ಹೇಳಲಿ.....!ಒಂದಕಿಂತ ಒಂದು ಸೂಪರ್.......

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ಮಟ್ಟಿಗೆ ಮೆಚ್ಚುಗೆ ಸಿಕ್ಕರೆ, ನನ್ನಲ್ಲಿ ಸಾರ್ಥಕತೆಯ ಭಾವ ಮನೆ ಮಾಡುತ್ತದೆ.. ಧನ್ಯವಾದಗಳು..

   ಅಳಿಸಿ
 10. ಎನೆಲ್ಲ ಎಷ್ಟೆಲ್ಲ ಈ ಪುಟ್ಟ ಪುಟ್ಟ ಹನಿಗಳಲ್ಲಿ...!!!
  ಪುಟ್ಟ ಪುಟ್ಟ ಸಾಲುಗಳು ಕಟ್ಟಿಕೊಡುವ ಬೆಟ್ಟದಂಥ ಭಾವಗಳಿಗೆ ಶರಣು...

  ಪ್ರತ್ಯುತ್ತರಅಳಿಸಿ