ಜೂನ್ 13, 2013

ತಲ್ಲೀನೆ..

ನಾನು ತಲ್ಲೀನೆ
ಬದುಕ ಮಣಿಹಾರ ಪೋಣಿಸುವ ದಾರಿಯಲ್ಲಿ
ಅವರಿವರ ಭಾವಗಳ ಬಣ್ಣ ಬಣ್ಣದ ಮಣಿಗಳ ಜೋಡಿಸುವಲ್ಲಿ
ಸಾವುನೋವುಗಳ ಸಾಲು ಸಾಲೇ ಇಂಚಿಂಚು ಸರಿಸುವಲ್ಲಿ
ಅವಮಾನದೆದೆಗೆ ರತ್ನದ ದೊಡ್ಡ ಪದಕ ಅಂಟಿಸಿ ಮುಚ್ಚಿಸುವಲ್ಲಿ
ಪರಿಪೂರ್ಣ ಮಣಿಹಾರದ ಕನಸಲ್ಲಿ -ನಾನು ತಲ್ಲೀನೆ..!!

ನಾನು ತಲ್ಲೀನೆ
ಅಂಟಿಕೊಂಡ ಗಂಟುಗಳ ಕೊಡವಿಕೊಳ್ಳುವಲ್ಲಿ
ಕಳಚಿಬಿದ್ದ ವಿಶ್ವಾಸದುಡುಪ ತೊಟ್ಟುಕೊಳ್ಳುವಲ್ಲಿ
ಹಸಿದ ತೋಳದ ತೋಳಿಂದ ಬಿಡಿಸಿಕೊಳ್ಳುವಲ್ಲಿ
ಪಸೆ ಆರಿದ ಗಂಟಲಿಗೆ ಹನಿ ನೀರ ಹುಡುಕುವಲ್ಲಿ

ನಾನು ತಲ್ಲೀನೆ
ಬಾಲ್ಯದ ಮಣ್ಣಾಟದ ಕೊಳೆ ತಿಕ್ಕುವಲ್ಲಿ
ಇರುಳು ಸುರಿದ ಭಯಾನಕ ಕನಸುಗಳ ನೆನೆಕೆಯಲ್ಲಿ
ಬಿಡದಂತೆ ಕಾಡುವ ಬದುಕ ಕಾನನದ ಘೋರತೆಯಲ್ಲಿ
ಒಡೆದ ಮಡಕೆಯಲ್ಲಿ ಕಳೆದ ನೆಮ್ಮದಿಯ ಹಪಾಹಪಿಯಲ್ಲಿ
ಮರೆಯಬೇಕಾದ ನೆನಪುಗಳಲ್ಲಿ -ನಾನು ತಲ್ಲೀನೆ ..!!

ನಾನು ತಲ್ಲೀನೆ
ಅವಳ ಸೆರಗ ತುದಿಯಲ್ಲಿ ಅಡಗಿಕೊಳ್ಳುವಲ್ಲಿ
ನಾನುಗಳ ಇಲ್ಲವಾಗಿಸಿ ಅವನಾಗುವಲ್ಲಿ
ಕಿರುಬೆರಳ ತುದಿಯಲ್ಲಿ ಹೆಸರ ಗೀಚುವಲ್ಲಿ
ನೀನುಗಳಲ್ಲಿ ನನ್ನನಿರಿಸುವಲ್ಲಿ
ನನ್ನೊಳು ನಾನು ಬದುಕುವಲ್ಲಿ -ನಾನು ತಲ್ಲೀನೆ ((ಪಂಜುವಿನಲ್ಲಿ ಪ್ರಕಟಿತ ಕವನ... ಪಂಜು ಬಳಗಕ್ಕೆ ವಿಶೇಷವಾಗಿ ನಟರಾಜ್ ಅರ್ಥಾತ್ ಪ್ರೀತಿಯ ನಟಣ್ಣನಿಗೆ ಧನ್ಯವಾದಗಳು
ಪಂಜುವಿನ ಲಿಂಕ್ : http://www.panjumagazine.com/?p=2577  )

22 ಕಾಮೆಂಟ್‌ಗಳು:

 1. ನಾನು ತಲ್ಲೀನೆ
  ಅಂಟಿಕೊಂಡ ಗಂಟುಗಳ ಕೊಡವಿಕೊಳ್ಳುವಲ್ಲಿ
  ಕಳಚಿಬಿದ್ದ ವಿಶ್ವಾಸದುಡುಪ ತೊಟ್ಟುಕೊಳ್ಳುವಲ್ಲಿ
  ಹಸಿದ ತೋಳದ ತೋಳಿಂದ ಬಿಡಿಸಿಕೊಳ್ಳುವಲ್ಲಿ
  ಪಸೆ ಆರಿದ ಗಂಟಲಿಗೆ ಹನಿ ನೀರ ಹುಡುಕುವಲ್ಲಿ

  ಅಬ್ಬಾ !!! ಎಂತೆಂಥಹ ಭಾವಗಳಲ್ಲಿ ತಲ್ಲೀನೆ ಈ ಹುಡುಗಿ....
  ಪ್ರತಿ ಸಾಲಿನಲ್ಲಿಯೂ ತನ್ಮಯತೆಯಿದೆ..... ಅದ್ಭುತ ಸಾಲುಗಳು...

  ತುಂಬಾ ಒಳ್ಳೆಯ ಕವಿತೆ.....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮೆಚ್ಚಿಕೊಂಡಿದಕ್ಕೆ ಧನ್ಯವಾದಗಳು ಕನಸು ಕಂಗಳ ಹುಡುಗ ರಾಘವ್ ಜೀ...

   ಅಳಿಸಿ
 2. ತುಂಬಾ ತುಂಬಾ ಇಷ್ಟವಾಯ್ತು ಈ ಭಾವ ಲಹರಿ ...ಪ್ರತಿಯ ಸಾಲೂ,ಪ್ರತಿ ಪದವೂ ನೀಡೋ ಅರ್ಥ ನಮ್ಮನ್ನೂ ತಲ್ಲೀನವಾಗಿಸುತ್ತೆ.
  ಅಂದಹಾಗೆ..

  ನಾನೂ ತಲ್ಲೀನೇ !
  ನನ್ನದೇ ಭಾವಗಳ ಅಲೆಯಲ್ಲಿ ,
  ಅಲೆಸೋ ನೆನಪುಗಳ ಸಮ್ಮೋಹದಲ್ಲಿ ,
  ಸಮ್ಮೋಹಿಸೋ ಮಳೆಯ ಪ್ರೀತಿಯಲ್ಲಿ,
  ಪ್ರೀತಿಸೋ ನನ್ನವರ ಜೊತೆಯಲ್ಲಿ ,

  ಬರೀತಾ ಇರಿ :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀನೂ ತಲ್ಲೀನೆಯಾಗಿದ್ದು ಖುಷಿಯಾಯಿತು ಮುದ್ದಮ್ಮಾ.. ಧನ್ಯವಾದಗಳು.. :)

   ಅಳಿಸಿ
 3. ನೀನು ಪ್ರವೀಣೆ
  ಭಾವಗಳ ಪದಗಳನ್ನು ಮೌನದಲ್ಲೇ ಹೆಣೆಯುವಲ್ಲಿ
  ಪದಗಳ ಸುತ್ತಾ ವೃತ್ತ ಹಾಕುತ್ತಲೇ ಮಾಲೆಯಾಗಿಸುವಲ್ಲಿ
  ದೋಷವಿರದ ಮಾತುಗಳನ್ನ ವ್ರತ ಮಾಡುತ್ತಾ ಕವನವಾಗಿಸುವಲ್ಲಿ
  ಕನುಸುಗಳನ್ನು ಹೊರಚೆಲ್ಲುವ ಮೌನರಾಗದಲ್ಲಿ
  ನೀನು ಪ್ರವೀಣೆ


  ಸುಂದರವಾಗಿದೆ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತಲ್ಲೀನೆಯನ್ನು ಪ್ರವೀಣೆಯೆಂದು ಹೊಗಳಿದಿರಿ... ಧನ್ಯವಾದಗಳು ಅಣ್ಣಯ್ಯ ..

   ಅಳಿಸಿ
 4. ಓದುತ್ತಾ ನಾನೂ ಅರೆಕ್ಷಣ ತಲ್ಲೀನನಾದೆ... ನಿಜಕ್ಕೂ ಸುಂದರ ಸಾಲುಗಳು... ಜೈಹೋ...ಸುಶೀ...

  ಪ್ರತ್ಯುತ್ತರಅಳಿಸಿ
 5. ಸುಷ್ಮಾ -
  ನನ್ನೊಳು ನಾನು ಬದುಕುವಾಸೆಗಾಗಿ ಎಷ್ಟೆಲ್ಲ ಭಾವಗಳಲಿ, ಪಾತ್ರಗಳಲಿ ಮುಳುಗೇಳಬೇಕಿದೆ ಅಲ್ಲವಾ...
  ಸಾವಿರ ಭಾವಗಳ ಒಂದೆ ಚೌಕಟ್ಟಿನಲ್ಲಿ ಕಟ್ಟಿಟ್ಟ ನಿನ್ನ ಬರಹದ ತಾಕತ್ತಿಗೆ ಶರಣು ಕಣೇ...
  ತುಂಬಾ ಅಂದ್ರೆ ತುಂಬಾನೇ ಇಷ್ಟ ಆಯ್ತು ಕವಿತೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದುಕು ಹಾಗೇನೆ ಅಲ್ವಾ ಶ್ರೀ..ಸಾವಿರಾರು ಭಾವಗಳ ಅಂಗಳ.. ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟವೇ..ನನ್ನ ಸಣ್ಣ ಪ್ರಯತ್ನಕ್ಕೆ ಪ್ರೋತ್ಸಾಹದ ಮಾತನ್ನಾಡಿದ್ದಿರಿ, ಮೆಚ್ಚಿದ್ದಿರಿ.. ಧನ್ಯವಾದಗಳು...

   ಅಳಿಸಿ
 6. ಹೇಯ್ ...

  ತಲ್ಲೀನೆ... ... ಆ ಪದದ ಎಳೆಗೆ ಭಾವಗಳ ಬಣ್ಣ ಬೆರೆಸಿ ಚೆಂದದ ರಂಗೋಲಿ ಹಾಕಿದಂತಿದೆ. ಸಾಲುಗಳೆಲ್ಲ ಇಷ್ಟವಾದವು ...

  ಅಂಟಿಕೊಂಡ ಗಂಟುಗಳ ಕೊಡವಿಕೊಳ್ಳುವಲ್ಲಿ
  ಕಳಚಿಬಿದ್ದ ವಿಶ್ವಾಸದುಡುಪ ತೊಟ್ಟುಕೊಳ್ಳುವಲ್ಲಿ
  ಹಸಿದ ತೋಳದ ತೋಳಿಂದ ಬಿಡಿಸಿಕೊಳ್ಳುವಲ್ಲಿ
  ಪಸೆ ಆರಿದ ಗಂಟಲಿಗೆ ಹನಿ ನೀರ ಹುಡುಕುವಲ್ಲಿ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀನೇ ಹೇಳಿದ ರಂಗೋಲಿಗೆ ನಿನ್ನ ಮಾತಿಂದ ಇನ್ನಷ್ಟು ರಂಗು ಬಂದಿದೆ..
   ಧನ್ಯವಾದಗಳು ಸಂಧ್ಯಾ...

   ಅಳಿಸಿ
 7. ಕವನ ಓದಿ ಬ್ನಾವುಕತೆಗೆ ನಾನೂ ತಲ್ಲೀನನಾದೆ. ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 8. ಹೆಣ್ಣಿನ ಜೀವನದ ವಿವಿಧ ಭಾವಗಳನ್ನ ವಿಧ ವಿಧವಾಗಿ ಚಿತ್ರಿಸಿದ್ದೀರಿ... ಬಹಳ ಇಷ್ಟವಾಯಿತು!

  ಪ್ರತ್ಯುತ್ತರಅಳಿಸಿ
 9. ನಾನು ತಲ್ಲೀನೆ
  ಬಾಲ್ಯದ ಮಣ್ಣಾಟದ ಕೊಳೆ ತಿಕ್ಕುವಲ್ಲಿ
  ಇರುಳು ಸುರಿದ ಭಯಾನಕ ಕನಸುಗಳ ನೆನೆಕೆಯಲ್ಲಿ
  ಬಿಡದಂತೆ ಕಾಡುವ ಬದುಕ ಕಾನನದ ಘೋರತೆಯಲ್ಲಿ
  ಒಡೆದ ಮಡಕೆಯಲ್ಲಿ ಕಳೆದ ನೆಮ್ಮದಿಯ ಹಪಾಹಪಿಯಲ್ಲಿ
  ಮರೆಯಬೇಕಾದ ನೆನಪುಗಳಲ್ಲಿ -ನಾನು ತಲ್ಲೀನೆ ..!!
  :ಈ ಸಾಲುಗಳು ಬೇಡವಿತ್ತು ಅನ್ಸುತ್ತೆ sushmakka

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ತಮ್ಮಯ್ಯ.. ನಿನಗೆ ಯಾಕೆ ಬೇಡವಿತ್ತು ಅಂತ ಅನಿಸಿತು ಅಂತ ಹೇಳಿದರೆ ಅನುಕೂಲ...

   ಅಳಿಸಿ
 10. ತುಂಬಾ ಸಮಯದ ನಂತರ ಪ್ರತಿಕ್ರಿಯಿಸುತ್ತಿದ್ದೇನೆ ಸುಶ್ಮ ಅಕ್ಕಾ ಕ್ಷಮೆ ಇರಲಿ ತಮ್ಮ ತಲ್ಲೀನೆ ಕವಿತೆಯ ಮೋದಲ ಸಾಲುಗಳು ನಿಂತ ನೀರಂತೆ ಶಾಂತವಾಗಿ ಶುರುವಾಗಿದೆ ಆದರೆ ಯಾವಾಗ ಆ ಸಾಲುಗಳನ್ನ ಶುರುಮಾಡಿದ್ದಿರೊ ಆವಾಗ ನಿಂತ ನೀರಿಗೆ ಕಲ್ಲು ಎಸೆದಂತಾಗಿದೆ ಅನ್ನೋದು ನನ್ನ ಅಭಿಪ್ರಾಯ ವಷ್ಟೆ!

  ಪ್ರತ್ಯುತ್ತರಅಳಿಸಿ