ಜುಲೈ 24, 2013

ಹನಿ ಹನಿ ಇಬ್ಬನಿ..

1.ಅವಮಾನ ನಿಂದನೆಗಳಿಗೆ 
ನನ್ನ ಒಡಲಿದು ಜಗ್ಗುವುದಿಲ್ಲ 
ಬಂಡೆಯಿದು
ತನ್ನೊಳಗೆ ಎಲ್ಲಾ ಮುಚ್ಚಿಟ್ಟು 
ಕಠಿಣವಾಗಿದೆ.. !

2.ಬದುಕ ಕತ್ತಲೆಯಲ್ಲಿ 
ನೆರಳೂ ಜೊತೆಯಿರೋಲ್ಲ 
ಎನ್ನುತ್ತಿದ್ದರು 
ನಾ ಇರುತ್ತದೆನ್ನುತ್ತಿದ್ದೆ  
ಈಗ ಅಂವ ನನ್ನ ಜೊತೆಯಿಲ್ಲ . 
ಹಳೆ ಮಾತಿಗೆ
ನಾನೂ ಜೋತುಬಿದ್ದಿದ್ದೇನೆ. 

3.ಹನಿ ಕಡಿಯದಂತೆ 
ಹನಿಯುತ್ತಿದ್ದ ಮಳೆಯಡಿಯಲ್ಲಿ 
ಬಿಕ್ಕುತ್ತಾ ಕೂತಿದ್ದವಳ 
ಕಂಗಳಲ್ಲೂ ಹನಿಗಳಿದ್ದವು. 

4.ಗಂಡ ಚುಚ್ಚಿ ಚುಚ್ಚಿ ಕೊಂದ 
ಅವಳ ಹೃದಯದ 
ಸಾವಿರ ತುಣುಕುಗಳಲ್ಲಿ 
ಅವನ ಗೆಳೆಯನಿದ್ದ!

5.ಪ್ರೀತಿಯಿಲ್ಲದೆ ಬಾಳಿಲ್ಲ 
ಅಂದವಳ 
ಉಸಿರು ಬಿಗಿದ್ದಿದ್ದು 
ಹಸಿವು..!

6.ಬೆಚ್ಚಿ ಬೀಳಿಸುವ 
ಇರುಳ ಕನಸಿನ 
ತೆಕ್ಕೆಯಲ್ಲಿ ನಾನಿದ್ದಾಗ 
ಅಮ್ಮನೆಂಬ ಅವಳು 
ಗಮ್ಯದ ಕನಸ ಬುತ್ತಿ 
ಕಟ್ಟುವುದ ಹೇಳಿ ಕೊಟ್ಟಳು.

7. ವ್ಯರ್ಥ ಪ್ರಯತ್ನವೆಂದರೆ 
ನನ್ನತನವ ಸುಲಿದು 
ನಿನ್ನತನವ ಹೊಲಿದು 
ನಾನು ನೀನೇ ಆಗಿ ಬಿಡಲು 
ಹವಣಿಸುವುದು. 

8.ನನ್ನವ ನನ್ನ ನೆನಪಲ್ಲ 
ಆದರೂ 
ಅಡಿಗಡಿಗೆ 
ನೆನಪಾಗುತ್ತಿದ್ದನಲ್ಲ..?!


9. ನಿನ್ನೆಲ್ಲಾ ಅಕ್ಷರಗಳಲ್ಲಿ 
ನನ್ನನ್ನು ನಾನು ಹುಡುಕಿ ಸೋಲುತ್ತೇನೆ 
ಸೋತು,
ನಿನ್ನ ಕಂಗಳ ದಿಟ್ಟಿಸಿ ಗೆಲ್ಲುತ್ತೇನೆ 
ಯಾಕೆಂದರೆ ಅಲ್ಲಿ ನಾನಿರುತ್ತೇನೆ..!


10. ಬಿಂದಿಯಿಲ್ಲದ
ಬೋಳು ಹಣೆಯೆಂದರೆ
ನನ್ನವನಿಗೆ ಕೆಂಡದಂಥ ಕೋಪ
ನನ್ನಲ್ಲಿ ತಾನು ಸದಾ
ಮಿನುಗಬೇಕಂತೆ ಅವನಿಗೆ. 28 ಕಾಮೆಂಟ್‌ಗಳು:

 1. ಎಲ್ಲಾ ಓದಿ ಸೂಪರ್ ಅನ್ನೋ ಶಬ್ದವೇ ಬಂದಿದ್ದು ...

  ಹನಿ ಕಡಿಯದಂತೆ
  ಹನಿಯುತ್ತಿದ್ದ ಮಳೆಯಡಿಯಲ್ಲಿ
  ಬಿಕ್ಕುತ್ತಾ ಕೂತಿದ್ದವಳ
  ಕಂಗಳಲ್ಲೂ ಹನಿಗಳಿದ್ದವು.

  ಇದನ್ನ ಓದಿ ಯಾಕೋ ಒಲ್ಲದ ಗಂಡನೊಂದಿಗೆ ಬಾಳಲಾರದೆ ಮಕ್ಕಳನ್ನು ಶಾಲೆಗೇ ಬಿಟ್ಟು ಸುರಿವ ಜೋರು ಮಳೆಯಲ್ಲಿ ಶರಾವತಿ ಸೇತುವೆಯ ಬಳಿ ಕುಳಿತು ಬಿಕ್ಕಳಿಸಿದ್ದ ಹೆಣ್ಣೊಬ್ಬಳು ಬೇಡವೆಂದರೂ ನೆನಪಾದಳು ...
  ನನ್ನವ ನನ್ನ ನೆನಪಲ್ಲ
  ಆದರೂ
  ಅಡಿಗಡಿಗೆ
  ನೆನಪಾಗುತ್ತಿದ್ದನಲ್ಲ..?!

  ಪ್ರೀತಿಯ ಬಗೆಗೊಂದು ಪುಟ್ಟ ಕಿರುನಗೆ ಮೂಡುವುದು ... :)

  --

  ಪ್ರತ್ಯುತ್ತರಅಳಿಸಿ
 2. ಪ್ರತಿ ಹನಿಯೂ ಮಳೆಯಲ್ಲಿ ನೆನೆದ ಅನುಭವ ನೀಡುವ೦ತಿದೆ. ಎಲ್ಲಾ ಸಾಲುಗಳು ಇಷ್ಟವಾದವು..:)

  ಪ್ರತ್ಯುತ್ತರಅಳಿಸಿ
 3. ಹತ್ತಕ್ಕೆ ಹತ್ತೂ ವಿಭಿನ್ನ. ಪ್ರತಿ ಹಾನಿಯಲ್ಲೂ ಭಾವತೀವ್ರತೆ ಎದ್ದು ಕಾಣುವ ಅಂಶ.
  "ಕಂಗಳಲ್ಲೂ ಹನಿಗಳಿದ್ದವು"
  " ನಾನು ನೀನೇ ಆಗಿ ಬಿಡಲು
  ಹವಣಿಸುವುದು"
  ಇನ್ನೂ ಹೆಸರಿಸಬಹುದು ಹಲವು...

  ಪ್ರತ್ಯುತ್ತರಅಳಿಸಿ
 4. ವ್ಯರ್ಥ ಪ್ರಯತ್ನವೆಂದರೆ
  ನನ್ನತನವ ಸುಲಿದು
  ನಿನ್ನತನವ ಹೊಲಿದು
  ನಾನು ನೀನೇ ಆಗಿ ಬಿಡಲು
  ಹವಣಿಸುವುದು. Super liked lines

  ಪರ್ವತದ ತುತ್ತ ತುದಿಯಲ್ಲಿ ನಿಂತು ಪ್ರಕೃತಿಯನ್ನು ನೋಡಿದಾಗ ಬರುವ ಮೊದಲ ಪದ ಈ ಎಲ್ಲಾ ಹನಿಗಳನ್ನು ಓದಿದಾಗ ಬಂತು. ಒಂದಕ್ಕಿಂತ ಒಂದು. ಒಂದೊಂದು ಮಳೆಹನಿ ಒಂದೊಂದು ಕಡೆಯಲ್ಲಿ ತೋಯಿಸುವಂತೆ ಪ್ರತಿ ಹನಿಗಳು ಮನಸಿನ ಮೂಲೆ ಮೂಲೆಗೂ ತಾಕುತ್ತದೆ. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಕಾಮೆಂಟ್ ಗೆ ಸಾಟಿಯಿಲ್ಲ ಅಣ್ಣಯ್ಯ.. ಇಂತಹ ಕಾಮೆಂಟ್ ಓದುತ್ತಾ ಕುಣಿಯುತ್ತದೆ ಹರ್ಷದಿಂದ... ಧನ್ಯವಾದಗಳು

   ಅಳಿಸಿ
 5. Balasubrahmanya Nimmolagobba Balu ಒಳ್ಳೆಯ ಕವಿತೆ ಸುಷ್ಮಾ ಕವಿತೆಯ ಮೊದಲ ಪ್ಯಾರ ಮನ ಸೆಳೆಯಿತು ಒಟ್ಟಾರೆ ಕವನ ಚೆನ್ನಾಗಿದೆ .ಅವಮಾನ ನಿಂದನೆಗಳಿಗೆ
  ನನ್ನ ಒಡಲಿದು ಜಗ್ಗುವುದಿಲ್ಲ
  ಬಂಡೆಯಿದು
  ತನ್ನೊಳಗೆ ಎಲ್ಲಾ ಮುಚ್ಚಿಟ್ಟು
  ಕಠಿಣವಾಗಿದೆ.. !

  ಪ್ರತ್ಯುತ್ತರಅಳಿಸಿ
 6. ಪ್ರೀತಿಯಿಲ್ಲದೆ ಬಾಳಿಲ್ಲ
  ಅಂದವಳ
  ಉಸಿರು ಬಿಗಿದ್ದಿದ್ದು
  ಹಸಿವು..!

  ಬಿಂದಿಯಿಲ್ಲದ
  ಬೋಳು ಹಣೆಯೆಂದರೆ
  ನನ್ನವನಿಗೆ ಕೆಂಡದಂಥ ಕೋಪ
  ನನ್ನಲ್ಲಿ ತಾನು ಸದಾ
  ಮಿನುಗಬೇಕಂತೆ ಅವನಿಗೆ.

  ಇವು ತುಂಬಾ ಇಷ್ಟವಾದವು ... :)

  ಪ್ರತ್ಯುತ್ತರಅಳಿಸಿ
 7. ಚಂದದ ಹನಿಗಳು
  ಕುಂಕುಮವನ್ನು ಇಷ್ಟು ಸೊಗಸಾಗಿ ವರ್ಣಿಸಿದವರು ಕಡಿಮೆ

  ಪ್ರತ್ಯುತ್ತರಅಳಿಸಿ
 8. ಹನಿಗಳು ಒ೦ದಕ್ಕಿ೦ತ ಒ೦ದು ಸೊಗಸಾಗಿವೆ. ಅಭಿನ೦ದನೆಗಳು ಸುಷ್ಮಾ, ನನ್ನ ಬ್ಲಾಗ್ ನಲ್ಲೂ ಕೆಲವು ಹನಿಗಳಿವೆ. ಒಮ್ಮೆ ಭೇಟಿ ಕೊಡಿ.

  ಪ್ರತ್ಯುತ್ತರಅಳಿಸಿ
 9. ಹಾಯ್
  ಸುಶ್ಮಾಜಿ
  ನಿಮ್ಮ ಸಣ್ಣ ಸಣ್ಣ ಕವನಗಳು ಮುದ್ದು
  ಮುದ್ದಾಗಿ ಮನ ಸೇಲೆಯುತ್ತವೆ.
  ಅದರಲ್ಲೂ 4 ಮತ್ತು 9 ಂತೂ ಸುಪರ್..!!

  ಪ್ರತ್ಯುತ್ತರಅಳಿಸಿ