ಫೆಬ್ರವರಿ 19, 2014

ಹನಿ ಹನಿ ಇಬ್ಬನಿ..

1. ಗೆಳತಿ ಹೇಳುತ್ತಾಳೆ
ನನ್ನಲ್ಲಿ ಬದಲಾವಣೆಯಾಗಿದೆಯಂತೆ
ಹೌದು!
ಸಹಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ
ಎಂದಿದ್ದೇನೆ.


2. ಸಂಯಮವೆಂದರೆ
 ದೂರ ದೂರ ಓಡಿ
ಹಸಿವಿಲ್ಲ -ಆಗುವುದಿಲ್ಲ ಎನ್ನುವುದಲ್ಲ

ಊಟದ ಮುಂದೆಯೇ ಕೂತು
ತನ್ನ ತಾ ನಿಗ್ರಹಿಸುವುದು.

3. ಒಡಲಲ್ಲಿ ಅತೃಪ್ತಿಯ ಸೆಳಹು
ಅರೆ ತುಂಬಿದ ಹೊಟ್ಟೆಗೆ
ಹೊಳೆದ ಹಸಿವಿನ ಅರ್ಥ!

ಒಡಲೀಗ ತೃಪ್ತ!
ಹಸಿವು ಗೊತ್ತಿಲ್ಲದೇ ಪಡೆದಿದ್ದಕ್ಕೂ
ಗೊತ್ತಾಗಿ ಪಡೆದಿದ್ದಕ್ಕೂ
ವ್ಯತ್ಯಾಸ ಅಜಗಜಾಂತರ!


4. ನಾನೆಂದರೆ ಕತ್ತಲೇ
ಅಂದಿಗೂ.. ಇಂದಿಗೂ ..
ಆದರೆ ..
ನಿನ್ನಯ ಬೆಳಕು
ನನ್ನ ಬದುಕ ಬೆಳಗಿದೆ
ಹೌದು ...!!
ನಾ ನಿನ್ನ ಶಶೀ
ನೀ ನನ್ನ ರವಿ .


5. ಜನ್ಮಕ್ಕಂಟಿಕೊಂಡ 

ಒಂಟಿತನವ 
ಹೃದಯದೊಳಕ್ಕೆ 
ಇಳಿದೆನೆಂದವರೂ ನೀಗಿಸಲಾರರು..!!

6. ನಸುಗತ್ತಲ ಹೆಜ್ಜೆಯ ಜೊತೆ ನೀನಿದ್ದಾಗ
ನಿನ್ನುಸಿರು ನನ್ನೋಳ ಸೇರಿದಾಗ
ವಿರಹದುರಿ ಆರಿದಾಗ
ಮೌನ ಸಂಜೆಗಳೂ ಮಾತನಾಡುತ್ತವೆ..!
7.ಅಮವಾಸ್ಯೆಯ ಕಾರ್ಗತ್ತಲಲ್ಲೂ
ಚಂದಿರ ಇಣುಕಿದ ಕನಸು ಬಿತ್ತಲ್ಲ ?
ಅಂದೇ ......
ನಾ ಹುಡುಗಿಯಾಗಿದ್ದು
ನೀ ನನ್ನ ಹುಡುಗನಾದದ್ದು ....!


8. ಅಮ್ಮನ ಸೆರಗಿಂದ
ಹಾರಿ ಹೋದ ಹಕ್ಕಿ
ರೆಕ್ಕೆ ಮುರಿದಾಗ
ದೊಪ್ಪನೆ ಬಿದ್ದದ್ದು
ಮೂಕ ಪ್ರೀತಿಯ
ಅವಳ ಮಡಿಲಿಗೇ ...!!


9. ಇರುಳ ಓಡಿಸುವೆನೆಂದು
 ಹಚ್ಚಿಟ್ಟ ಹಣತೆ
ಕುಳಿಗಾಳಿಯೊಂದಿಗೆ
ಲೀನವಾಯಿತು..!


10.
ನನಗೆ ಗೊತ್ತು
ಗೆಲ್ಲುವುದಷ್ಟೇ
ಪರಮ ಗುರಿಯಾಗಿದ್ದಾಗ
ಪೂರ್ಣ ಶರಣಾಗತಿ
ಎಂಬ ಸೋಲನ್ನು ಒಪ್ಪಿಕೊಳ್ಳುವುದೂ..!

6 ಕಾಮೆಂಟ್‌ಗಳು:

 1. ಆಹಾ... ಹನಿ ಹನಿ ಇಬ್ಬನಿಯ ಸುರಿಸಿದ್ದೀಯವ್ವ... ಚೆಂದ ಚೆಂದ ಹನಿಗಳು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಥಾಂಕ್ಯು ಅಕ್ಕಯ್ಯ..
   ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

   ಅಳಿಸಿ
 2. ಮನದ ಮೂಲೆ ಮೂಲೆಯಲ್ಲಿರುವ ಭಾವಗಳಿಗೆ ಪೋಷಾಕು ತೊಡಿಸಿ ಪ್ರತಿ ಪದಗಳು ಜೀವಂತಿಗೆ ತುಂಬಿದಾಗ ಪ್ರತಿ ಹನಿಯು ಜೇನಿನ ಹನಿ. ಮನುಷ್ಯನ ತಾಮಸ ಗುಣಗಳು, ಹಸಿವು ಬಾಯಾರಿಕೆಗಳು, ಮನಸ್ಸಿನ ಹಿಂಸೆಗಳು, ಪ್ರೀತಿ ವಿಶ್ವಾಸ ಬೇಡುವ ಮನಗಳು.. ವಾಹ್ ಪ್ರತಿಯೊಂದು ವಿಷಯವನ್ನು ತಾಕಿ, ಅಲ್ಲೊಂದು ಅವಿನಾವ ಭಾವ ಹೊರಡಿಸುವ ಪ್ರತಿ ಸಾಲುಗಳು ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತವೆ. ಅದ್ಭುತ ಕವಿಯತ್ರಿ ನನ್ನ ಮುದ್ದು ಪುಟ್ಟಿಯ ಹೃದಯದಲ್ಲಿ ಕೂತು ಬರೆಸುತ್ತಾ ಇರುವುದು ಸೂಪರ್.. ನಿನ್ನ ಕಲ್ಪನಾ ಶಕ್ತಿ, ಅಮೋಘವಾದ ಪದಗಳ ಮೆರವಣಿಗೆ ಎಲ್ಲವೂ ಸುಂದರ ಅತಿ ಸುಂದರ.

  ಇಷ್ಟವಾದ ಸಾಲುಗಳು :
  "ನನಗೆ ಗೊತ್ತು
  ಗೆಲ್ಲುವುದಷ್ಟೇ
  ಪರಮ ಗುರಿಯಾಗಿದ್ದಾಗ
  ಪೂರ್ಣ ಶರಣಾಗತಿ
  ಎಂಬ ಸೋಲನ್ನು ಒಪ್ಪಿಕೊಳ್ಳುವುದೂ..!"

  ಇಬ್ಬನಿಯ ಮೊದಲ ಕವನ ಬದಲಾವಣೆ ಎಂಬ ಭಾವ ಸೂಚಿಸಿದರೆ.. ಕಡೆಯ ಹನಿ ಬದುಕಲು ಮಾರ್ಗ ಸೂಚಿಸುತ್ತದೆ. ಜೀವನವೆಂದರೆ ಬರಿ ಬದಲಾವಣೆ ಮಾತ್ರವಲ್ಲ ಪರಿಸ್ಥಿತಿಗೆ ಹೊಂದಿಕೊಂಡು ಗುರಿ ಸಾಧಿಸುವ ದಿಟ್ಟ ಹೆಜ್ಜೆ..

  ಸೂಪರ್ ಪಿ ಎಸ್..

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಅಣ್ಣಯ್ಯ.. ನಿಮ್ಮ ಸ್ಪೂರ್ತಿಯ ಟಾನಿಕ್ ಗೆ... :)

   ಅಳಿಸಿ