ಮಾರ್ಚ್ 6, 2014

ಬೆಳಕು ಹರಿವುದು ಬೇಡ.. !

ಬೆಳಕು ಹರಿವುದು ಬೇಡ.. !
ಕತ್ತಲಲ್ಲಿ ಕೂತ ಹೆಣ್ಣು
ಚಡಪಡಿಸುತ್ತಾಳೆ
ಬೆಳಕಿನ ಮುಖವಾಡದಲ್ಲಿ
ಮೈಮೇಲೆ ಹರಿದಾಡುವ
ನೂರು ಕಣ್ಣುಗಳಿಗಿಂತ
ತನ್ನ ತಾನೇ ನೋಡಿಕೊಳ್ಳಲಾಗದ
ಕಾರಿರುಳೇ ಹಿತವೆನಗೆ. 

ಬೆಳಕು ಹರಿವುದು ಬೇಡ..!
ಸೋತ ಹೆಣ್ಣು ಹುಲುಬುತ್ತಾಳೆ
ತಾಳಿ ಭಾಗ್ಯವನ್ನೇ ಗೆಲ್ಲಲಾರದೆ
ಸವತಿಯೊಂದಿಗೆ ಸೆಣಸಾಡಿ
ಸೋತು ಸವೆದ ಬದುಕಿನ ಮುಖವನ್ನು
ತೋರಲಾರದವಳಿಗೆ
ಜಗದ ಬೆಳಕು ಬೇಕಿಲ್ಲವಂತೆ 

ಬೆಳಕು ಹರಿವುದು ಬೇಡ.... !
ಒಂಟಿ ಹೆಣ್ಣು ಬೇಡುತ್ತಾಳೆ
ಕತ್ತಲೆಗೆ ಕಟ್ಟಳೆಯಿಲ್ಲಾ
ಬೆಳಕಿನ ಬಣ್ಣಗಳಿಗೆ
ಬದುಕಿನ ಕತ್ತಲ ನೀಗಿಸೋ ದರ್ದಿಲ್ಲ.
ಇರುಳೆಂದರೆ ಒಂಟಿ ಮನಕ್ಕೆ ಆತ್ಮನ
ಪರಿಚಯವಾಗುವ ಹೊತ್ತು 
ಬೆಳಕು ಹರಿವುದು ಬೇಡ!
 
ಒಂದರ್ಥದ ಬೆಳಕಿನ ಭಯದಲ್ಲಿ
ಅವಳಂಥವರ ಮನ ಚೀರುತ್ತದೆ.
-ಬೆಳಕು ಹರಿವುದು ಬೇಡ!
 

(ಯಾವುದೋ ಬೇಸರಕ್ಕೆ ಕತ್ತಲಿಗೆ ಮುಖ ಮಾಡಿ ಕುಳಿತ ಸಂದರ್ಭದಲ್ಲಿ, ಬೆಳಗಾಗದಿರಲಿ ಎಂಬ ಹುಚ್ಚು ಯೋಚನೆಯಲ್ಲಿ ಮೊಬೈಲ್ ಟೈಪಿಸಿದ ಸಾಲುಗಳು ಇವು ...ಇಷ್ಟವಾದರೂ ಆಗಿಲ್ಲವಾದರೂ ಹೇಳಿ..... )

9 ಕಾಮೆಂಟ್‌ಗಳು:

 1. ಇಷ್ಟವಾಯಿತು ಬರಹ...
  ಬೆಳಕೂ ಇಷ್ಟವಾಗುವಂತಹ ದಿನಗಳು ಬರಲಿ...

  ಪ್ರತ್ಯುತ್ತರಅಳಿಸಿ
 2. ಇರುಳೆಂದರೆ ಒಂಟಿ ಮನಕ್ಕೆ ಆತ್ಮನ ಪರಿಚಯವಾಗುವ ಹೊತ್ತು ಬೆಳಕು ಹರಿವುದು ಬೇಡ!
  ಬೆಳಕಿನ ಬಣ್ಣದಲ್ಲಿ ಬಾಳು ಕತ್ತಲಾದವರ ಕೂಗಿದೆ ಈ ಕವನದಲ್ಲಿ ... ಇಷ್ಟವಾಯ್ತು

  ಹುಸೇನ್ (www.nenapinasanchi.wordpress.com)

  ಪ್ರತ್ಯುತ್ತರಅಳಿಸಿ

 3. "ಕತ್ತಲೆಗೆ ಕಟ್ಟಳೆಯಿಲ್ಲಾ
  ಬೆಳಕಿನ ಬಣ್ಣಗಳಿಗೆ
  ಬದುಕಿನ ಕತ್ತಲ ನೀಗಿಸೋ ದರ್ದಿಲ್ಲ."

  ಕತ್ತಲೆಗೆ ತನ್ನ ರೂಪವನ್ನು ನೋಡಿಕೊಳ್ಳುವ ಮನವಿರೋಲ್ಲ ಕಾರಣ....
  ಕತ್ತಲೆ ತನ್ನ ಹಂಗಿಲ್ಲದ ಕಟ್ಟಳೆಯಲ್ಲೇ ಜೀವಿಸಿಬಿಡುತ್ತದೆ..
  ಪರದೆ ಮೇಲೆ ಕಿರುಚಾಡುವ ಪಾತ್ರಗಳು
  ಕತ್ತಲ ಗರ್ಭವನ್ನು ಸೀಳಿ
  ಪರದೆಯನ್ನು ಹರಿದು ವಾಸ್ತವಕ್ಕೆ ಬಂದಾಗ
  ಅರೆ ಹೌದು ಅಲ್ಲವೇ ಇದು ಜೀವನ ಅನ್ನಿಸುತ್ತದೆ
  ತೆರೆಗಳಿಗೆ ಸಾರ್ಥಕತೆ ದಡಕ್ಕೆ ಬಂದು ಅಪ್ಪಳಿಸಿದಾಗ ಮಾತ್ರವಲ್ಲವೆ ಎಂಬ ಅರಿವಾಗುತ್ತದೆ..

  ಸಮುದ್ರದ ಮಧ್ಯದಲ್ಲಿ ತೆರೆ ಬರುವುದಿಲ್ಲ ಅದು ಅಚಿಗೆ ಬರುವಾಗ ತನ್ನೆಲ್ಲ ಶಕ್ತಿಯನ್ನು ಮೈಗೂಡಿಸಿಕೊಂಡು ಸಮಸ್ಯೆ ಎಂಬ ದಡವನ್ನು ನಡುಗಿಸುತ್ತದೆ..

  ಇಷ್ಟವಾಯಿತು ಪ್ರತಿ ಹನಿಗಳು.. ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
 4. ಕತ್ತಲೆಯ ಹರಿಯುವಿಕೆಯಲ್ಲಿ ಬೆಳಕು ಮರೆಯಾದಂತೆ.....ಮತ್ತೊಮ್ಮೆ ಆ ಕಗ್ಗತ್ತಲು ಸರಿದು ಬೆಳಗಾಗಲೇಬೇಕು.. ಕಾಣದ ಕತ್ತಲಿನ ಮೊಗವು, ಮತ್ತೆ ಬೆಳಕಿನಡೆ ಸಾಗಿಬಿಡುತ್ತದೆ..
  ಚಂದ ಇದೆ ಸುಷ್ಮಕ್ಕ..

  ಪ್ರತ್ಯುತ್ತರಅಳಿಸಿ