ಮಾರ್ಚ್ 13, 2014

ಹನಿ ಹನಿ ಇಬ್ಬನಿ..

1.  ಏಕಾಂತವೆನ್ನುವುದು
ಆತ್ಮದೊಂದಿಗಿನ ಸಾಂಗತ್ಯ
ಅಲ್ಲಿ ಬೆಳಕಿದೆ
ಏಕಾಂಗಿಯೆಂದರೆ
ಇದ್ದೂ ಇಲ್ಲವಾದ ಒಂಟಿತನ
ಸವೆದ ದಾರಿಯಲ್ಲಿ
ಪಡಿ ಮೂಡದ ಹೆಜ್ಜೆಗಳು

2. ನಡು ರಾತ್ರಿಯ ಕತ್ತಲಲ್ಲಿ
ಕದಲದ ಹೆಜ್ಜೆಗಳು
ಎದೆಯೊಳಗೆ ಮಿಂಚು ಹುಳುವಿನ
ಸುಳುಹೂ ಇಲ್ಲ
ದಿಕ್ಕು ತೋಚದವಳಂತೆ ಕುಳಿತು ಬಿಟ್ಟಿದ್ದೇನೆ
ಒಳಗೆ ಕತ್ತಲೆಂದರೆ ಬರೀ ಕತ್ತಲು 


3. ಇಂಥವರೊಂದಿಗೆ ಏಗಲಾರೆ
ಎಂದವರೂ
ನೀಗಲಾರದ ಕೊರತೆಗಳಿಗೆ
ಶರಣಾಗಿದ್ದಾರೆ.
ಏಗುತ್ತಿದ್ದಾರೆ.


4. ಮಗಳಿಗೆ

ಅರ್ಬುದ ರೋಗವೆಂದು
ಕಣ್ಣೀರಿಟ್ಟವ
-ವೈದ್ಯ..!

5.  ಯುದ್ಧವಿಲ್ಲದೆ ಪಂದ್ಯ
ಗೆಲ್ಲುವುದೆಂದರೆ
ಕುಂತಿಯ ಮಕ್ಕಳಿಗೆ
ಪಾಂಡು ಅಪ್ಪನಾದಂತೆ.10 ಕಾಮೆಂಟ್‌ಗಳು:

 1. ಎಲ್ಲಾ ಹನಿಗಳಿಗೂ ಬೇರೆ ಬೇರೆಯದೇ ಅರ್ಥ..ಅದೆಷ್ಟು ಪ್ರೌಢ ಬರಹ ಬರೀತೀರಾ ಅಕ್ಕಾ...
  ಓದುತ್ತಾ ಹೋದಂತೆ ನನ್ನೊಳಗೂ ಒಂದಿಷ್ಟು ದ್ವಂದ್ವಗಳು..
  ಇಷ್ಟವಾದ್ವು ಎಲ್ಲಾ ಹನಿಗಳೂ

  ಪ್ರತ್ಯುತ್ತರಅಳಿಸಿ
 2. ``ಏಕಾಂತವೆನ್ನುವುದು
  ಆತ್ಮದೊಂದಿಗಿನ ಸಾಂಗತ್ಯ
  ಅಲ್ಲಿ ಬೆಳಕಿದೆ....'' ಇಷ್ಟವಾಯಿತು ಸುಶೀ.... ಹೀಗೆ ಬರೀತಾ ಇರು... ಹನಿ ಹನಿ ಸಾಲುಗಳು ಕಚಗುಳಿ ಇಡುವಂತಿದೆ... ಜೈಹೋ :)

  ಪ್ರತ್ಯುತ್ತರಅಳಿಸಿ
 3. ಅಹಾ... ಏಕಾಂತಕ್ಕೆ ಹೊಸ ಭಾಷ್ಯ ಬರೆದಿದ್ದೀಯ ಸುವಿ .. ಸವೆದ ದಾರಿಯಲ್ಲಿನ
  ಪಡಿ ಮೂಡದ ಹೆಜ್ಜೆಗಳು.. ತುಂಬಾ ಚೆನ್ನಾಗಿದೆ ..

  ಪ್ರತ್ಯುತ್ತರಅಳಿಸಿ
 4. ಕತ್ತಲು ತಡವಾಗಿಯಾದರೂ ಮನಕ್ಕೆ ತುಸು ಶಾಂತಿ ತಂದರೆ
  ಒಂಟಿತನ ನಮ್ಮ ತನವನ್ನೇ ಒಂಟಿ ಮಾಡುತ್ತದೆ

  ಪ್ರತಿಯೊಂದು ಹನಿಗಳು ಮೊದಲ ಮಳೆಯ ಆನಂದ ತಂದರೆ.. ಅದರೊಳಗಿನ ಸಿ(ಕ)ಹಿ ಭಾವಗಳು ಮನವನ್ನು ಅಲುಗಾಡಿಸುವುದು ಸಹಜ.

  ಕೆಲವೇ ಪದಗಳ ಜೊತೆಯಲ್ಲಿ ಪುಟಗಟ್ಟಲೆ ಹೇಳಬಹುದಾದ ಸಂದೇಶಗಳನ್ನು ಬರೆಯುವ ನಿನ್ನ ಕೈ ಬೆರಳುಗಳಿಗೆ ನನ್ನ ಸಲಾಂ..

  ಸೂಪರ್ ಇದೆ ಪಿ ಎಸ್..

  ಇಷ್ಟವಾದ ಸಾಲುಗಳು

  "​​ಯುದ್ಧವಿಲ್ಲದೆ ಪಂದ್ಯ
  ಗೆಲ್ಲುವುದೆಂದರೆ
  ಕುಂತಿಯ ಮಕ್ಕಳಿಗೆ
  ಪಾಂಡು ಅಪ್ಪನಾದಂತೆ"

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹನಿಯ ಒಳಾರ್ಥ ಓದುಗನನ್ನು ತಲುಪಿದರೆ ಅದು ಹನಿಯ ಸಾರ್ಥಕ್ಯ..
   ಧನ್ಯವಾದಗಳು ಅಣ್ಣಯ್ಯಾ

   ಅಳಿಸಿ