ಏಪ್ರಿಲ್ 9, 2014

ಹನಿ ಹನಿ ಇಬ್ಬನಿ..

1. ಸಾಲು ಸಾಲು ಸೋಲುಗಳು
ಮಡಿಲೊಳಗೆ ಬಿದ್ದಾಗ
ಬದುಕುವ ಛಲಕ್ಕೆ
ಹುಟ್ಟಿನ ಸಂಭ್ರಮ..!


2. ನೀಳಜಡೆಯ ಹುಡುಗಿಯ
ಕನವರಿಕೆಯಲ್ಲಿ
ಇದ್ದವನಿಗೆ ಸಿಕ್ಕಿದ್ದು
ಮೋಟು ಜಡೆಯ ಬೆಡಗಿ..!


3.
ಮನವಿತ್ತು
ತಿಳಿಕೊಳದಂತೆ
ಕದಡಿದ್ದಾರೆ
ಕಡಲಂತಾಗಿದೆ...!
ಹಂಬಲ: ಮತ್ತೆ ಕೊಳವಾಗಬೇಕು.. ತಿಳಿಯಾಗಬೇಕು.

4. ನಿನ್ನೆತ್ತರ ಮುಟ್ಟುವ
ಹಂಬಲಕ್ಕೆ ಬಿದ್ದು
ತುದಿಗಾಲಲ್ಲಿ ನಿಂತಿದ್ದೇನೆ ಹುಡುಗಾ!
ಏಟುಕಿಬಿಡು ಅರೆಗಳಿಗೆ
ಈ ಕರಗಳಿಗೊಮ್ಮೆ ..!
 
5. ಗಾಢ ಕತ್ತಲು ತಬ್ಬಿಕೊಂಡಿದೆ
ಉಸಿರುಗಟ್ಟಿಸುವ ಆತುರದಲ್ಲಿ.
ಜೀವ ಹೋಗುವ ಮುನ್ನ
ನಿನ್ನನ್ನೊಮ್ಮೆ ನೋಡಬೇಕು
ಹನಿ ಕಿರಣವೇ..!
8 ಕಾಮೆಂಟ್‌ಗಳು:

 1. "ಸಾಲು ಸಾಲು ಸೋಲುಗಳು
  ಮಡಿಲೊಳಗೆ ಬಿದ್ದಾಗ
  ಬದುಕುವ ಛಲಕ್ಕೆ
  ಹುಟ್ಟಿನ ಸಂಭ್ರಮ..!"

  ಜೀವನದ ಉತ್ಸಾಹವನ್ನು ಬಡಿದೆಬ್ಬಿಸಲು ನೆರವಾಗುವ ಹನಿಗಳು. ಸೋಲು ಗೆಲುವಿನ ಸೋಪಾನ ಅನ್ನುತ್ತಾರೆ.. ಇಲ್ಲಿ ಸೋಲು ಗೆಲುವಿಗಷ್ಟೇ ಅಲ್ಲದೆ ಮತ್ತೊಂದು ಛಲದ ಹುಟ್ಟಿಗೆ ನೆರವಾಗುವ ಉತ್ಸಾಹಪೂರಿತ ಪದಗಳು... ಸೂಪರ್ ಪಿ ಎಸ್

  "ನೀಳಜಡೆಯ ಹುಡುಗಿಯ
  ಕನವರಿಕೆಯಲ್ಲಿ
  ಇದ್ದವನಿಗೆ ಸಿಕ್ಕಿದ್ದು
  ಮೋಟು ಜಡೆಯ ಬೆಡಗಿ..!"

  ತಾನೊಂದು ನೆನೆದರೆ.. ಇನ್ನೊಂದು ಕಾಯುತ್ತಿರುತ್ತದೆ ನೆರಳಂತೆ ಎನ್ನುವ ಸಂದೇಶ ಸಾರುತ್ತಿದೆ.. ಎರಡನೇ ಹನಿ

  "ಮನವಿತ್ತು
  ತಿಳಿಕೊಳದಂತೆ
  ಕದಡಿದ್ದಾರೆ
  ಕಡಲಂತಾಗಿದೆ...!
  ಹಂಬಲ: ಮತ್ತೆ ಕೊಳವಾಗಬೇಕು.. ತಿಳಿಯಾಗಬೇಕು"

  ಮನವು ಯಾವಾಗಲೂ ಬಿಳಿಯ ಹಾಳೆಯಂತೆಯೇ ಇರುತ್ತದೆ. ಬರೆದದ್ದು ಉಳಿಯದು.. ಉಳಿದದ್ದು ಮರೆಯಲಾಗದು.. ಕೊಳವಾಗಬೇಕು.... ಕದಡಬೇಕು.. ತಿಳಿಯಾಗಬೇಕು ಇದುವೇ ಜೀವನ.. ಸುಂದರ ಪಿ ಎಸ್

  "ನಿನ್ನೆತ್ತರ ಮುಟ್ಟುವ
  ಹಂಬಲಕ್ಕೆ ಬಿದ್ದು
  ತುದಿಗಾಲಲ್ಲಿ ನಿಂತಿದ್ದೇನೆ ಹುಡುಗಾ!
  ಏಟುಕಿಬಿಡು ಅರೆಗಳಿಗೆ
  ಈ ಕರಗಳಿಗೊಮ್ಮೆ ..!"

  ಛಲ ಒಂದು ನೀರಿನ ಚಿಲುಮೆ ಇದ್ದ ಹಾಗೆ.... ಒಳಗೆ ಅದುಮಿಟ್ಟುಕೊಂಡ ಉಸಿರು ಮೇಲಕ್ಕೆ ಚಿಮ್ಮುವ ರಭಸ ಇದೆ ಅಲ್ಲವೇ ಜೀವನದ ಸೊಬಗು.. ಆಸೆ ತವಕ ತುಂಬಿರುವ ಈ ಪದಗಳು ಮನಸ್ಸೇಳೆಯುತ್ತದೆ

  ಗಾಢ ಕತ್ತಲು ತಬ್ಬಿಕೊಂಡಿದೆ
  ಉಸಿರುಗಟ್ಟಿಸುವ ಆತುರದಲ್ಲಿ.
  ಜೀವ ಹೋಗುವ ಮುನ್ನ
  ನಿನ್ನನ್ನೊಮ್ಮೆ ನೋಡಬೇಕು
  ಹನಿ ಕಿರಣವೇ..!

  ಬೆಳಕು ಬಿದ್ದೆಡೆ ಕತ್ತಲೆಗೆಲ್ಲಿಯ ಜಾಗ.. ಕತ್ತಲೆ ಇದ್ದಕಡೆ ಬೆಳಕಿಗೆ ನುಗ್ಗುವ ಛಲ.. ಇವರೆಡರ ನಡುವೆ ನಡೆಯುವ ಸಮರ ಜೀವನದ ಸಾರ್ಥಕತೆ..

  ಪ್ರತಿ ಹನಿಯು ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ರೀತಿಯ ಉತ್ತೇಜಕ.. ವಿಶ್ಲೇಷಣಾತ್ಮಕ ಪ್ರತಿಕ್ರಿಯೆಗಳು ನಿಜಕ್ಕೂ ಬರಹಗಾರನಿಗೆ ಟಾನಿಕ್ ಗಳು..
   ಧನ್ಯವಾದಗಳು..
   ಸ್ಪೂರ್ತಿಯ ಚಿಲುಮೆ ಹೊಮ್ಮಿಸಿದ್ದಕ್ಕೆ...

   ಅಳಿಸಿ
 2. ವಾಹ್!!
  ಹೀಗಿಷ್ಟು ಹನಿಗಳು ನನ್ನ ಸೋಕಿ ಎದೆಯೊಳಗೆ ಇಳಿದು ಹೋದ ಖುಷಿ ನಂಗಿಲ್ಲಿ..
  ಮುದ್ದಕ್ಕಾ ನೀ ಬರೆವ ಚಂದದ ಭಾವಗಳಿಗೆ ,ಬದುಕ ಪ್ರೀತಿಗಳಿಗೆ ಏನಂತ ಹೇಳಲೇ ನಾನು..

  ಮಾತಿಲ್ಲ...ಚಂದದ ಭಾವವೊಂದ ಹೊತ್ತು ಬಂದಿದ್ದಕ್ಕೆ ಧನ್ಯವಾದ..ತುಂಬಾ ಇಷ್ಟವಾದವು ಹನಿಗಳೆಲ್ಲವೂ

  ಪ್ರತ್ಯುತ್ತರಅಳಿಸಿ
 3. ಎಲ್ಲ ಹನಿಗಳು ತುಂ ಇಷ್ಟವಾದವು.

  Best of best :
  ಹಂಬಲ: ಮತ್ತೆ ಕೊಳವಾಗಬೇಕು..
  ತಿಳಿಯಾಗಬೇಕು.

  ಪ್ರತ್ಯುತ್ತರಅಳಿಸಿ