ಏಪ್ರಿಲ್ 22, 2014

ಹನಿ ಹನಿ ಇಬ್ಬನಿ..

1. ಅವನು ತನ್ನ ಜೀವನ
ತೆರೆದ ಪುಸ್ತಕ ಎನ್ನುತ್ತಿದ್ದ .
ನಾನೋ ಓದು ತಿಳಿಯದ
ಅನಕ್ಷರಸ್ಥೆ ..!

2. ಸದಾ ನನ್ನನ್ಯೂನತೆಗಳಿಂದ
ಕೊರಗುವ ಬಡಿದಾಡುವ
ಅವನನ್ನು ನೆನೆವಾಗ
ದೂರವಿದ್ದು ದೇವರಾಗಿದ್ದ ದಿನಗಳ ನೆನಪು
ಕಣ್ಣಿಂದ ಜಾರುತ್ತದೆ...!
Feeling: ಕೆಲವೊಮ್ಮೆ ಹತ್ತಿರವೂ ಅಂತರ ಸೃಷ್ಟಿಸುತ್ತದೆ

3. ಒಬ್ಬರಿಂದೊಬ್ಬರು ದೂರವಿರುವುದನ್ನು 
ಅಂತರವೆನ್ನುತ್ತಿದ್ದರು
ಜೊತೆಯಿದ್ದೇವೆ  - ಉಸಿರಿಲ್ಲದ ನಾವೆಯಲ್ಲಿ 
ದೂರದ ಅರ್ಥ ಹತ್ತಿರವಾಗಿದೆ!

4. ನನಗೆ ಗಂಡು ಮಕ್ಕಳ ಸ್ನೇಹ 

ಅವನಿಗೆ ಹೆಣ್ಣು ಮಕ್ಕಳದು 
ಅದಕ್ಕೆ ನಮ್ಮಿಬ್ಬರದು 
'ಮೇಡ್ ಫಾರ್ ಈಚ್ ಅದರ್' ಜೋಡಿ 
ಅವನು ಹೆಣ್ಮನ ಬಲ್ಲ 
ನಾ ಗಂಡು ಹೃದಯ ಬಲ್ಲೆ ..!

5. ಬದುಕಿನ ಕರಾಳ ಕಪ್ಪನ್ನು 
ಅಡಗಿಸಬೇಕೆಂದರೆ 
ಮೇಕಪ್ ಅನಿವಾರ್ಯ 
ಎಂದಳಾಕೆ...!!


4 ಕಾಮೆಂಟ್‌ಗಳು:

 1. ಎಲ್ಲಿಂದ ಹುಡುಕುತ್ತೀಯ ಈ ಭಾವ ತುಂಬಿದ ಪದಗಳನ್ನು..
  ಅನಕ್ಷರಸ್ತೆ ಎಂದು ಹೇಳುತ್ತಲೇ ಭಾವ ಅರಿತುಕೊಳ್ಳುವ ತವಕ..
  ದೇವರನ್ನು ಅರಿಯುವ ಕಾಯಕದಲ್ಲಿ ಧನ್ಯತಾ ಭಾವ..
  ಹತ್ತಿರವಾದ ದೂರದ ಉಸಿರು.. ದೂರವಾದ ಹತ್ತಿರದ ಉಸಿರು..
  ಜೊತೆ ಜೊತೆಯಲ್ಲಿ ಬದುಕ ಬೇಕಿಲ್ಲಿ ಎನ್ನುವ ಸಂದೇಶ
  ಮುಖವಾದ ಇರಬೇಕು ಮನುಜನಿಗೆ.. ,ಮುಖವಾದ ಧರಿಸಲೇಬೇಕು ಬದುಕಿಗೆ ಎನ್ನುವ ತಿಳಿ ಸಂದೇಶ..

  ಸೂಪರ್ ಪಿ ಎಸ್ ಒಂದೊಕ್ಕೊಂದು ಬೇಲೂರಿನ ಶಿಲಾಬಾಲಿಕೆಗಳ ಹಾಗೆ ಸುಂದರ ಸುಮಧುರ ಮಧುರ ಮಧುರಾ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಭಾವಗಳೇ ಬದುಕಿನ ಉಸಿರಲ್ಲವೇ ಅಣ್ಣಯ್ಯಾ

   ಧನ್ಯವಾದಗಳು

   ಅಳಿಸಿ
 2. ಸುಷ್ಮಾ -
  ಹನಿ ಇಬ್ಬನಿಯಲ್ಲಿ ಸೂರ್ಯ ಕಿರಣದ ಸಾವಿರ ಸೆಳಕುಗಳು...
  ತುಂಬಾನೇ ಇಷ್ಟವಾಯಿತು...
  ಬದುಕ ಕರಾಳ ಕಪ್ಪನ್ನು ಅಡಗಿಸಲು ಮೇಕಪ್‌ನ ಕಾಡಿಗೆ ಬಳಿದುಕೊಳ್ಳೋ ಬದಲು ಒಂಚೂರು ಅರಿವಿನ ಬೆಳಕಿಗೆ ಮುಖವೊಡ್ಡಿದರೆ ಚಂದವೇನೋ...
  ಮುಖವಾಡದ ಬಣ್ಣಗಳು ಆಕರ್ಷಕ ಆದರೆ ಮುಖವಾಡ ಅನಿವಾರ್ಯ ಅಂತನ್ನಿಸಲ್ಲ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದುಕಿನ ಬಣ್ಣಗಳು ಹನಿಗಳಾಗಿವೆ ಶ್ರೀ..

   ಧನ್ಯವಾದ..

   ಅಳಿಸಿ