ಏಪ್ರಿಲ್ 26, 2014

ಹನಿ ಹನಿ ಇಬ್ಬನಿ..

1. ಹುಡುಗಿಯರು ಹಾಗೆಲ್ಲಾ
ಒಲಿಯುವುದಿಲ್ಲಾ..
ನೀವಾಗೇ ಸಿಕ್ಕುಬಿಡಿ ಹೂವುಗಳೇ
ಅವರೇ ದಕ್ಕಿಸಿಕೊಳ್ಳುವ ಮುನ್ನ
ಕೊನೆಪಕ್ಷ ಉಸಿರುಳಿದಿರುತ್ತದೆ
ಸೇಡು ತೀರಿಸಲೋಸುಗವಾದರೂ..!

 
2. ಅಮ್ಮಾ...!
ಪ್ರೀತಿಯ ಒಡಲು 
ಮಮತೆಯ ಕಡಲು

3. ಸೋತು ತಳ ಹಿಡಿದಾಗಿದೆ
ಇನ್ನೇನಾದರೂ ಘಟಿಸಿದರೆ
ಅದು ಗೆಲುವೇ
ಅಂದುಕೊಳ್ಳುವಾಗ
ಪಾತಾಳದ ಅರಿವಿರಲಿಲ್ಲ ನನಗೆ!
 
4. ಅಪ್ಪ ಜಾಲಿ ಮನುಷ್ಯ
-ಕುಡಿದಾಗ
ಪುಟ್ಟ ಮಣ್ಣಿನ ಮಡಕೆ ಒಡೆದು
ಕೂಡಿಸಿಟ್ಟ ಚಿಲ್ಲರೆ ಕೊಟ್ಟಳು
ಅಪ್ಪ ನಕ್ಕ.. ಮಗಳೂ ..!


5.
ಒಳಗೆ ಸುಡುವ ಬೆಂಕಿಗೆ 
ಕಣ್ಣಿನ ನೀರು ಸುರಿದು 
ಒಡಲ ಬೇಗುದಿಯ ನೀಗಿಸಲು 
ಪ್ರಯತ್ನಿಸುತ್ತದೆ.. 
ಹೌದು.. ಕಣ್ಣೀರಿಗೆ ಕರುಣೆಯಿದೆ !
 
 

10 ಕಾಮೆಂಟ್‌ಗಳು:

 1. ತುಂಬಾ ಚೆನ್ನಾಗಿದೆ ಹನಿಗಳು !
  ಎರಡನೆಯದು ತುಂಬಾ ಹಿಡಿಸಿತು
  ಮತ್ತಷ್ಟು ಬರೆದು ಬಿಡಿ ಜೀ !

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರಕಾಶ್ ಜೀ
   ನನ್ನ ಮೌನರಾಗಕ್ಕೆ ಸ್ವಾಗತ ನಿಮಗೆ

   ಧನ್ಯವಾದಗಳು
   ಓದಿ ಹರಸುತ್ತಿರಿ :)

   ಅಳಿಸಿ
 2. ಸಂಜೀವಿನಿ ಮೂಲಿಕೆ ತರಲು ತರಲು ಹೋದಾಗ.. ಹನುಮನಿಗೆ ಯಾವ ಸಸ್ಯ, ಯಾವ ಮೂಲಿಕೆ ಬೇಕು ಎನ್ನುವ ಗೊಂದಲ ಶುರುವಾಯಿತು..ಇಡಿ ಪರ್ವತವನ್ನೇ ಹೊತ್ತು ತಂದ.. ಪ್ರತಿ ಹನಿಯ ಒಡಲಾಳದಿಂದ ಹೊರಹೊಮ್ಮುವ ಸಾರಾಂಶ ಬರಿ ಪದಗಳಲ್ಲಿ ಮಾತ್ರ ಅಡಗಿಲ್ಲ.. ಪದಗಳ ಮಧ್ಯೆಯೂ ಸುಳಿದಾಡುತ್ತಿದೆ..

  ಪ್ರತಿ ಹನಿ ಸೂಪರ್ ಸೂಪರ್..

  "ಒಳಗೆ ಸುಡುವ ಬೆಂಕಿಗೆ
  ಕಣ್ಣಿನ ನೀರು ಸುರಿದು
  ಒಡಲ ಬೇಗುದಿಯ ನೀಗಿಸಲು
  ಪ್ರಯತ್ನಿಸುತ್ತದೆ..
  ಹೌದು.. ಕಣ್ಣೀರಿಗೆ ಕರುಣೆಯಿದೆ !"

  ಸೂಪರ್ ಲೈನ್ಸ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಶ್ರೀಕಾಂತ್ ಅಣ್ಣಯ್ಯಾ..
   ನಿಮ್ಮ ಮೆಚ್ಚುಗೆಗೆ ನಾ ಋಣಿ..

   ಧನ್ಯವಾದಗಳು

   ಅಳಿಸಿ
 3. ಹನಿಯೊಳಗಿನ ಭಾವಾರ್ಥ ಸುಂದರವಾಗಿದೆ,,,
  --ಜೀ ಕೇ ನವೀನ್

  ಪ್ರತ್ಯುತ್ತರಅಳಿಸಿ