ಮೇ 28, 2014

ಹನಿ ಹನಿ ಇಬ್ಬನಿ...

1. ಸಂತೋಷವಾಗಿ ಇರುವುದುದಕ್ಕೂ
ಇದ್ದ ಹಾಗಿರುವುದಕ್ಕೂ ವ್ಯತ್ಯಾಸವಿದೆ
ನಗುವುದಕ್ಕೂ
ನಕ್ಕ ಹಾಗೆ ಇರುವುದಕ್ಕೂ ಇದ್ದಂತೆ..!


2.
ಬಾಯ್ತುಂಬಾ ನಗುವ
ನಗೆಯಲ್ಲಿ
ಮನದ ಗೈರು ಹಾಜರಿ


3.
ನನ್ನ ವಿರುದ್ಧ ಜಗತ್ತೇ
ತಿರುಗಿ ನಿಂತಿದೆ
ಜಗತ್ತಿನ ವಿರುದ್ಧ
ಅವ ಸೆಟೆದು ನಿಂತಿದ್ದಾನೆ.. !


4. ಭಾವಗಳು ಬದುಕಿನ
ಉಸಿರೆಂದೆ
ಹೊಟ್ಟೆ ಚುರ್ ಎಂದಿತು!

5. ಬದುಕಿನ ಬಣ್ಣಗಳೇ
ಈ ಹನಿಗಳು ಎಂದೇ..
ಹನಿ ಕಣ್ಣಿನದ್ದಾ..? ಇಬ್ಬನಿಯದ್ದಾ..?
ಪ್ರಶ್ನಿಸಿದ..!

6.ಆತನಿಗೆ ಮದುವೆಯಾಗಿರಲಿಲ್ಲ
ಓಹ್..! ಬ್ರಹ್ಮಚಾರಿಯೋ
ಎಂದೆ..
ಅಲ್ಲಾ...
ಅವಿವಾಹಿತನೆಂದ..!


7.
ಕಣ್ಣು ಹೊಡೆದು
ನಿನ್ನಾಳಕ್ಕೆ ಇಳಿಯಬೇಕೆಂದವನಿಗೆ
ಕಣ್ಣೀನಾಳಕ್ಕಾ ಎಂದು ಕೇಳಿ
ರೆಪ್ಪೆ ಬಡಿದೆ ....!

 
8. ಅವಳ ಕುರಿತು
ಹೊಟ್ಟೆಯೊಳಗೆ
ತಣ್ಣನೆಯ ಕಿಚ್ಚು ಅಂದೇ
ಐಸ್ ಇಡಲಾ ಅಂದ..!

 
9. ಮಳೆಹನಿಯಂತಹ
ತಂಪು ಇನಿಯಾ
ಒಂದು ಹೆಜ್ಜೆ ಹಿಂದೆ ಸರಿದಿದ್ದಾನೆ...!
ಇಳೆಯ ಒಡಲಲ್ಲಿ
ಘೋರ ಬಿಸಿಲ ಬಿರಿಕಿನ
ಮುನ್ಸೂಚನೆ.
 
10. ಕಪ್ಪು ಬಿಳುಪಿನ
ಹುಣ್ಣಿಮೆಯಂತಹ
ಅವನ ಕಂಗಳಲ್ಲಿ
ಬಾಳ ರಂಗಿನ ಬೆಳಗು.. !
 

12 ಕಾಮೆಂಟ್‌ಗಳು:

 1. ನನಗೆ ಎಲ್ಲ ಹನಿಗಳೂ ಇಷ್ಟವಾದವು ಗೆಳತಿ, ಮುಖ್ಯವಾಗಿ ಮೂರನೇದು.
  ಬದುಕಿನಲ್ಲಿ ನಮಗಾಗಿ ಯಾರಾದರೂ ಇದ್ದಾರೆ ಎನ್ನುವ ಧೈರ್ಯವೂ ಅಪರೂಪವೇ ಈ ದಿನಗಳಲ್ಲಿ ಅಲ್ಲವೇ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಬದರಿ ಸರ್..
   ಮೂರನೆಯದರ ಮೇಲೆ ನನ್ನ ನಂಬಿಕೆ ಆಗಾಧ.. ಮತ್ತೊಮ್ಮೆ ಧನ್ಯವಾದ..

   ಅಳಿಸಿ
 2. Chandavide hanigavanagalu. 6yaddannu odidaga band mugulnage naguvaagi habbuvudannu officelloo tadedukollalagada paadu nannadu. Heege irali


  Keep writing sushma. :-)

  ಪ್ರತ್ಯುತ್ತರಅಳಿಸಿ


 3. ಬಾಳೆ ಎಳೆಯಲ್ಲಿ ಮಾಡಿದ ಅಡಿಗೆಯನ್ನು ಬಡಿಸುತ್ತಾ ಹೋದ ಹಾಗೆ ಒಂದೊಂದು ಒಂದೊಂದು ಪರಿಮಳ.. ಕೆಲವು ಖಾರ ಕೆಲವು ಸಿಹಿ ಕೆಲವು ಸಿಹಿ ಖಾರದ ಮಿಶ್ರಣ, ಕೆಲವು ಹುಳಿ ಹೀಗೆ ಎಲ್ಲವೂ ಎಲೆಯಲ್ಲಿ ಮಿಳಿತವಾಗಿ ಸುಂದರ ಭೋಜನ ಹೊಟ್ಟೆಗೆ ಸೇರುತ್ತದೆ..

  ಹಾಗೆಯೇ ನೀ ಕೊಡವಿದ ಪ್ರತಿ ಹನಿಗಳು ಒಂದೊಂದು ಭಾವ ಪೂರಿತ ಭೋಜನ.. ಪ್ರತಿಯೊಂದು ಒಂದು ಭಿನ್ನ ಕಥೆಯನ್ನು ಹರಡಿಕೊಂಡೆ ಬಳಿಗೆ ಬಂದು ಹೃದಯ ಸೇರುತ್ತದೆ.. ಸೂಪರ್ ಪುಟ್ಟಿ ಸುಷ್ಮಾ.. ಸೂಪರ್ ಇಷ್ಟವಾಯಿತು.. ಅದರಲ್ಲೂ

  "ಬದುಕಿನ
  ಬಣ್ಣಗಳೇ
  ಈ ಹನಿಗಳು ಎಂದೇ..
  ಹನಿ ಕಣ್ಣಿನದ್ದಾ..? ಇಬ್ಬನಿಯದ್ದಾ..?
  ಪ್ರಶ್ನಿಸಿದ..!"

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು..
   ನಿಮ್ಮ ಕಾಮೆಂಟ್ ಗಳು ಪಾಸಿಟಿವ್ ಎನರ್ಜಿಯಾ ಟಾನಿಕ್ ಇದ್ದ ಹಾಗೆ...

   ಅಳಿಸಿ
 4. ಸುಷ್ಮಾ ಮೇಡಂ ನಿಮ್ಮ ಬ್ಲಾಗಿಗೆ ಭೆೇಟಿ ನೀಡಿದ್ದು ಆಕಸ್ಮಿಕವಾದರುೂ ಎಲ್ಲಾ ಕವನಗಳು ಮನಮುಟ್ಟುವಂತೆ ಬರೆದಿದ್ದೀರಿ, ನಿಮ್ಮ ಭಾವಾಭಿವ್ಯಕ್ತತೆ ತುಂಬಾ ಹತ್ತಿರ ಮನಸ್ಸಿಗೆ ಬಹಳ ಹತ್ತಿರ. ನಿಮ್ಮ ಇನ್ನೊಂದು ಬ್ಲಾಗ್ ಕನಸು ಕಂಗಳ ತುಂಬಾ...ಬರಹಗಳು ಸಹಜ ಭಾವನೆಗಳಿಗೆ ಹತ್ತಿರವಾಗಿ ಕಾಡುವ ಹಾಗಿವೆ..... ದುಯಮಾಡಿ ಬರವಣಿಗೆ ಮುಂದುವರಿಸಿ ಆಗಿಂದಾಗ್ಗೆ ಬರ್ತಿರ್ತೀನಿ....
  ನನ್ನದೂ ಒಂದು ಬ್ಲಾಗ್ ಇದೆ WWW.bidarakote.blogspot.com
  ಸಾಧ್ಯವಾದರೆ ಭೆೇಟಿ ನೀಡಿ
  .......ಉಮಾಶಂಕರ್

  ಪ್ರತ್ಯುತ್ತರಅಳಿಸಿ
 5. ಚೆಂದಿದ್ದು ಸುಷ್ಮಕ್ಕ ;-) liked the 8th one the most

  ಪ್ರತ್ಯುತ್ತರಅಳಿಸಿ