ಆಗಸ್ಟ್ 6, 2014

ಹನಿ ಹನಿ ಇಬ್ಬನಿ...!

1. ನೀ ತಿಳಿನೀರ ಕೊಳವೆಂದ
ಹೃದಯದಲ್ಲಿ ಪ್ರತಿಫಲಿಸಿದ
ಅವನ ಬಿಂಬ ತೋರಿಸಿದೆ!

 
2. ಮಳೆಯಾಗಿದೆ
ಕನಸಿನಾಗಸದ ಕಪ್ಪು
ತಿಳಿಯಾಗಿದೆ.. !

3. ಮೌನದಿಂದ
ನೋವು ಸಂಭವಿಸುವುದಾರೆ
ನಾನು ಮಾತು.
ಮಾತಿನಿಂದಾದರೆ
ನಾ ಮೌನಿ..!

4. ಹಗಲ ಹಾದಿ ತುಳಿದವರಿಗೆ
ಇರುಳೆಂದರೆ ಕುರುಡು..
ಇರುಳಲ್ಲಿ ತೆವಳಿ
ಹಗಲು ದಕ್ಕಿಸಿಕೊಂಡವರಿಗೆ
ಇರುಳು - ಹಗಲೂ ಬೆಳಕೇ!


5.
ಬದುಕ ಕಾರ್ಗತ್ತಲನ್ನೂ
ಪ್ರೀತಿಸಬೇಕು
ಬೆಳಕಿನ ದಾರಿ
ಕಂಡುಕೊಳ್ಳಬೇಕಾಗಿರುವುದು
ಅಂಧಕಾರದಲ್ಲೇ..!


6.
ಬೆಳಕಿಗೆ ನಡೆದ ದಾರಿಗೆ
ಕತ್ತಲಲ್ಲಿ ಉರುಳಿದ
ಕಂಬನಿಗಳ ಸಾಕ್ಷಿ..!


7.
ನೋವನಾಲಿಸುವ ಹೃದಯ
ಮಿಡಿತ ನಿಲ್ಲಿಸಿದಾಗ
ನೋವುಂಡ ಒಡಲು
ಮಾತ ನಿಲ್ಲಿಸುತ್ತದೆ..!

8.
ಅವನೊಬ್ಬ ಅವಳ
ಹಸಿ ಹಸಿ ತಿಂದು ಬಿಟ್ಟಿದ್ದ
ನೆತ್ತರ ಕುಡಿವ ಹಸಿ ಬಯಕೆ
ಅವಳಿಗೆ ಶುರುವಾಗಿಬಿಟ್ಟಿತ್ತು.

 
9. ನೀ ನನ್ನೆಲ್ಲಾ
ನೋವುಗಳಿಗೆ ಪರಿಹಾರ
ಆಗಲೆಬೇಕೆಂದೆನಿಲ್ಲಾ
ಸಮಾಧಾನವಾಗು
-atleast..!
 
10.ಬಳಸಿಕೊಳ್ಳುವ
ಹಕ್ಕಿಲ್ಲ
ಒಲಿಸಿಕೊಳ್ಳದ ವಿನಃ. 

9 ಕಾಮೆಂಟ್‌ಗಳು:

 1. ನೋಡಿದ, ಅನುಭವಿಸಿದ ಮತ್ತು ಜೀವಿಸಿದ ಬದುಕಿನ ಸಾರ ಸಂಗ್ರಹದಂತಿದೆ ಈ ಹನಿಗಳು.

  Ultimate:
  ಬಳಸಿಕೊಳ್ಳುವ
  ಹಕ್ಕಿಲ್ಲ
  ಒಲಿಸಿಕೊಳ್ಳದ ವಿನಃ.

  ಪ್ರತ್ಯುತ್ತರಅಳಿಸಿ
 2. Ishta adavu sushma...

  Hagal haadi thulidavarige irulendare kurudu
  Irulali teveli hagal dhakkisikondavarige
  Irulu- hagalu belake!

  Tumba ishra ayithu..

  ಪ್ರತ್ಯುತ್ತರಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ಭಾವ ಎಂಬ ಮಣಿಯನ್ನು ಒಂದೊಂದೇ ಪೋಣಿಸುತ್ತಾ ಹೋದಾಗ ಸುಂದರ ಮಾಲೆ ಸಿದ್ಧ.... ಪ್ರತಿ ಮಾಲೆಯು ಒಂದೊಂದು ಭಾವ ಉಗಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ

  ನಿನ್ನ ಪ್ರತಿ ಹನಿಯಲ್ಲಿಯೂ ಕಾಣುವ ಆ ಭಾವ ತವಕ, ಅನಿಸಿದ್ದನ್ನು ಅಕ್ಷರಗಳಲ್ಲಿ ಬರೆದುಬಿಡುವ ಹಸಿವು... ಆ ಹಸಿವಿನಿಂದ ಒಡಮೂಡುವ ಭಾವ ಸಂಕುಲ ಆಹಾ ಪ್ರತಿ ಯೊಂದು ಸಂಗ್ರಹಯೋಗ್ಯ

  ಸೂಪರ್ ಪಿ ಎಸ್

  ಪ್ರತ್ಯುತ್ತರಅಳಿಸಿ