ಆಗಸ್ಟ್ 19, 2014

ಹನಿ ಹನಿ ಇಬ್ಬನಿ..

1.ಕೋಪವೂ ನಿಷ್ಕ್ರೀಯ
ಅಸಹಾಯಕತೆಯ
ಮಡಿಲಲ್ಲಿ...!

2. ಒಲವ ಘಾಸಿಗಳನ್ನು
ಸೈರಿಸಿಕೊಳ್ಳಲೇಬೇಕು
ಬದುಕು ಒಲವಿಗಿಂತ
ತೀವ್ರವಾಗಿರುತ್ತದೆ..!


3. ಉಳಿಸಿಕೊಳ್ಳಬೇಕಾದರೆ
ಕಳೆದೊಮ್ಮೆ ಗೊತ್ತಿರಬೇಕು
ಅದು ಬಲವೇ ಆದರೂ
ಒಲವೇ ಆದರೂ...!
 
4.ಗೆಲುವಿನೂರಿಗೆ
ಪಯಣವಿಟ್ಟ ಮೊದಲದಿನ
ಹೀನಾಯ ಸೋಲನ್ನ ಅಪ್ಪಿದ್ದೆ
-ಒಪ್ಪಿದ್ದೆ..!


5. ನೀ ನನ್ನೊಳಗೆ
ಹನಿಯುವುದು ಬೇಡಿತ್ತು
ಒಣ ಬಂಜರಾಗಿಯೇ
ಇದ್ದುಬಿಡುತ್ತಿದ್ದೆ -ಮೊದಲಿನಂತೆ.
ಹನಿದು ದೂರವಾಗಿದ್ದಿಯಾ
ದಾಹ ಶುರುವಾಗಿದೆ!
 
6.ಎಲ್ಲೊ ಓದಿದ್ದೆ
ಸೋತವನು ಗೆಲ್ಲಬಲ್ಲ
ನೆನಪಾಯಿತು
-ನಾನು ಸೋತಿದ್ದೇ ಒಲವಲ್ಲಿ!
 
7. ಕಬ್ಬಿನ ಬಗ್ಗೆ
ಕವಿತೆ ಬರೆದ ಕವಿಯ
ಮೆಚ್ಚಿದಳು.
ಅವ ರಸಹೀರಿ ಕಳಿಸಿದ!
 
8.ಇರುಳ ಹೆಜ್ಜೆಯ 
ಭರಿಸಲು
ಬೆಳಕೇ ಬೇಕಿಲ್ಲಾ
ಅಂತರಾತ್ಮದ ಕಿಡಿಯೂ ಸಾಕು!
 
9. ಒಡಲಲ್ಲಿ ಕೆಂಡ ಕಟ್ಟಿಕೊಂಡು
ಓಡಾಡುತ್ತಿದ್ದೇನೆ
ಪಾಪಾ..!
ತುಟಿಗದು ಗೊತ್ತಿಲ್ಲಾ...
 
10. ಮನದಂಗಳದ
ಕಣ್ಣೀರಹೊಳೆ ಹೆಪ್ಪುಗಟ್ಟಿ
ಕೂತಿರಬೇಕಾದರೆ
ಬಿರಿದ ತುಟಿಯಲ್ಲಿ
ಆತ್ಮನಿಲ್ಲ.. ! 
 


14 ಕಾಮೆಂಟ್‌ಗಳು:

 1. ಮತ್ತೆ ಮತ್ತೆ ಕಾಡಿ ಬರಸೆಳೆಯುವ ಹನಿ ಮುತ್ತುಗಳು.. ಒಮ್ಮೆ 'ಹನಿದು' ದೂರವಾಗಬೇಡ .. ದಾಹ ಶುರುವಾಗಿದೆ!
  ಮತ್ತಷ್ಟು ಬರಲಿ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹುಸ್ಸೇನ್...
   ಬಹಳ ದಿನಗಳ ಮೇಲಿನ ಬೇಟಿ.. :)
   ಧನ್ಯವಾದಗಳು :)

   ಅಳಿಸಿ
 2. ಇಲ್ಲಿನ ಹತ್ತು ಹನಿಗಳು ಹಲವು ಆಯಾಮಗಳ ಚಿತ್ರ.
  ಕಬ್ಬಿನ ಕವಿ ಹನಿ ರೋಚಕವಾಗಿದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಸಾರ್‍.. ನಿಮ್ಮ ಮೆಚ್ಚುಗೆ ನನಗೆ ಶಕ್ತಿ :)

   ಅಳಿಸಿ
 3. "ಕಬ್ಬಿನ ಬಗ್ಗೆ
  ಕವಿತೆ ಬರೆದ ಕವಿಯ
  ಮೆಚ್ಚಿದಳು.
  ಅವ ರಸಹೀರಿ ಕಳಿಸಿದ!

  ಗರಗಸದಂತೆ ಇರುವ ಪ್ರತಿ ಹನಿಯು ಎರಡು ಬಾರಿ ಕತ್ತರಿಸುತ್ತದೆ.. ಹೋಗುವಾಗಲು ಬರುವಾಗಲೂ..ಭುವಿಯ ಆಳದಲ್ಲಿ ಉಗವಾದ ಲಾವ ಸ್ಪೋಟಗೊಳ್ಳುವಾಗ ಬರುವ ಆ ರಭಸ ಪ್ರತಿ ಹನಿಯಲ್ಲಿಯೂ ಇದೆ

  ಅದು ಹೇಗೆ ಬರೆಯುತ್ತೀಯ ಇಷ್ಟು ತೀವ್ರವಾಗಿ ಎನ್ನುವ ಅಚ್ಚರಿ ಮೂಡುತ್ತದೆ.. ನಗುತ್ತಲೇ ಮಾತಾಡುವ ನೀನು ಬರೆಯುವಾಗ ಮಾತ್ರ ರಭಸ ಹೊಂದಿಬಿಡುತ್ತೀಯ.. ಇಬ್ಬನಿ ಒಂದು ಒಂದು ಎಂದು ಸೇರುತ್ತಲೇ ಸುತ್ತಲ ಪ್ರದೇಶವನ್ನು ಆವರಿಸುವಾ ಹಾಗೆ ನಿನ್ನ ಪ್ರತಿ ಹನಿಗಳು ಮನವನ್ನು ಆಕ್ರಮಿಸಿಬಿಡುತ್ತವೆ

  ಕ್ಲಾಸ್ ಪಿ ಎಸ್ ಸೂಪರ್ ಸೂಪರ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. "ನಗುತ್ತಲೇ ಮಾತಾನಾಡುವ ನೀನು, ಬರೆವಾಗ ರಭಸ ಹೊಂದಿಬಿಡುತ್ತೀಯ... "
   ಹೌದಾ..?!
   ಮತ್ತೆ ಮತ್ತೆ ಯೋಚಿಸುತ್ತಿದ್ದೇನೆ...

   ನಿಮ್ಮ ಪ್ರೋತ್ಸಾಹಕ್ಕೆ, ಪ್ರೀತಿಗೆ ಚಿರ‌ಋಣಿ :)

   ಅಳಿಸಿ