ಡಿಸೆಂಬರ್ 6, 2014

ಹನಿ ಹನಿ ಇಬ್ಬನಿ..!

1. ಬೆಳದಿಂಗಳಿಗೆ
ಮೈಚೆಲ್ಲಿ ಮಲಗಿದ್ದ ಅವಳನ್ನು
ಅನಾಮತ್ತು ಎತ್ತಿಕೊಂಡು
ಒಳಗೆ ಹೋದ ಅವನಿಗಿದ್ದಿದ್ದು
ಚಂದ್ರನ ಮೇಲೆ ಮತ್ಸರವಾ..?

2. ಹುಡುಗಾ...!
ಭೌತಶಾಸ್ತ್ರದಲ್ಲಷ್ಟೇ
ವಿದ್ಯುತ್ ಪ್ರವಹಿಸುವುದು ಎಂದುಕೊಂಡಿದ್ದೆ.
ನೀನೊಮ್ಮೆ ಸ್ಪರ್ಶಿಸಿದ ಮೇಲಷ್ಟೇ
ಜೀವವಿಜ್ಞಾನದಲ್ಲೂ ವಿದ್ಯುತ್ ಪ್ರವಹನವಿರುವ
ಸಂಗತಿ ತಿಳಿದದ್ದು.

3. ಅನೈತಿಕ ಸಂಬಂಧವೆಂದರೆ

ಬರಗೆಟ್ಟ ಬರಗಾಲದ ದಿನಗಳಲಿ
ಮಳೆಗೆ ಹೊಂಚು ಹಾಕಿ
ಕೂತ ಇಳೆಯೊಡಲ ಬೆಂಕಿ
ಷವರಿನಡಿಯಲ್ಲಿ ನಿಂತು
ಧಗೆ ತೀರಿಸಿಕೊಳ್ಳುವುದು ಅಷ್ಟೇ!

4. ನೀ ಕೊಟ್ಟ
ಯಾವುದನ್ನೂ ನಾ ಹಿಂದಿರುಗಿಸಿಲ್ಲ
ಪ್ರೀತಿಯನ್ನೂ ..!?
ಅದಕ್ಕೆ ನನ್ನೊಡಲಿಗೆ
ನೋವು ಸುರಿದು ಹೋಗಿ ಬಿಟ್ಟೆಯಾ?

5.ಪ್ರೇಮದೊಡಲ ಸೇರೋ ತವಕಕ್ಕೆ
ಒಂದೇ ಉಸಿರಿನಲ್ಲಿ

ಧಾವಿಸಿ ಬಂದು

ಶರಧಿಯೊಳಗೆ ಲೀನವಾದ

ನದಿಗೀಗ ಅಸ್ವಿತ್ವದ ಹಂಗಿಲ್ಲ


18 ಕಾಮೆಂಟ್‌ಗಳು:

 1. ಅನೈತಿಕ ಸಂಬಂಧವೆಂದರೆ
  ಬರಗೆಟ್ಟ ಬರಗಾಲದ ದಿನಗಳಲಿ
  ಮಳೆಗೆ ಹೊಂಚು ಹಾಕಿ
  ಕೂತ ಇಳೆಯೊಡಲ ಬೆಂಕಿ
  ಷವರಿನಡಿಯಲ್ಲಿ ನಿಂತು
  ಧಗೆ ತೀರಿಸಿಕೊಳ್ಳುವುದು ಅಷ್ಟೇ!
  .....
  ಇಷ್ಟವಾಯಿತು....

  ಪ್ರತ್ಯುತ್ತರಅಳಿಸಿ
 2. ಅನೈತಿಕ ಸಂಬಂಧವೆಂದರೆ
  ಬರಗೆಟ್ಟ ಬರಗಾಲದ ದಿನಗಳಲಿ
  ಮಳೆಗೆ ಹೊಂಚು ಹಾಕಿ
  ಕೂತ ಇಳೆಯೊಡಲ ಬೆಂಕಿ
  ಷವರಿನಡಿಯಲ್ಲಿ ನಿಂತು
  ಧಗೆ ತೀರಿಸಿಕೊಳ್ಳುವುದು ಅಷ್ಟೇ!
  .....
  ಇಷ್ಟವಾಯಿತು....

  ಪ್ರತ್ಯುತ್ತರಅಳಿಸಿ
 3. ಎಲ್ಲವೂ ಚಂದವೇ... ಒಂದು ಪ್ರೀತಿಯ ಮತ್ಸರ ಚಂದ್ರನ ಮೇಲಲ್ಲ.... ನಿನ್ನ ಮೇಲೆ..!!

  ಪ್ರತ್ಯುತ್ತರಅಳಿಸಿ
 4. ಅನೈತಿಕ ಸಂಬಂಧವೆಂದರೆ
  ಬರಗೆಟ್ಟ ಬರಗಾಲದ ದಿನಗಳಲಿ
  ಮಳೆಗೆ ಹೊಂಚು ಹಾಕಿ
  ಕೂತ ಇಳೆಯೊಡಲ ಬೆಂಕಿ
  ಷವರಿನಡಿಯಲ್ಲಿ ನಿಂತು
  ಧಗೆ ತೀರಿಸಿಕೊಳ್ಳುವುದು ಅಷ್ಟೇ!
  spiritual...
  ನೀ ಕೊಟ್ಟ
  ಯಾವುದನ್ನೂ ನಾ ಹಿಂದಿರುಗಿಸಿಲ್ಲ
  ಪ್ರೀತಿಯನ್ನೂ ..!?
  ಅದಕ್ಕೆ ನನ್ನೊಡಲಿಗೆ
  ನೋವು ಸುರಿದು ಹೋಗಿ ಬಿಟ್ಟೆಯಾ?
  this one tooo...
  this is ultimate...
  ಬೆಳಂದಿಗಳಿಗೆ
  ಮೈಚೆಲ್ಲಿ ಮಲಗಿದ್ದ ಅವಳನ್ನು
  ಅನಾಮತ್ತು ಎತ್ತಿಕೊಂಡು
  ಒಳಗೆ ಹೋದ ಅವನಿಗಿದ್ದಿದ್ದು
  ಚಂದ್ರನ ಮೇಲೆ ಮತ್ಸರವಾ..?

  ಪ್ರತ್ಯುತ್ತರಅಳಿಸಿ
 5. ಅನೈತಿಕ ಸಂಬಂಧವೆಂದರೆ
  ಬರಗೆಟ್ಟ ಬರಗಾಲದ ದಿನಗಳಲಿ
  ಮಳೆಗೆ ಹೊಂಚು ಹಾಕಿ
  ಕೂತ ಇಳೆಯೊಡಲ ಬೆಂಕಿ
  ಷವರಿನಡಿಯಲ್ಲಿ ನಿಂತು
  ಧಗೆ ತೀರಿಸಿಕೊಳ್ಳುವುದು ಅಷ್ಟೇ!
  liked it.

  ಪ್ರತ್ಯುತ್ತರಅಳಿಸಿ
 6. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 7. ಸುಷ್ ನಿಮ್ಮ ಬ್ಲಾಗ್ ಬರಹಗಳು ಕಾಣೆಯಾದವು ಎಂದುಕೊಳ್ಳುವ ಕಾಲಕ್ಕೆ ಮತ್ತೆ ವರ್ಷಧಾರೆಯಾಗಿದೆ.. ಆಪ್ತ, ಆತ್ಮೀಯ ಮತ್ತು ಆತ್ಮಗತ ಪದ್ಯಗಳು. ಒಂದಷ್ಟು ಬಿಸುಪು, ಒಯ್ಯಾರ ಮತ್ತು ಬೋಲ್ಡ್ ಎನಿಸುವಭಿವ್ಯಕ್ತಿಗಳು, ಗುಡ್ :-)

  - ಪ್ರಸಾದ್.ಡಿ.ವಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಾನೂ ತುಂಬಾ ಮಿಸ್ ಮಾಡಿಕೊಂಡೆ ಅನಿಸಿತು... ಥಾಂಕ್ಯೂ ಪ್ರತಿಬಾರಿಯೂ ಇದೇ ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುವುದಕ್ಕೆ :)

   ಅಳಿಸಿ
 8. ಮೆಟ್ಟಿಲುಗಳನ್ನು ಹತ್ತಿದ ಹಾಗೆ ಹೊಸದೊಂದು ಜಗತ್ತು ಕಾಣುವ ಚಾರಣದ ಅನುಭವ ಕೊಡುವ ಈ ಕವನಗಳ ಮಾಲೆ ಸೊಗಸಾಗಿದೆ.
  ಮೊದಲ ಮೆಟ್ಟಿಲು ಪ್ರೇಮ ಮತ್ಸರ ಎನ್ನಿಸಿದರೆ
  ಎರಡನೇ ಹಂತ ಪ್ರೇಮ ವಾತ್ಸಲ್ಯದ ಇನ್ನೊಂದು ಹಂತ
  ಮೂರನೆಯ ಏಣಿಯ ಮಜಲು ಕಾಮದ ಸೊಡರಿಗೆ ಸಿಕ್ಕ ದೀಪವಾದರೆ
  ನಾಲ್ಕನೆಯ ಪಾವಟಿಗೆ ನೊಂದ ಜ್ಯೋತಿಗೆ ನಿರಾಸೆಯ ನೀರು
  ಸಂಗಮ ಸಂಗಮ ಅನುರಾಗ ತಂದ ಸಂಗಮ ಎನ್ನುವಂತೆ ವಿಲೀನದಲ್ಲಿ ಅಸ್ತಿತ್ವದ ಅಂಕೆ ಶಂಕೆ ಕಾಡುತ್ತದೆ

  ಪ್ರತಿ ಅಕ್ಷರವನ್ನು ಬಸಿದು ಸಾಕ್ಷಾತ್ಕರಿಸಿ ಕೊಂಡು ಸುರಿಯುವ ಆ ಪದಾಮೃತಗಳಿಗೆ ಶರಣು..

  ಸೂಪರ್ ಇಷ್ಟವಾಯಿತು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿಯೊಂದು ಹನಿಯನ್ನು ಇಷ್ಟಪಟ್ಟಿದ್ದಕ್ಕೆ, ವಿಶ್ಲೇಷಿಸಿದ್ದಕ್ಕೆ ಧನ್ಯವಾದಗಳು..

   ಅಳಿಸಿ
 9. ಎಷ್ಟು ಚೆನ್ನಾಗಿ ಬರೆದಿದ್ದೀರ ಮೊದಲ ಹನಿಯಲ್ಲೇ ನೆನೆದು ಬಿಟ್ಟೆ,
  ಇನ್ನು ಒಣಗುವ ಮಾತೆಲ್ಲಿ?
  ಸುಂದರವಾದ ಹನಿಗಳು ಮತ್ತಷ್ಟು ಮೂಡಲಿ.....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನೀವು ಹೀಗಂದುಬಿಟ್ಟರೆ ಹೇಗೆ ಜೀ..?
   ಧನ್ಯವಾದಗಳು..ಪ್ರೋತ್ಸಾಹಕ್ಕೆ ಋಣಿ..

   ಅಳಿಸಿ
 10. ಅಹ್ಹಾ... ಭಾವದೊರತೆಗಳು ಮನಸ್ಸಿಗೆ ಮುದ ನೀಡುತ್ತದೆ.. ಕ್ಷಣದ ಭಾವಗಳಿಗೆ ಬಣ್ಣ ಹಚ್ಚುವ ನಿನ್ನ ಅಹ್ಹಾ... ಭಾವದೊರತೆಗಳು ಮನಸ್ಸಿಗೆ ಮುದ ನೀಡುತ್ತದೆ.. ಕ್ಷಣದ ಭಾವಗಳಿಗೆ ಬಣ್ಣ ಹಚ್ಚುವ ನಿನ್ನ ಕುಸುರಿಮೇಲೆ ನನಗೆ ಅಸೂಯೆ ಮಾರಾಯ್ತಿ...

  ಮೌನರಾಗ ಇತ್ತೀಚೆಗೆ ಗಾಢ ಮೌನಕ್ಕೆ ಸರಿದಿದೆ.. ಇನ್ನಷ್ಟು ಹನಿಗಳ ಕಲರವ ಮೂಡಲಿ ..
  Hussain

  ಪ್ರತ್ಯುತ್ತರಅಳಿಸಿ