ಡಿಸೆಂಬರ್ 24, 2014

ಹನಿ ಹನಿ ಇಬ್ಬನಿ...!

1.ಬೆಳಂದಿಗಳ ತಂಪು ರಾತ್ರಿ
ಹುಡುಗಿ ಬೆಚ್ಚಗಿನ ಕನಸು ಹೆಣೆಯುತ್ತಿದ್ದಳು
ಒಳಗಿನ ಕೋಣೆಯ ಹುಡುಗಾ
ಧಗಧಗ ಉರಿಯುತ್ತಿದ್ದ..!

2.ನಿನ್ನಿಂದ ನಿರಾಕರಿಸಲ್ಪಟ್ಟ ಪ್ರೇಮ
ಮತ್ತು
ನನ್ನಿಂದ ನಿರಾಕರಿಸಲ್ಪಡುವ ನೋವುಗಳದ್ದು
ಒಂದೇ ತೂಕ..!

3. ಅವ
ಬೆಟ್ಟದ ತುದಿಯಲ್ಲಿ
ನನ್ನ ನೆನೆದನಂತೆ
ನನಗಿಲ್ಲಿ ಥಂಡಿ -ಜ್ವರ -ನೆಗಡಿ -ಕೆಮ್ಮು !

4. ಬಾಂಬ್ರರ ಮನೆಹುಡುಗನಿಗೆ
ಸಸ್ಯಹಾರದ ಪಾಠ ನಡೆಯುತ್ತಿತ್ತು
ಬೇಲಿಯಾಚೆ ಕಣ್ಣು ನೆಟ್ಟಿದ್ದ ಅವ
ಹೊಲತಿಯ ಬೆತ್ತಲಾಗಿಸುತ್ತಿದ್ದ!

5. ಒಂಟಿ ಮರದ ಗೆದ್ದಲ ಕೊಂಬೆಗೆ
ಹಕ್ಕಿ ಗೂಡು ಕಟ್ಟಲಿ
ನಾ ಚಿಲಿಪಿಲಿ ಕೇಳುತ್ತೇನೆಂಬ
ಹುಚ್ಚುಚ್ಚು ಹಂಬಲ!2 ಕಾಮೆಂಟ್‌ಗಳು:


  1. ​ಅತ್ತ ಇತ್ತ ಸುತ್ತಾ ಮುತ್ತ ಕಪ್ಪು ಕಟ್ಟಲು (ಕತ್ತಲು ಅಲ್ಲಾ). ಬೆಳಕನ್ನ ಅರಸಿಕೊಂಡು ಹೋಗುವ ಒಂದು ತಿರುವುಗಳು ಪ್ರತಿ ಹನಿಯಲ್ಲೂ ಇಣುಕುತ್ತದೆ ಪ್ರತಿ ಹನಿಗಳನ್ನು ಉಲ್ಟಾ ಓದಿದಾಗ.

    ಇದು ಒಂದು ರೀತಿಯ ಎರಡು ಆಯಾಮದ ಹನಿಗಳು.. ಆರಂಭದಿಂದ ಕೊನೆತನಕ ಓದಿದಾಗ ಒಂದು ರೀತಿಯ ಅನುಭವ.. ಕೊನೆಯಿಂದ ಮೊದಲಿಗೆ ಬಂದರೆ ಇನ್ನೊಂದು ರೀತಿಯ ಅನುಭವ.

    ನಿನ್ನ ಬರಹದ ತಾಕತ್ತಿಗೆ ಶರಣು ಪಿ ಎಸ್.. ಪ್ರತಿ ಹನಿಗಳು ಸೂಪರ್. .. ಕಡೆಯ ಹನಿ ಆಶಾಭಾವದ ಕಡಲಿಗೆ ಇನ್ನಷ್ಟು ಅಲೆಗಳನ್ನು ತುಂಬಿ ಸುಂದರವನವನ್ನಾಗಿ ಮಾಡಲು ಪ್ರೇರೇಪಿಸುತ್ತದೆ.. ಹಾಟ್ಸ್ ಆಫ್

    ಪ್ರತ್ಯುತ್ತರಅಳಿಸಿ